BelgaumDistrictsKarnatakaLatestMain Post

ಬಿಜೆಪಿ ಸರ್ಕಾರದ ಸಚಿವರಿಗೆ ಬಿಜೆಪಿ ಶಾಸಕರಿಂದಲೇ ಶಾಕ್..!

ಬೆಳಗಾವಿ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಸಚಿವರಿಗೆ ಶಾಕ್ ನೀಡಿದ್ದಾರೆ. ಬಿಜೆಪಿ ಶಾಸಕರ ಎಚ್ಚರಿಕೆಗೆ ಸಚಿವರು ಬೆಚ್ಚಿಬಿದ್ದಿದ್ದಾರೆ.

ಸಚಿವರು ಶಾಸಕರಿಗೆ ಸರಿಯಾಗಿ ಸ್ಪಂದಿಸದಿದ್ದರೆ ಧರಣಿ ಮಾಡಬೇಕಾಗುತ್ತದೆ ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಶಾಸಕರು ಎಚ್ಚರಿಕೆ ನೀಡಿದ್ದರು.

ನಿನ್ನೆ ರಾತ್ರಿ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಶಾಸಕರು ನೇರವಾಗಿಯೇ ಸಚಿವರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನಮ್ಮಿಂದ ಸಚಿವರಾಗಿರೋದು, ನೀವು ಮೇಲಿಂದ ಇಳಿದು ಬಂದಿಲ್ಲ- ಮಿನಿಸ್ಟರ್ಸ್ ವಿರುದ್ಧ ಶಾಸಕರ ಆಕ್ರೋಶ

ಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಬಳಿಕ ಕೆಲ ಶಾಸಕರ ಬಳಿ ಕೆಲ ಸಚಿವರು ಬಂದು ಮಾತುಕತೆ ನಡೆಸಿ ಸಮಾಧಾನಪಡಿಸಲು ಯತ್ನಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Leave a Reply

Your email address will not be published.

Back to top button