ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ವಿರುದ್ಧವೇ ಕೆಲವು ಶಾಸಕರು ತಿರುಗಿಬಿದ್ದ ಪ್ರಸಂಗ ನಡೆದಿದೆ.
ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಶಾಸಕರು ಹಲವು ವಿಚಾರಗಳ ಪ್ರಸ್ತಾಪಿಸಿದ್ದಾರೆ. ಈ ವೇಳೆ ಸಚಿವರ ನಡವಳಿಕೆ ಸರಿಪಡಿಸಿಕೊಳ್ಳುವಂತೆ ಆಕ್ರೋಶ ಕೂಡ ಹೊರಹಾಕಿದ್ದಾರೆ.
Advertisement
Advertisement
ನಮ್ಮಿಂದ ಸಚಿವರಾಗಿರೋದು, ನೀವು ಮೇಲಿಂದ ಇಳಿದು ಬಂದಿಲ್ಲ. ಆಡಳಿತ ಪಕ್ಷದ ಶಾಸಕರ ಜೊತೆ ಸರಿಯಾಗಿ ನಡೆದುಕೊಳ್ಳಿ. ಕಾರ್ಯಕರ್ತರಿಂದ ನಾವು ಶಾಸಕರಾಗಿರೋದು, ನಮ್ಮಿಂದ ನೀವು ಸಚಿವರಾಗಿರೋದು. ನಡವಳಿಕೆ ಸರಿಪಡಿಸಿಕೊಳ್ಳದಿದ್ದರೇ ಬಹಿರಂಗವಾಗಿಯೇ ತಿರುಗಿಬೀಳಬೇಕಾಗುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಯತ್ನಾಳ್, ರೇಣುಕಾಚಾರ್ಯ ಮಾತನಾಡುವಾಗ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮೌನವಾಗಿಯೇ ಕುಳಿತಿದ್ದರು. ಇದನ್ನೂ ಓದಿ: ನಮ್ಮಂತವರನ್ನು ನೆಗ್‍ಲೆಕ್ಟ್ ಮಾಡ್ತಾರೆ, ಬೇಕಾದಾಗ ಕರೀತಾರೆ ಬೇಡವಾದ್ರೆ ಕರಿಯಲ್ಲ: ಯತ್ನಾಳ್
Advertisement
Advertisement
ಇದೇ ವೇಳೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 50 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು. 50 ಕೋಟಿ ಸಾಕಾಗಲ್ಲ. 100 ಕೋಟಿ ನೀಡಿ ಎಂದು ಶಾಸಕರ ಪಟ್ಟು ಹಿಡಿದರು. ಎಸ್‍ಸಿ, ಎಸ್‍ಟಿ ಅನುದಾನ ಕಡಿತ ಮಾಡಬೇಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಗುಡ್ಡಕ್ಕೆ ಶಕ್ತಿ ಹೊರುವ ತಾಕತ್ತು ಇದೆ ಬಿಡಿ – ಸೋಲಿನ ಆರೋಪಕ್ಕೆ ರಮೇಶ್ ಖಡಕ್ ಉತ್ತರ
ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿದ್ದ ಅಧಿಕಾರಿಗಳನ್ನು ಬದಲಿಸಿ ಅಂತಲೂ ಆಗ್ರಹಿಸಿದರು. ಸಭೆಯಲ್ಲಿ ಕೆಲ ಶಾಸಕರಿಂದ ಅಧಿಕಾರಿಗಳ ಬದಲಾವಣೆಗೆ ಆಗ್ರಹ ಕೇಳಿಬಂತು. ಅಲ್ಲದೆ ಬಿಜೆಪಿ ಸರ್ಕಾರ ಅಂತ ತೋರಿಸಿ ಎಂದು ಕೆಲ ಶಾಸಕರು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಧಾನಸಭೆಯಲ್ಲಿ ಮೂರು ವಿಧೇಯಕಗಳ ಮಂಡನೆ – ಇನಾಮು ಭೂಮಿ ಸಾಗುವಳಿದಾರರಿಗೆ ಗುಡ್ ನ್ಯೂಸ್