Advertisements

ಕಿರುತೆರೆ ಖ್ಯಾತ ನಟಿ ದೀಪಾ ಜತೆ ಮೇ.18ಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಮದುವೆ

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ, ಖ್ಯಾತ ನಟ ಸುನೀಲ್ ಪುರಾಣಿಕ್ ಪುತ್ರ, ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಮದುವೆ ಇದೇ ಮೇ 18 ರಂದು ಧಾರವಾಡದಲ್ಲಿ ನಡೆಯಲಿದೆ. ಕಿರುತೆರೆ ಖ್ಯಾತ ನಟಿ ದೀಪಾ ಜಗದೀಶ್ ಜತೆ ಸಾಗರ್ ಅಂದು ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ಕಿರುತೆರೆ ಮತ್ತು ಹಿರಿತೆರೆಯ ಸಿಲೆಬ್ರಿಟಿಗಳಿಗೆ ಪುರಾಣಿಕ್ ಕುಟುಂಬ ಆಹ್ವಾನ ಪತ್ರಿಕೆಯನ್ನು ನೀಡಲಾಗುತ್ತಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

Advertisements

ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ದೀಪಾ ಜಗದೀಶ್ ಮತ್ತು ಸಾಗರ್ ಪುರಾಣಿಕ ಭೇಟಿಯಾಗಿದ್ದು ‘ಮಹಾಸತಿ’ ಧಾರಾವಾಹಿಯಲ್ಲಿ. ಸ್ನೇಹಿ ಪ್ರೀತಿಗೆ ತಿರುಗಿ ಆನಂತರ ಎರಡೂ ಕುಟುಂಬಗಳು ಒಪ್ಪಿಕೊಂಡು ಅದ್ಧೂರಿಯಾಗಿ ಮದುವೆ ಮಾಡುತ್ತಿವೆ. ಈಗಾಗಲೇ ಈ ಜೋಡಿಯು ಪ್ರಿವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅವುಗಳು ವೈರಲ್ ಕೂಡ ಆಗಿವೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

Advertisements

ಬ್ರಹ್ಮಾಸ್ತ್ರ, ಮಹಾಸತಿ ಮತ್ತು ತೆಲುಗಿನ ಪ್ರೇಮ ಸಾಗರ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ದೀಪಾ ಜಗದೀಶ್, ಕ್ರಿಟಿಕಲ್ ಕೀರ್ತನೆಗಳು ಮತ್ತು ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ ಚಿತ್ರಗಳಲ್ಲೂ ನಟಿಸಿದ್ದಾರೆ. ಬಾಲ್ಯದಿಂದಲೇ ನಟನೆಯ ಬಗೆಗಿನ ಒಲವಿನಿಂದಾಗಿ ಅವರು ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

Advertisements

ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಕಲಾವಿದರಾಗಿ ಮೊದಲು ಗುರುತಿಸಿಕೊಂಡ ಸಾಗರ್ ಪುರಾಣೀಕ್ ಆನಂತರ ನಿರ್ದೇಶನದತ್ತ ಮುಖ ಮಾಡಿದರು. ಅವರು ಕಿರುಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದರೆ, ಇತ್ತೀಚೆಗಷ್ಟೇ ನಿರ್ದೇಶನ ಮಾಡಿರುವ ಡೊಳ್ಳು ಚಿತ್ರಕ್ಕೆ ಹಲವಾರು ಅಂತಾರಾಷ್ಟ್ರೀಯ ಪುರಸ್ಕಾರಗಳು ಬಂದಿವೆ. ಇದನ್ನೂ ಓದಿ : ನಟ ಧನಂಜಯ್ ಗೆ ‘ಅಗ್ನಿ’ ಪರೀಕ್ಷೆ: ಕಾನೂನು ಹೋರಾಟ ಮಾಡ್ತೀನಿ ಅಂತಾರೆ ಜಯರಾಜ್ ಪುತ್ರ

ಮೇ 18 ರಂದು ಈ ಜೋಡಿ ಸಪ್ತಪದಿ ತುಳಿಯುತ್ತಿದ್ದರೆ, ಮೇ 28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಿನಿಮಾ ರಂಗದ ಗಣ್ಯರು, ಕಿರುತೆರೆ ಲೋಕದ ತಾರೆಯರು ಮತ್ತು ರಾಜಕೀಯ ಪಕ್ಷಗಳ ಮುಖಂಡರು ಇವರ ವಿವಾಹ ಮುಹೂತ್ಸವದಲ್ಲಿ ಭಾಗಿಯಾಗಲಿದ್ದಾರೆ.

Advertisements
Exit mobile version