ಅಹಮದಾಬಾದ್: ಗುಜರಾತ್ ಹೈ ಕೋರ್ಟ್ 2002ರ ನರೋಡಾ ಗಾಮ್ ಹತ್ಯಾಕಾಂಡ ಪ್ರಕರಣದಿಂದ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಖುಲಾಸೆಗೊಳಿಸಿದೆ. ಬಜರಂಗ ದಳದ ಮುಖಂಡ ಬಾಬು ಬಜರಂಗಿ ಗೆ ನೀಡಿದ ಶಿಕ್ಷೆಯ ತೀರ್ಪನ್ನು ಕೋರ್ಟ್ ಎತ್ತಿ ಹಿಡಿದಿದೆ.
ಪ್ರಕರಣದ ವಿಚಾರಣೆಯ ವೇಳೆ ಸಾಕ್ಷ್ಯಗಳೆಂದು ಪರಿಗಣಿಸಲಾಗಿದ್ದ 11 ಮಂದಿಗಳ ಪೈಕಿ ಯಾರೊಬ್ಬರು ಮಾಯಾ ಕೊಡ್ನಾನಿ ಈ ಗಲಾಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸದ ಹಿನ್ನೆಯಲ್ಲಿ ಕೋರ್ಟ್ ಕೊಡ್ನನಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.
Advertisement
ವಿಚಾರಣೆಯ ವೇಳೆ ಕೊಡ್ನಾನಿ ಅವರು ಪೊಲೀಸರ ಜೊತೆ ಮಾತನಾಡುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ಸಾಕ್ಷ್ಯ ನುಡಿದಿದ್ದರು. ಈ ಹಿನ್ನೆಲೆಯ ಹತ್ಯಾಕಾಂಡಕ್ಕೆ ಯಾವುದೇ ಕ್ರಿಮಿನಲ್ ಪಿತೂರಿ ಎಸಗಿಲ್ಲ ಎಂದು ಅಭಿಪ್ರಾಯಪಟ್ಟು ಕೋರ್ಟ್ ಕೊಡ್ನಾನಿ ಅವರನ್ನು ದೋಷಮುಕ್ತಗೊಳಿಸಿದೆ.
Advertisement
ಈ ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ಕೋರ್ಟ್ 2012ರಲ್ಲಿ ಮಾಯಾ ಕೊಡ್ನಾನಿ, ಬಾಬು ಬಜರಂಗಿ ಸೇರಿದಂತೆ 32 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿ 29 ಮಂದಿಯನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮಾಯಾ ಕೊಡ್ನಾನಿ ಗುಜರಾತ್ ಹೈ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಎಸ್‍ಐಟಿ ಕೋರ್ಟ್ ಗೆ ಹಾಜರಾಗಿ ಮಾಯಾ ಕೊಡ್ನಾನಿ ಪರ ಸಾಕ್ಷ್ಯ ಹೇಳಿದ ಅಮಿತ್ ಶಾ
Advertisement
ಏನಿದು ಪ್ರಕರಣ?
ಗುಜರಾತ್ ನರೋಡಾ ಗಾಮ್ ನಲ್ಲಿ ಸಾವಿರಾರು ಮಂದಿಯನ್ನು ಜಮಾಯಿಸಿ, ಪ್ರಚೋದಿಸಿ ಹತ್ಯಾಕಾಂಡ ನಡೆಸಿದ ಆರೋಪ ಮಾಯಾ ಕೊಡ್ನಾನಿ ಮೇಲಿತ್ತು. 2002ರ ಫೆಬ್ರವರಿ 28ರಂದು ಈ ಹತ್ಯಾಕಾಂಡ ನಡೆದಿದ್ದು 97 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಆರೋಪಿಗಳನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಮಾಯಾ ಅವರು ಗುಜರಾತ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಹತ್ಯಾಕಾಂಡ ನಡೆದ ವೇಳೆ ನಾನು ಆ ಸ್ಥಳದಲ್ಲಿ ಇರಲಿಲ್ಲ. ವಿಧಾನಸಭೆಯ ಅಧಿವೇಶನ ನಡೆದ ಬಳಿಕ ಸೋಲಾ ಆಸ್ಪತ್ರಗೆ ತೆರಳಿದ್ದೆ ಎಂದು ಮಾಯಾ ಕೊಡ್ನಾನಿ ನ್ಯಾಯಾಲಯಕ್ಕೆ ತಿಳಿಸಿದ್ದರು.
Advertisement
All 12 convicts have been awarded 21 years of imprisonment without remission. 11 witnesses gave different statements on Maya Kodnani's presence at the location but there were contradictions: Prashant Desai, Special Public Prosecutor on 2002 #NarodaPatiyaCase pic.twitter.com/3U5cBcRYtG
— ANI (@ANI) April 20, 2018