ನ್ಯಾಚುರಲ್ ಸ್ಟಾರ್ ನಾನಿ (Natural Star Nani) ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಸರಿಪೋಧಾ ಸನಿವಾರಮ್’ (Saripodhaa Sanivaaram) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗ ನಾನಿಗೆ ಜೋಡಿಯಾಗುವ ನಾಯಕಿಯ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಕನ್ನಡತಿ ಪ್ರಿಯಾಂಕಾ ಮೋಹನ್ (Priyanka Mohan) ಅವರು ನಾನಿಗೆ ಮತ್ತೊಮ್ಮೆ ಜೋಡಿಯಾಗಿದ್ದಾರೆ.
View this post on Instagram
- Advertisement
ಈ ಹಿಂದೆ ನಾನಿಗೆ ಹೀರೋಯಿನ್ ಆಗಿ ‘ಗ್ಯಾಂಗ್ ಲೀಡರ್’ ಎಂಬ ಸಿನಿಮಾ ಮಾಡಿದ್ದರು. ಈ ಚಿತ್ರವನ್ನು ವಿವೇಕ್ ಆತ್ರೇಯಾ ನಿರ್ದೇಶನ ಮಾಡಿದ್ದರು. ಈಗ ನಾನಿ ಮತ್ತು ಪ್ರಿಯಾಂಕಾ ಹೊಸ ಚಿತ್ರಕ್ಕೂ ಅವರೇ ನಿರ್ದೇಶನ ಮಾಡ್ತಿದ್ದಾರೆ.
- Advertisement
ಅಂದಹಾಗೆ, ಪ್ರಿಯಾಂಕಾ ಸೌತ್‌ನಲ್ಲಿ ಗುರುತಿಸಿಕೊಳ್ಳುವ ಮುನ್ನ ಕನ್ನಡದ ‘ಒಂದ್ ಕಥೆ ಹೇಳ್ಲಾ’ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ಈ ಸಿನಿಮಾ ತೆರೆಕಂಡಿತ್ತು.