Connect with us

ಸಿಲಿಕಾನ್ ಸಿಟಿಯಲ್ಲಿ ನಮ್ಮೂರ ಹಬ್ಬ-ಚುಮುಚುಮು ಚಳಿಗೆ ಕರಾವಳಿ ಖಾದ್ಯದ ರುಚಿ

ಸಿಲಿಕಾನ್ ಸಿಟಿಯಲ್ಲಿ ನಮ್ಮೂರ ಹಬ್ಬ-ಚುಮುಚುಮು ಚಳಿಗೆ ಕರಾವಳಿ ಖಾದ್ಯದ ರುಚಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿಯಾಗಿ ನಮ್ಮೂರ ಹಬ್ಬ ನಡೆಯುತ್ತಿದೆ. ಹಬ್ಬದಲ್ಲಿ ಚುಮುಚುಮು ಚಳಿಗೆ ಕರಾವಳಿ ಖಾದ್ಯದ ರುಚಿ ಸಿಕ್ಕಿದ್ದು, ಕರಾವಳಿಗರ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು. ಇಂದು ಜಯನಗರದ ಶಾಲಿನಿ ಆವರಣದಲ್ಲಿ ನಮ್ಮೂರ ಹಬ್ಬ ನಡೆಯಿತು.

ಕರಾವಳಿಗರ ಮೀನೂಟ, ಬಾಯಲ್ಲಿ ನೀರೂರಿಸ್ತಿರೋ ಕುಂದಾಪುರದ ಚಿಕನ್, ಬಂಗುಡೆ ಫ್ರೈ, ಕ್ರ್ಯಾಬ್ ಫ್ರೈ ಜೊತೆಗೆ ಅಂಜಲ್ ಫ್ರೈ ತಿಂದು ನಗರದ ಜನತೆ ಫುಲ್ ಎಂಜಾಯ್ ಮಾಡಿದರು. ಇನ್ನೊಂದೆಡೆ ರಸಾಯನ, ಪನ್ನೀರ್ ಪುಳಿಯನ್ನು ಯುವಕ ಯುವತಿಯರು ವಾವ್.. ವಾವ್.. ಎನ್ನುವುದು ಎಲ್ಲಡೆ ಕೇಳಿ ಬರುತ್ತಿತ್ತು.

ಬರೀ ತಿಂಡಿ ತಿನಿಸು ಅಷ್ಟೇ ಅಲ್ಲದೇ, ಕರಾವಳಿಗರ ಸಂಸ್ಕೃತಿ ಕೂಡ ನಮ್ಮೂರ ಹಬ್ಬ ಅನಾವರಣಗೊಂಡಿತು. ಯುವತಿಯರು ಯಕ್ಷಗಾನದ ಪ್ರತಿರೂಪದ ಮುಂದೆ ನಿಂತು ಒಳ್ಳೆ ಪೋಸ್ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಳ್ಳು ದೃಶ್ಯ ಸಾಮಾನ್ಯವಾಗಿತ್ತು. ನಾಳೆಯೂ ಈ ಕರಾವಳಿ ಉತ್ಸವ ನಡೆಯಲಿದ್ದು, ವಿಕೆಂಡ್ ಎಂಜಾಯ್ ಮೆಂಟ್ ಗೆ ಬೇರೆ ಏನ್ ಬೇಕು ಅಲ್ವಾ.. ಹಾಗಿದ್ರೆ ಒಮ್ಮೆ ನೀವು ವಿಸಿಟ್ ಕೊಡಿ, ಮಸ್ತ್ ಮಜಾ ಮಾಡಿ.

Advertisement
Advertisement