ಬೆಂಗಳೂರು: ವಿಧಾನಸೌಧದ ಬಾಂಕ್ವೆಟ್ ಹಾಲ್‍ನಲ್ಲಿ ನಮಾಜ್ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.
ಈ ವರ್ಷದ ಹಜ್ ಯಾತ್ರೆ ಕೈಗೊಳ್ಳುವ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಮಧ್ಯಾಹ್ನ ವಿರಾಮ ತೆಗೆದುಕೊಂಡು ನಮಾಜ್ ಮಾಡಿದ್ದಾರೆ.
Advertisement
ಸರ್ಕಾರಿ ಕಚೇರಿಗಳಲ್ಲಿ ಈ ರೀತಿಯ ಪ್ರಾರ್ಥನೆಗೆ ಅವಕಾಶವಿಲ್ಲ. ಆದರೆ ವಿಧಾನಸೌಧದಲ್ಲಿ ನಮಾಜ್ ಮಾಡಿದ್ದು ಸರಿಯೇ ಎನ್ನುವ ಪ್ರಶ್ನೆ ಇಟ್ಟುಕೊಂಡು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮುಖಂಡರು, ಮಧ್ಯಾಹ್ನದ ಸಮಯದವಾದ್ದರಿಂದ ಜೋಯರ್ ಪ್ರೇಯರ್ ಮಾಡಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಹಿಂದೂ ಬಾಂಧವರು ಪೂಜೆ ಮಾಡುವುದಿಲ್ಲವೇ? ದೇವರ ಫೋಟೋ ಇಡುವುದಿಲ್ಲವೇ? ಇದರಲ್ಲಿ ವಿವಾದ ಏನಿದೆ ಎಂದು ಪ್ರಶ್ನಿಸಿದ್ದಾರೆ.
Advertisement
ಈ ಹಿಂದೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿ ಅವರು ಹುಟ್ಟು ಹಬ್ಬ ಆಚರಿಸಿದ ಸಂದರ್ಭದಲ್ಲೂ ತೀವ್ರ ವಿವಾದ ಆಗಿತ್ತು. ಅಲ್ಲದೇ ಲೋಕಾಯುಕ್ತ ಕಚೇರಿಯಲ್ಲಿ ಸಿಬ್ಬಂದಿ ಭಜನೆ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು. ಇದನ್ನು ಓದಿ: ಭಜನಾ ಮಂಡಳಿಯಾದ ಲೋಕಾಯುಕ್ತ ಕಚೇರಿ: ವಿಡಿಯೋ ನೋಡಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv