Saturday, 25th January 2020

ಭಜನಾ ಮಂಡಳಿಯಾದ ಲೋಕಾಯುಕ್ತ ಕಚೇರಿ: ವಿಡಿಯೋ ನೋಡಿ

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಹೆಸರು ಕೇಳುತ್ತಿದ್ದಂತೆಯೇ ಭ್ರಷ್ಟರು ಭಜನೆ ಮಾಡುತ್ತಿದ್ದರು, ಆದರೆ ಈದೀಗ ಸಂಸ್ಥೆಯಲ್ಲಿಯೇ ಭಜನೆ ನಡೆಯುತ್ತಿರುವುದು ಶೋಚನೀಯ ಸಂಗತಿಯಾಗಿದೆ.

ಹೌದು, ಇದು ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ. ಒಂದು ಕಾಲದಲ್ಲಿ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿ ಮೆರೆದಿದ್ದ ಲೋಕಾಯುಕ್ತ ಸಂಸ್ಥೆಯ ಇಂದಿನ ದುಸ್ಥಿತಿ. ಈ ಮೊದಲು ಸಂಸ್ಥೆಯ ಹೆಸರು ಕೇಳಿದರೆ, ಭ್ರಷ್ಟರು ರಾತ್ರಿಯಿಡಿ ಭಜನೆ ಮಾಡುತ್ತಿದ್ದರು. ಆದರೆ ಇದೀಗ ಅದೇ ಸಂಸ್ಥೆಯಲ್ಲಿ ಲಲಿತಾ ಸಹಸ್ರನಾಮ, ಭಜನೆ ನಡೆಯುತ್ತಿರುವುದರಿಂದ ಲೋಕಾಯುಕ್ತ ಸಂಸ್ಥೆಯ ದುಸ್ಥಿತಿ ಹೇಗಿದೆ ಎಂಬುದನ್ನು ತೋರಿಸುತ್ತದೆ.

ಇಂದು ಇದು ಲೋಕಾಯುಕ್ತ ಕಚೇರಿಯಾಗಿಲ್ಲ, ಬದಲಿಗೆ `ಲೋಕಾಯುಕ್ತ ಭಜನಾ ಮಂಡಳಿ’ಯಾಗಿದೆ. ರಾಜ್ಯ ಲೋಕಾಯುಕ್ತ ಕಚೇರಿಯಲ್ಲಿ ದಿನನಿತ್ಯ ನಡೆಯುತ್ತೆ ಸಹಸ್ರನಾಮ ಜಪ, ಭಜನೆ ಕಾರ್ಯಕ್ರಮ. ಕೆಲಸವಿಲ್ಲದೆ ಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಸಿಬ್ಬಂದಿ ಶುರುಮಾಡಿದ್ದಾರೆ. ಪ್ರತಿನಿತ್ಯ ಮಧ್ಯಾಹ್ನ ಊಟವಾದ ನಂತರ ಭಜನೆಗಾಗಿ ಕಚೇರಿಯನ್ನೇ ಬಂದ್ ಮಾಡಿ, ಲೋಕಾಯುಕ್ತ ಕಚೇರಿಯ 5ನೇ ಮಹಡಿಯಲ್ಲಿ ಸಿಬ್ಬಂದಿಗಳಿಂದ ಭಜನೆ, ಸಹಸ್ರನಾಮ ಹಾಗೂ ಜಪ ನಡೆಯುತ್ತಿದೆ.

ಈ ಕಾರ್ಯಕ್ರಮದ ಬಗ್ಗೆ ಲೋಕಾಯುಕ್ತರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಜನರು ಲೋಕಾಯುಕ್ತವನ್ನೇ ಮರೆಯುತಿದ್ದಾರೆ. ಅಲ್ಲದೇ ಈ ಮೊದಲು ಲೋಕಾಯುಕ್ತರಿಗೆ ಚಾಕು ಹಾಕಿದ ಘಟನೆ ಮಾಸುವ ಮುನ್ನವೇ ಲೋಕಾಯುಕ್ತ ಕಚೇರಿಯಲ್ಲಿನ ಭಜನೆ ಇದೀಗ ಭಾರೀ ಸುದ್ದಿಯಲ್ಲಿದೆ.

One thought on “ಭಜನಾ ಮಂಡಳಿಯಾದ ಲೋಕಾಯುಕ್ತ ಕಚೇರಿ: ವಿಡಿಯೋ ನೋಡಿ

Leave a Reply

Your email address will not be published. Required fields are marked *