ಮಸ್ತ್ ಲುಕ್‌ನಲ್ಲಿ ಮಿಂಚಿದ ನಮ್ರತಾ- ಹೂವಿನ ಮಾರಾಟಕ್ಕಿಳಿದ್ರಾ ಎಂದು ಕಾಲೆಳೆದ ನೆಟ್ಟಿಗರು

Public TV
1 Min Read
namratha gowda

ಕಿರುತೆರೆ ನಟಿ ನಮ್ರತಾ ಗೌಡ (Namratha Gowda) ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ನಾಗಿಣಿ 2 (Nagini 2)ನಾಯಕಿ ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಮ್ರತಾ ನಯಾ ಲುಕ್ ನೋಡ್ತಿದ್ದಂತೆ, ನೀವು ಹೂವಿನ ಮಾರಾಟಕ್ಕಿಳಿದ್ರಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

namratha

‘ನಾಗಿಣಿ 2’ ಸೀರಿಯಲ್‌ನ ಶಿವಾನಿ ಖ್ಯಾತಿಯ ನಮ್ರತಾ ಗೌಡ ಅವರು ಸದ್ಯ ಹೊಸ ಬಗೆಯ ಪಾತ್ರಗಳ ಹುಡುಕಾಟದಲ್ಲಿ ಇದ್ದಾರೆ. ಅದಕ್ಕಾಗಿ ಭಿನ್ನ ಫೋಟೋಶೂಟ್ ಮೂಲಕ ಆಗಾಗ ನಟಿ ಗಮನ ಸೆಳೆಯುತ್ತಾರೆ. ಈಗ ನಮ್ರತಾ ಗೌಡ ಬಿಳಿ ಬಣ್ಣದ ಲೆಹೆಂಗಾ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿ, ಯಾವಾಗಿನಿಂದ ಹೂವಿನ ಬ್ಯುಸಿನೆಸ್ ಶುರು ಮಾಡಿಕೊಂಡ್ರಿ ಎಂದು ನಮ್ರತಾ ಕಾಲೆಳೆದಿದ್ದಾರೆ.

namratha gowda

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಬಳಿಕ ಪುಟ್ಟಗೌರಿ ಮದುವೆ(Puttagowri Maduve), ನಾಗಿಣಿ 2 ಮೂಲಕ ಪ್ರಮುಖ ಪಾತ್ರಧಾರಿಯಾಗಿ ಗಮನ ಸೆಳೆದರು. ಇದನ್ನೂ ಓದಿ:‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ತೆಲುಗಿಗೆ ಡಬ್-‌ ಆಗಸ್ಟ್‌ 26ಕ್ಕೆ ಸಿನಿಮಾ ರಿಲೀಸ್

‘ನಾಗಿಣಿ 2’ ಸೀರಿಯಲ್‌ಗೆ ಕೆಲ ತಿಂಗಳುಗಳ ಹಿಂದೆ ಬ್ರೇಕ್ ಬಿದ್ದಿದೆ. ನಮ್ರತಾ ಕೂಡ ಪ್ರವಾಸ, ಹೊಸ ಫೋಟೋಶೂಟ್ ಅಂತಾ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಮಿಂಚಲು ಸಜ್ಜಾಗುತ್ತಿದ್ದಾರೆ.

Share This Article