– ಸ್ಥಳದಲ್ಲೇ ಇದ್ದರೂ ಏನೂ ಮಾಡದ ಪೊಲೀಸರು
ಮಂಡ್ಯ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಗಲಭೆ ವೇಳೆ ಅಂಗಡಿಗೆ ಕಿಡಿಗೇಡಿಗಳು ಪೆಟ್ರೋಲ್ ಬಾಂಬ್ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಿಡಿಗೇಡಿಗಳ ಪಾಪಿ ಕೃತ್ಯ ಬಗೆದಷ್ಟು ಬಯಲಾಗುತ್ತಿದೆ. ಅಂಗಡಿಗೆ ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಿಡಿಗೇಡಿಗಳು ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಬೆಂಕಿ ಧಗಧಗಿಸಿ ಅಂಗಡಿ ಹೊತ್ತು ಉರಿಯುವ ವೇಳೆ ಪೆಟ್ರೋಲ್ ಬಾಂಬ್ ಕೂಡ ಎಸೆದಿದ್ದಾರೆ. ಅಲ್ಲದೇ ತಮ್ಮ ಕೃತ್ಯದ ದೃಶ್ಯ ಸೆರೆಯಾಗಬಾರದು ಎಂದು ಸಿಸಿಟಿವಿಗೆ ಕಲ್ಲು ಹೊಡೆದಿದ್ದಾರೆ.
ದುಷ್ಕರ್ಮಿಗಳು ಇಂತಹ ಕೃತ್ಯ ಎಸಗಿದ ಸಂದರ್ಭದಲ್ಲಿ ಪೊಲೀಸರು ಸ್ಥಳದಲ್ಲೇ ಓಡಾಡಿದ್ದಾರೆ. ಆದರೂ, ಕಿಡಿಗೇಡಿಗಳನ್ನು ತಡೆಯಲು ಖಾಕಿ ಮುಂದಾಗಿಲ್ಲ. ಸುಮ್ಮನೆ ಆ ಕಡೆ, ಈ ಕಡೆ ಎಂದು ಖಾಕಿ ಓಡಾಟ ನಡೆಸುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.