`ಲವ್‌ಸ್ಟೋರಿ’ ಸಕ್ಸಸ್ ನಂತರ ಟಾಲಿವುಡ್ ಸ್ಟಾರ್ ನಾಗಚೈತನ್ಯ ಸದ್ಯ `ಥ್ಯಾಂಕ್ ಯೂ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಾಗಚೈತನ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಮೂಲಕ ಸಮಂತಾ ಮೇಲೆ ಪ್ರೀತಿಯಿದೆ ಎಂಬುದಕ್ಕೆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಸದ್ಯ ಶೇರ್ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.
ನಟ ನಾಗಚೈತನ್ಯ ಸದ್ಯ `ಥ್ಯಾಂಕ್ ಯೂ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ರಿಲೀಸ್‌ಗೆ ರೆಡಿಯಾಗಿರುವ ನಾಗಚೈತನ್ಯ ಹೊಸ ಸಿನಿಮಾದ ಹೆಸರು `ಥ್ಯಾಂಕ್ ಯೂ’ ಹೀಗಾಗಿ ತಮ್ಮ ಜೀವನದಲ್ಲಿ `ಥ್ಯಾಂಕ್ ಯೂ’ ಎಂದು ಹೇಳಲು ಬಯಸುವ ಮೂವರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಮೂರು ಫೋಟೊಗಳಲ್ಲಿ ಒಂದು ಪರೋಕ್ಷವಾಗಿ ಸಮಂತಾ ಕಡೆಗೆ ಬೆರಳು ಮಾಡುತ್ತಿದೆ. ಆ ಫೋಟೊ ನೋಡಿ ನಾಗಚೈತನ್ಯ ಇನ್ನೂ ಸಮಂತಾರನ್ನು ಮರೆತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮೊದಲ ಫೋಟೋ ತಾಯಿಯ ಜತೆ, ಎರಡನೇ ಫೋಟೋ ತಂದೆ ಜತೆ ಮತ್ತು ಕಡೆಯ ಫೋಟೋ ಮುದ್ದು ಶ್ವಾನ ಜತೆಯಿರುವ ಫೋಟೋ ಹಾಕಿ ಥ್ಯಾಂಕ್ ಯೂ ಅಂದಿದ್ದಾರೆ. ಇದನ್ನೂ ಓದಿ: ಐದು ವರ್ಷಗಳ ನಂತರ ಮತ್ತೆ ನಿರ್ದೇಶನದತ್ತ ಎಸ್. ನಾರಾಯಣ್
ನಾಗಚೈತನ್ಯ ಶೇರ್ ಮಾಡಿದ ಮೂರು ಫೋಟೊಗಳಲ್ಲಿ ಒಂದು ಮಾಜಿ ಪತ್ನಿ ಸಮಂತಾಗೆ ಸಂಬಂಧಿಸಿದ್ದು. ಇಬ್ಬರೂ ತಮ್ಮ ಪ್ರೀತಿಯ ಪ್ರತೀಕವಾಗಿ ಇಟ್ಟುಕೊಂಡಿದ್ದ ಹ್ಯಾಶ್ ಫೋಟೊವನ್ನು ಶೇರ್ ಮಾಡಿದ್ದಾರೆ.
View this post on Instagram
ಹ್ಯಾಶ್, ಇದು ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಯ ಸಂಕೇತಕ್ಕೆಂದು ಇದ್ದ ಅವರ ಪ್ರೀತಿಯ ಶ್ವಾನ. ಇದೇ ಫೋಟೊವನ್ನು ನಾಗಚೈತನ್ಯ ಹಂಚಿಕೊಂಡಿದ್ದು, ಪರೋಕ್ಷವಾಗಿ ನಾಗಚೈತನ್ಯಗೆ ಧನ್ಯವಾದಗಳನ್ನು ಹೇಳಿದ್ದಾರೆ. ಹ್ಯಾಶ್ ಹೇಗೆ ಪ್ರೀತಿ ಮಾಡಬೇಕು ಎನ್ನುವ ಭಾವ ಮೂಡಿಸಿದ್ದು ನೀನು, ಮನುಷ್ಯನಾಗಿಯೇ ಇರುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]