ವಜ್ರಕಾಯ, ಇಸ್ಮಾರ್ಟ್ ಶಂಕರ್ ಖ್ಯಾತಿಯ ನಟಿ ನಭಾ ನಟೇಶ್ (Nabha Natesh) ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ‘ಡಾರ್ಲಿಂಗ್’ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ 2 ವರ್ಷಗಳ ಹಿಂದೆ ತನಗೆ ಆದ ಆಕ್ಸಿಡೆಂಡ್ ಕುರಿತು ನಟಿ ಮಾತನಾಡಿದ್ದಾರೆ. ಕರಾಳ ದಿನಗಳ ನೆನೆದು ನಭಾ ಭಾವುಕರಾಗಿದ್ದಾರೆ.
2 ವರ್ಷಗಳ ಹಿಂದೆ ನಟಿಗೆ ಅಪಘಾತದಲ್ಲಿ ಎಡಗೈ ಮತ್ತು ಎಡಭುಜಕ್ಕೆ ಪೆಟ್ಟು ಮಾಡಿಕೊಂಡರು. ಶಸ್ತ್ರಚಿಕಿತ್ಸೆಗೆ ಒಳಗಾದ ನಭಾ ಇದರಿಂದ ಚೇತರಿಸಿಕೊಳ್ಳಲು ಒಂದೂವರೆ ವರ್ಷ ಕಳೆಯಿತು. ಅಂದಿನ ಆ ದಿನ ಹೇಗಿತ್ತು? ಎಂದು ನಟಿ ವಿವರಿಸಿದರು. ಕೈ ತುಂಬಾ ಅವಕಾಶ ಇರುವ ಸಮಯದಲ್ಲಿಯೇ ನನಗೆ ಆಕ್ಸಿಡೆಂಟ್ ಆಯಿತು. ಆ ನಂತರ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆಗ ನನ್ನ ಮನಸ್ಥಿತಿಯೇ ಸಂಪೂರ್ಣ ಬದಲಾಗಿ ಹೋಗಿತ್ತು. ಆಪರೇಷನ್ ಆದ ಹತ್ತು ದಿನಗಳ ನಂತರ ಶೂಟಿಂಗ್ ನಲ್ಲಿ ಭಾಗವಹಿಸಿದ್ದೆ ಆದರೆ ಅದರಿಂದ ಮತ್ತೆ ನನ್ನ ಆರೋಗ್ಯ ಹದಗೆಟ್ಟಿತ್ತು ಎಂದರು. ಆ ನಂತರ ನನಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ನಟಿ ಭಾವುಕರಾಗಿದ್ದಾರೆ.
ನನ್ನ ದೇಹಕ್ಕೆ ಖಂಡಿತವಾಗಿಯೂ ವಿಶ್ರಾಂತಿ ಬೇಕು. ಆರೋಗ್ಯವಾಗಿದ್ದರೆ ಮಾತ್ರ ಏನು ಬೇಕಾದರೂ ಮಾಡಬಹುದು ಎಂದು ನನಗೆ ಅರಿವು ಆಗಿದ್ದು ಆಗಲೇ ಹೀಗಾಗಿಯೇ ಗ್ಯಾಪ್ ತೆಗೆದುಕೊಂಡು ಆರೋಗ್ಯದ ಕಡೆ ಹೆಚ್ಚೆಚ್ಚು ಗಮನ ವಹಿಸಿದೆ. ಅವಕಾಶಗಳನ್ನು ನಾನು ಮತ್ತೆ ಎದುರು ನೋಡುತ್ತಿದ್ದಾಗ ಸಿಕ್ಕ ಸಿನಿಮಾನೇ ಈ ‘ಡಾರ್ಲಿಂಗ್’ ಎಂದಿದ್ದಾರೆ. ಇದನ್ನೂ ಓದಿ:ಬೀದಿಯಲ್ಲಿ ಕುಡಿದು ತೂರಾಡಿದ ಉರ್ಫಿ ಜಾವೇದ್
ಇನ್ನೂ ‘ಇಸ್ಮಾರ್ಟ್ ಶಂಕರ್’ ಅಂತಹ ಕಮರ್ಷಿಯಲ್ ಸಿನಿಮಾ ಮಾಡಿದ ನಂತರ, ‘ಡಾರ್ಲಿಂಗ್’ನಂತಹ ಪ್ರಯತ್ನಕ್ಕೆ ಮುಂದಾಗಿದ್ದೇಕೆ ಎಂದು ಅನೇಕರು ಪ್ರಶ್ನಿಸಿದ್ದರು. ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಥೆಯೇ ಚಿತ್ರಕ್ಕೆ ಬಹುಮುಖ್ಯವಾದದ್ದು ಎಂದಿದ್ದಾರೆ. ನಿರ್ದೇಶಕ ಅಶ್ವಿನ್ ಅವರು ನನ್ನನ್ನು ಸಂಪರ್ಕಿಸಿದ ರೀತಿ ಮತ್ತು ಅವರು ನನ್ನ ಪಾತ್ರವನ್ನು ಹೆಣೆದ ರೀತಿ ಇಷ್ಟವಾಗಿ ಈ ಚಿತ್ರಕ್ಕೆ ನಾನು ಓಕೆ ಎಂದೆ. ನನ್ನ ಪಾತ್ರ ತುಂಬಾ ಡಿಫರೆಂಟ್ ಆಗಿದೆ. ನಿಮಗೆಲ್ಲ ಈ ಚಿತ್ರ ಗ್ಯಾರಂಟಿ ಇಷ್ಟವಾಗುತ್ತೆ ಎಂದು ನಭಾ ಭಾವುಕರಾಗಿಯೇ ಮಾತನಾಡಿದ್ದಾರೆ.
ಅಂದಹಾಗೆ, ‘ಡಾರ್ಲಿಂಗ್’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಭಾ ನಟಿಸಿದ್ದಾರೆ. ಜು.19ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಈ ಹಿಂದೆ ನಟಿಸಿರುವ ಸಿನಿಮಾಗಳಿಗಿಂತ ಈ ಚಿತ್ರ ಭಿನ್ನವಾಗಿದೆ.