ಇಂಫಾಲ: ಮಣಿಪುರದಲ್ಲಿ ಎರಡನೇ ಬಾರಿಗೆ ಬಿಜೆಪಿ ನಾಯಕ ಎನ್ ಬಿರೇನ್ ಸಿಂಗ್‌ರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ಮಣಿಪುರದ ಇಂಫಾಲದಲ್ಲಿ ಭಾನುವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿರೇನ್ ಸಿಂಗ್ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಣಿಪುರದ 60 ಸದಸ್ಯ ಸ್ಥಾನಗಳಲ್ಲಿ 32 ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಮತ್ತೆ ಅಧಿಕಾರಕ್ಕೆ ಮರಳಿದೆ. ಚುನಾವಣೆ ಫಲಿತಾಂಶದ 10 ದಿನಗಳ ಬಳಿಕ ಇದೀಗ ಬಿಜೆಪಿ ಪಕ್ಷ ಬೀರೆನ್ ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ಇದನ್ನೂ ಓದಿ: ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ
ಹೀಂಗಾಂಗ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಬಿರೇನ್ ಸಿಂಗ್ ಬಹುಮತದಿಂದ ಗೆದ್ದಿದ್ದರು. ಫಲಿತಾಂಶದ ಬಳಿಕ ಮಣಿಪುರದ ಮುಂದಿನ ಸಿಎಂ ಯಾರಾಗಬಹುದು ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಈ ಪಟ್ಟಿಯಲ್ಲಿ ಬಿರೇನ್ ಸಿಂಗ್‌ರೊಂದಿಗೆ ಎರಡು ಬಾರಿ ಶಾಸಕರಾಗಿದ್ದ ಹಾಗೂ ಕ್ಯಾಬಿನೆಟ್ ಸಚಿವ ಟಿ ಬಿಶ್ವಜಿತ್ ಸಿಂಗ್ ಹೆಸರು ಕೂಡಾ ಕೇಳಿ ಬಂದಿತ್ತು. ಇದನ್ನೂ ಓದಿ: 4 ರಾಜ್ಯ ಗೆದ್ದರೂ ಬಿಜೆಪಿ ಇನ್ನೂ ಸರ್ಕಾರ ಮಾಡಿಲ್ಲ: ಕೇಜ್ರಿವಾಲ್
ಮಣಿಪುರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಎನ್ ಬಿರೇನ್ ಸಿಂಗ್ 2017 ರಲ್ಲಿ ಮಣಿಪುರ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾದರು. ಇದೀಗ ಮತ್ತೆ ಬಿರೇನ್ ಸಿಂಗ್ ಅವರನ್ನೇ ಬಿಜೆಪಿ ಸತತ 2ನೇ ಬಾರಿ ಸಿಎಂ ಮಾಡಲು ಮುಂದಾಗಿದೆ.