ಪಾರ್ಲ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂಝಾಂಸಿ ಸೂಪರ್ ಲೀಗ್ (ಎಂಎಸ್‍ಎಲ್) ಟಿ20 ಪಂದ್ಯದಲ್ಲಿ ಪಾರ್ಲ್ ರಾಕ್ಸ್ ತಂಡದ ಲೆಗ್ ಸ್ಪಿನ್ನರ್ ತಬ್ರೇಜ್ ಶಮ್ಸಿ ಮ್ಯಾಜಿಕ್ ಮಾಡಿದ್ದಾರೆ.
ಬುಧವಾರ ಪಾರ್ಲ್ ರಾಕ್ಸ್ ಮತ್ತು ಡರ್ಬನ್ ಹೀಟ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ವೇಳೆ ಡರ್ಬನ್ ಹೀಟ್ ತಂಡದ ವಿಹಾನ್ ಲಬ್ಬೆ ಶಮ್ಸಿ ಎಸೆತವನ್ನು ಬಲವಾಗಿ ಹೊಡೆಯಲು ಹೋಗಿ ಕ್ಯಾಚ್ ನೀಡಿ ಔಟಾದರು.
Advertisement
https://twitter.com/MSL_T20/status/1202287999020650496
Advertisement
ವಿಕೆಟ್ ಪಡೆದ ಸಂಭ್ರಮದಲ್ಲಿ ಶಮ್ಸಿ ಕೆಂಪು ಬಣ್ಣದ ಕರವಸ್ತ್ರವನ್ನು ತೆಗೆದು ಅದರಲ್ಲಿ ಬಿಳಿ ಬಣ್ಣದ ದಂಡವನ್ನು ಹೊರ ತೆಗೆಯುವ ಮೂಲಕ ಜಾದು ಮಾಡಿ ಸಂಭ್ರಮಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಶಮ್ಸಿ 4 ಓವರ್ ಎಸೆದು 37 ರನ್ ನೀಡಿ 2 ವಿಕೆಟ್ ಪಡೆದಿದ್ದರೂ ತಂಡ ಸೋತಿದೆ.
Advertisement
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಪಾರ್ಲ್ ರಾಕ್ಸ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಡರ್ಬನ್ ಹೀಟ್ಸ್ 18.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 197 ರನ್ ಗಳಿಸುವ ಮೂಲಕ 6 ವಿಕೆಟ್‍ಗಳ ಜಯ ಗಳಿಸಿತು.
Advertisement
ಡರ್ಬನ್ ಹೀಟ್ಸ್ ಪರವಾಗಿ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಔಟಾಗದೇ 97 ರನ್(55 ಎಸೆತ, 9 ಬೌಂಡರಿ, 4 ಸಿಕ್ಸ್) ಹೊಡೆದರೆ, ಡೇವಿಡ್ ಮಿಲ್ಲರ್ 40 ರನ್(22 ಎಸೆತ, 1 ಬೌಂಡರಿ, 3 ಸಿಕ್ಸರ್) ಸಿಡಿಸಿ ಪಂದ್ಯಕ್ಕೆ ಜಯವನ್ನು ತಂದುಕೊಟ್ಟರು. ಈ ಪಂದ್ಯವನ್ನು ಸೋತರೂ ಜಾದು ಮೂಲಕ ಶಮ್ಸಿ ಅಭಿಮಾನಿಗಳನ್ನು ರಂಜಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.