ಮೈಸೂರು: ಎಸ್‌ಎಂ ಕೃಷ್ಣ (SM Krishna) ಪಾಲಿಗೆ ಹಳೆಯ ಮೈಸೂರು (Mysuru) ಭಾಗ ಒಂದು ರೀತಿ ವರವಾದರೆ, ಮತ್ತೊಂದು ಕಡೆ ಶಾಪ ಆಗಿದ್ದು ಅಕ್ಷರಶಃ ಸತ್ಯವಾಗಿದೆ.
ಎಸ್‌ಎಂ ಕೃಷ್ಣ ಅವರು ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿಯೇ ಹುಟ್ಟಿ, ಬೆಳೆದು, ಓದಿದ್ದು, ರಾಜಕೀಯ ನೆಲೆ ಕಂಡುಕೊಂಡರು. ಮಂಡ್ಯ, ಅವಿಭಜಿತ ಮೈಸೂರು (ಚಾಮರಾಜನಗರ ಸೇರಿ) ಎಸ್.ಎಂ.ಕೃಷ್ಣ ಅವರ ಜನ್ಮಭೂಮಿ, ವಿದ್ಯಾಭೂಮಿ, ಕರ್ಮಭೂಮಿ ಎಲ್ಲವೂ ಆಗಿದ್ದವು.ಇದನ್ನೂ ಓದಿ: ಎಸ್‌ಎಂಕೆ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್
Advertisement
Advertisement
ಯಾವ ಊರು ಅವರನ್ನು ವಿಧಾನಸೌಧದ ಮೂರನೇ ಮಹಡಿ ಹತ್ತಿಸುವ ಮಟ್ಟಕ್ಕೆ ಬೆಳೆಸಿದವು. ಆದರೆ ಅದೇ ಊರುಗಳೇ ಅವರ ಆಡಳಿತ ಕಾಲದ ಬಹುದೊಡ್ಡ ತಲೆ ನೋವಾಗಿ, ಸಮಸ್ಯೆಗಳಿಗೆ ಕೇಂದ್ರ ಸ್ಥಾನಗಳಾಗಿ ಪರಿಣಮಿಸಿದವು. ಎಸ್.ಎಂ.ಕೃಷ್ಣ ಅವರು ಈ ರಾಜ್ಯದ ಸಿಎಂ ಆಗಿದ್ದಾಗ ಅವರನ್ನು ಕಾಡಿದ ಬಹುದೊಡ್ಡ ಚಳವಳಿ ಎಂದರೆ ಅದು ಕಾವೇರಿ ಚಳವಳಿ. ಮೈಸೂರು, ಮಂಡ್ಯ ಈ ಚಳುವಳಿಗೆ ಕೇಂದ್ರ ಸ್ಥಾನಗಳಿದ್ದವು.
Advertisement
ಇನ್ನೂ ಅವರ ಅವಧಿಯಲ್ಲಿ ಡಾ.ರಾಜಕುಮಾರ್ ಅವರ ಅಪಹರಣ ಬಹುದೊಡ್ಡ ಸವಾಲಾಗಿತ್ತು. ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನು ಅನ್ನು ಕಿಡ್ನಾಪ್ ಮಾಡಿ ಚಾಮರಾಜನಗರ ಜಿಲ್ಲೆಯ ಕಾಡಿನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ಆಗ ಇಡೀ ರಾಜ್ಯ ಹೊತ್ತಿ ಉರಿದಿತ್ತು. ಅದಾದ ಬಳಿಕ ರಾಜ್ಯದಲ್ಲಿ ಬರಗಾಲ ಶುರುವಾಯಿತು. ಅದರಲ್ಲಿ ಅತಿ ಹೆಚ್ಚಿನ ಬರಗಾಲಕ್ಕೆ ಹಳೆ ಮೈಸೂರು ಭಾಗದ ಜಿಲ್ಲೆಗಳು ತುತ್ತಾಗಿದ್ದವು. ಈ ವೇಳೆ ಹಳೆ ಮೈಸೂರು ಭಾಗದ ಅತೀ ಹೆಚ್ಚು ರೈತರ ಸಾಲು ಸಾಲು ಆತ್ಮಹತ್ಯೆಗಳು ನಡೆದವು. ಹೀಗೆ ಎಸ್.ಎಂ.ಕೃಷ್ಣ ಅವರ ಆಡಳಿತ ಕಾಲದಲ್ಲಿ ಅವರು ಹುಟ್ಟಿ ಬೆಳದ ಊರಗಳೇ ಸಮಸ್ಯೆಗಳ ಕೇಂದ್ರ ಸ್ಥಾನಗಳಾಗಿದ್ದು ವಿಪರ್ಯಾಸ ಎನ್ನಬಹುದು.ಇದನ್ನೂ ಓದಿ: ಮಂಡ್ಯವನ್ನು ಇಂಡಿಯಾದವರೆಗೆ ಕೊಂಡೊಯ್ದ ಸಕ್ಕರೆ ನಾಡಿನ ಏಕೈಕ ಸಿಎಂ ಎಸ್‌ಎಂಕೆ!