ಬಳ್ಳಾರಿ: ‘ತುಂಬಿದ ಕೊಡ ತುಳಕಿತಲೇ ಪರಾಕ್‘ ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ (Mylara Lingeshwara Karnika) ದೈವವಾಣಿ ನುಡಿ.
ವಿಜಯನಗರ ಜಿಲ್ಲೆ ಹೂವಿನಹಡಗಲಿ (Huvina Hadagali) ತಾಲೂಕಿನ ಮೈಲಾರದಲ್ಲಿ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಉತ್ಸವ ಹೇಗೆ ನಡೆಯಿತು?
ಆರಂಭದಲ್ಲಿ ದೇವಸ್ಥಾನದ ವಂಶಪಾರಂಪರ್ಯ ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವಾರೂಢರಾಗಿ ಡೆಂಕನ ಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಇದನ್ನೂ ಓದಿ: ಮತ್ತೆ ಕಿನ್ನರ ಅಖಾಡ ಸೇರಿದ ನಟಿ ಮಮತಾ ಕುಲಕರ್ಣಿ
ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳ ಉತ್ಸವದೊಂದಿಗೆ ಗೊರವಯ್ಯ ರಾಮಣ್ಣ ಅವರನ್ನು ಸಿಂಹಾಸನ ಕಟ್ಟೆಯಿಂದ ಕಾರಣೀಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು.
ಕ್ಷೇತ್ರದ ಪರಂಪರೆಯ ಸಂಕೇತವಾಗಿರುವ 12 ಅಡಿ ಎತ್ತರದ ಬಿಲ್ಲು ಏರಿದ ಗೊರವಯ್ಯ ‘ಸದ್ದಲೇ’ ಎಂದು ಕೂಗುತ್ತಿದ್ದಂತೆ ನೆರೆದಿದ್ದ ಭಕ್ತರು ಒಂದು ಕ್ಷಣ ಸ್ತಬ್ಧರಾದರು. ನಂತರ ಆಗ ಗೊರವಯ್ಯ ರಾಮಣ್ಣ ದೈವವಾಣಿಯನ್ನು ನುಡಿದು ಕೆಳಕ್ಕೆ ಜಿಗಿದಾಗ ಅಲ್ಲಿ ನೆರೆದಿದ್ದ ಗೊರವ ಸಮೂಹದವರು ಅವರನ್ನು ಕಂಬಳಿಯಲ್ಲಿ ಹಿಡಿದರು. ಮೈಲಾರ ಲಿಂಗೇಶ್ವರನ ಕಾರಣಿಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾದರು. ಇದನ್ನೂ ಓದಿ: Prayagraj Kumbh Mela | 1500 ಕೋಟಿ ರೂ. ಖರ್ಚು ಮಾಡಿದ್ದಕ್ಕೆ UP ಆರ್ಥಿಕತೆಗೆ 3 ಲಕ್ಷ ಕೋಟಿ ಲಾಭ: ಯೋಗಿ
ತುಂಬಿದ ಕೊಡ ತುಳಕಿತಲೇ ಪರಾಕ್ – ಮೈಲಾರಲಿಂಗೇಶ್ವರ ಸ್ವಾಮಿಯ ದೈವವಾಣಿ https://t.co/C1phREHouW#HuvinaHadagali #MylaraLingeshwaraKarnika #Rain #Karnika pic.twitter.com/3ln4X82FvZ
— PublicTV (@publictvnews) February 14, 2025
ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯು ಈ ವರ್ಷದ ಭವಿಷ್ಯವಾಣಿ ಎಂಬುದು ಭಕ್ತರ ನಂಬಿಕೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಬೆಳೆ ಸಮೃದ್ಧಿಯಾಗಿ ಬರಲಿದೆ. ಇದರಿಂದ ನಾಡಿನ ರೈತರ ಮುಖದಲ್ಲಿ ನಗುವಿನ ಸಿಂಚನ ಮೂಡಿಸುವ ಭರವಸೆ ಸಿಕ್ಕಂತಾಗಿದೆ ಎಂದು ಮೈಲಾರ ಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಪ್ಪಯ್ಯ ಒಡೆಯರು ಕಾರಣಿಕವನ್ನು ವಿಶ್ಲೇಷಿಸಿದರು.