ನಾಲ್ಕೈದು ಉದ್ಯಮಿಗಳಿಗಾಗಿ ರಾಜಕಾರಣಿಗಳಿಬ್ಬರು ಕೆಲಸ ಮಾಡ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

Public TV
2 Min Read
rahul gandhi 3

ನವದೆಹಲಿ: ನಾಲ್ಕೈದು ಉದ್ಯಮಿಗಳಿಗಾಗಿ ಇಬ್ಬರು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ನವದೆಹಲಿಯಲ್ಲಿ ಕಪ್ಪು ಪಟ್ಟಿ ಧರಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಹತ್ಯೆ ನಡೆಯುತ್ತಿದೆ. 70 ವರ್ಷದಿಂದ ಕಟ್ಟಿದ ವ್ಯವಸ್ಥೆ 8 ವರ್ಷದಲ್ಲಿ ನಾಶವಾಗುತ್ತಿದೆ. ದೇಶದಲ್ಲಿ 4 ಜನರ ಸರ್ವಾಧಿಕಾರ ನಡೆಯುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಬಯಸುತ್ತಿದ್ದೇವೆ. ಆದರೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಗರಂ ಆದರು.

ಸರ್ವಾಧಿಕಾರದ ವಿರುದ್ಧ ತಿರುಗಿಬಿದ್ದರೆ ಸೇಡು ತೀರಿಸಿಕೊಳ್ಳಲಾಗುತ್ತಿದೆ. ಕೇಸ್ ಹಾಕಿ ಜೈಲಿಗೆ ಕಳುಹಿಸಲಾಗುತ್ತಿದೆ. ಜನರ ಯಾವುದೇ ವಿಷಯಗಳು ಚರ್ಚೆಯಾಗುತ್ತಿಲ್ಲ. ನಾಲ್ಕೈದು ಉದ್ಯಮಿಗಳಿಗಾಗಿ ಇಬ್ಬರು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಗರಂ ಆದರು. ಇದನ್ನೂ ಓದಿ: CM ಆಗೋದು ತಪ್ಪಿಸೋಕೆ ಯಾರಿಂದ್ಲೂ ಸಾಧ್ಯವಿಲ್ಲ- ಸೋನಿಯಾ ತಾಯಿ ಪ್ರೀತಿ ಮೇಲೆ ನಂಬಿಕೆಯಿದೆ: ಡಿಕೆಶಿ

ಇಡೀ ವ್ಯವಸ್ಥೆಯಲ್ಲಿ ಆರ್‍ಎಸ್‍ಎಸ್ ವ್ಯಕ್ತಿಗಳು ಸೇರಿದ್ದಾರೆ. ಅವರ ಅಣತಿಯಂತೆ ವ್ಯವಸ್ಥೆ ನಡೆಸಲಾಗುತ್ತಿದೆ. ನಾವು ಈಗ ಇಡೀ ವ್ಯವಸ್ಥೆ ವಿರುದ್ಧ ಹೋರಾಡುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ವ್ಯವಸ್ಥೆ ಸ್ವಾತಂತ್ರ್ಯವಾಗಿತ್ತು. ಇಡಿ, ಐಟಿ, ಸಿಬಿಐ ಸೇರಿದಂತೆ ಎಲ್ಲ ಏಜೆನ್ಸಿಗಳು ಸ್ವತಂತ್ರವಾಗಿದ್ದವು ಎಂದು ಹೇಳಿದರು.

ವಾಸ್ತವ ಬೇರೆಯೇ ಇದೇ ಸರ್ಕಾರ ಭ್ರಮೆ ಸೃಷ್ಟಿಸುತ್ತಿದೆ. ನಿರುದ್ಯೋಗ ಸಮಸ್ಯೆ ಇಲ್ಲ ಎನ್ನುತ್ತದೆ, ಕೊವೀಡ್ ಅವಧಿಯಲ್ಲಿ ಜನರು ಹೆಚ್ಚು ಸಾವನ್ನಪ್ಪಿಲ್ಲ ಎನ್ನುತ್ತೆ. ಯುಎನ್ ಸಂಖ್ಯೆಗಳನ್ನು ನೀಡಿದರೇ ಅವರನ್ನೆ ಸುಳ್ಳು ಎನ್ನುತ್ತೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.

ನಾನು ಸತ್ಯ ಹೇಳಿದಷ್ಟು ನನ್ನ ಮೇಲೆ ಆಕ್ರಮಣ ಆಗಲಿದೆ. ನಾನು ಹೆದರುವುದಿಲ್ಲ, ನನ್ನ ಕೆಲಸ ಮಾಡುತ್ತೇವೆ. ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ಹೋರಾಡುತ್ತೇನೆ. ಇದರಿಂದ ಇನ್ನೂ ಹೆಚ್ಚು ಆಕ್ರಮಣ ನನ್ನ ಮೇಲೆ ನಡೆಯಲಿದೆ. ಯಾರು ಹೆದರಿಸುತ್ತಾರೆ, ಅವರು ಹೆದರುತ್ತಾರೆ ಇದು ಸತ್ಯ ಎಂದರು.

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಯುತ್ತಿದೆ. ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article