ಬೆಂಗಳೂರು: ಸೋನಿಯಾಗಾಂಧಿ ಅವರ ತಾಯಿ ಪ್ರೀತಿ ಮೇಲೆ ನನಗೆ ನಂಬಿಕೆಯಿದೆ. ನನ್ನ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗೋದು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪಬ್ಲಿಕ್‌ಟಿವಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಲಿಟಿಕ್ಸ್ ನಿಂತ ನೀರಲ್ಲ ಏನು ಬೇಕಾದರೂ ಆಗಬಹುದು. ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯವಾಗಿ ನನ್ನ ಮೇಲೆ ಭಯ ಇರೋದಕ್ಕೆ ತೊಂದ್ರೆ ಕೊಡ್ತಿದ್ದಾರೆ. ನಾನು ಪಕ್ಷಕ್ಕಾಗಿ ಚಪ್ಪಡಿ ಆಗೋಕೂ ರೆಡಿ. ಆದ್ರೆ ಸನ್ಯಾಸಿ ಆಗಲ್ಲ. ಪಕ್ಷಕ್ಕಾಗಿ ರಕ್ತ, ಬೆವರು ಕೊಟ್ಟಿದ್ದೇನೆ. 2 ವರ್ಷದಿಂದ ನಿದ್ರೆ ಮಾಡಿಲ್ಲ. ಏಕೆಂದರೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನ ಹಿರಿಯಣ್ಣನಂತೆ- ಮಾಜಿ ಸಿಎಂ ಗುಣಗಾನ ಮಾಡಿದ ಡಿಕೆ ಶಿವಕುಮಾರ್
Advertisement
Advertisement
ನಮಗೊಂದು ಅವಕಾಶ ಮಾಡಿಕೊಟ್ಟರೆ, ನಾವೂ ಜನಸೇವೆ ಮಾಡುತ್ತೇವೆ. ನಾನು ಜೈಲಲ್ಲಿದ್ದಾಗ ತಾಯಿ ಸೋನಿಯಾ ವಿಚಾರಿಸಿದ್ರಲ್ಲ, ಇನ್ನೇನು ಬೇಕು? ತಿಹಾರ್ ಜೈಲಿಗೆ ಬಂದು ಒಂದೂವರೆ ಗಂಟೆ ಮಾತಾಡಿಸಿದ್ರು. ಸೋನಿಯಾ ಗಾಂಧಿಯ ತಾಯಿ ಪ್ರೀತಿ ಮೇಲೆ ನಂಬಿಕೆ ಇದೆ. ನಾನು ಸಿಎಂ ಆಗೋದು ನನ್ನ ಹಣೆಯಲ್ಲಿ ಬರೆದಿದ್ದರೆ ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಆದರೆ ನನ್ನ ಆಪ್ತರಿಗೆ ಕೊಡುತ್ತಿರುವ ಕಿರುಕುಳ ಯಾವ ವೈರಿಗೂ ಬೇಡ ಎಂದು ಅವರು ಭಾವುಕರಾಗಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಕಾಂಗ್ರೆಸ್ ತಂತ್ರ- ಸಿದ್ದರಾಮೋತ್ಸವ ಮುಗೀತು ಇದೀಗ ಪಕ್ಷೋತ್ಸವ
Advertisement
Advertisement
ಇದೇ ವೇಳೆ ಸಿದ್ದರಾಮೋತ್ಸವ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮೋತ್ಸವದಿಂದ ನನಗ್ಯಾಕೆ ಶಾಕ್ ಆಗಬೇಕು? ಜನಸಾಗರವೇ ಕಾಂಗ್ರೆಸ್ ಪಕ್ಷದ ಶಕ್ತಿ, ಸಿದ್ದರಾಮೋತ್ಸವ ಸಿದ್ದರಾಮಯ್ಯ, ಪಕ್ಷ ಎರಡಕ್ಕೂ ಶಕ್ತಿ ತುಂಬಿದೆ. ನಾನು ಕುರ್ಚಿ ಬಗ್ಗೆ ಯೋಚನೆ ಮಾಡ್ತಿಲ್ಲ. ಕಾರ್ಯಕರ್ತರು ವಿಧಾನಸೌಧ 3ನೇ ಮಹಡಿ ಮೇಲೆ ಓಡಾಡಬೇಕು. ಒಕ್ಕಲಿಗ ಸಮುದಾಯದ ಬಳಿ ಸಹಕಾರ ಕೇಳಿದ್ರೆ ತಪ್ಪೇನು? ನಮ್ಮದು ಕಲೆಕ್ಟೀವ್ ಲೀಡರ್‌ಶಿಪ್ ಒಟ್ಟಾಗಿ ಚುನಾವಣೆ ಎದುರಿಸ್ತೀವಿ ಎಂದಿದ್ದಾರೆ.
ರಾಜಕೀಯದಲ್ಲಿ ಇನ್ಮುಂದೆ ಚದುರಂಗ ಆಡ್ತೀನಿ: ಪ್ರತಿದಿನ ನನಗೆ ಕಿರುಕುಳ ಕೊಡ್ತಿದ್ದಾರೆ. ನನ್ಮೇಲೆ ಕೇಸ್ ಹಾಕಿದವರ ಎಲ್ಲಾ ದಾಖಲೆ ಇದೆ. ನನ್ನ ಕರ್ಮ ಅನುಭವಿಸಿದ್ದೇನೆ, ನಾವು ಮಾಡಿದ್ದು ನಾವೇ ಅನುಭವಿಸಬೇಕು. ಬರೀ ಫುಟ್‌ಬಾಲ್ ಆಡ್ತಿದ್ದೆ, ಈಗ ರಾಜಕೀಯದಲ್ಲಿ ಚೆಸ್ ಆಡ್ತೀನಿ.