ನಾಗ್ಪುರ: ನನ್ನ ಮಿದುಳು ತಿಂಗಳಿಗೆ 200 ಕೋಟಿ ರೂ. ಬೆಲೆಬಾಳುತ್ತೆ. ನನಗೆ ಹಣದ ಕೊರತೆ ಇಲ್ಲ. ವಂಚನೆ ಮಾಡದೇ ಪ್ರಾಮಾಣಿಕವಾಗಿ ಹಣ ಗಳಿಸುವುದು ಹೇಗೆ ಎಂದು ನನಗೆ ತಿಳಿದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
ಸರ್ಕಾರವು ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ (E20) ಒತ್ತು ನೀಡುವ ಕುರಿತಾದ ವಿವಾದ, ವೈಯಕ್ತಿಕ ಲಾಭದ ಆರೋಪ ಬೆನ್ನಲ್ಲೇ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ಈ ಮಾತುಗಳನ್ನಾಡಿದ್ದಾರೆ. ಇದರಲ್ಲಿ ನನಗೆ ಯಾವುದೇ ವೈಯಕ್ತಿಕ ಲಾಭವಿಲ್ಲ, ರೈತರಿಗೆ ಪ್ರಯೋಜನವನ್ನು ನೀಡುವ ಸಲುವಾಗಿ ಪ್ರಯೋಗ ಮಾಡುತ್ತಿದ್ದೇನೆ. ರೈತರು ಸಮೃದ್ಧಿಯನ್ನು ಸಾಧಿಸುವವರೆಗೆ ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಗಡ್ಕರಿ ಹೇಳಿದ್ದಾರೆ. ಇದನ್ನೂ ಓದಿ: ಜಾತಿಗಣತಿ ಕಾಲಂನಲ್ಲಿ ಮತಾಂತರ ಜಾತಿಗೂ ಜಾಗ – ಸರ್ಕಾರದ ವಿರುದ್ಧ ಬಿಜೆಪಿ, ಕನಕ ಶ್ರೀ ಕಿಡಿ
ಇದಕ್ಕೂ ಮುನ್ನ ಈ ತಿಂಗಳ ಆರಂಭದಲ್ಲಿ ಇ20 ಬಿಡುಗಡೆಯನ್ನು ನಿಲ್ಲಿಸಲು ಮತ್ತು ಪಂಪ್‌ಗಳಲ್ಲಿ ಎಥನಾಲ್-ಮುಕ್ತ ಪೆಟ್ರೋಲ್ ಅನ್ನು ಕಡ್ಡಾಯಗೊಳಿಸಲು ಪ್ರಯತ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಸಾಂಪ್ರದಾಯಿಕ ಇಂಧನದೊಂದಿಗೆ ಶೇ. 20ರಷ್ಟು ಎಥೆನಾಲ್ ಅನ್ನು ಬೆರೆಸುವ ಇ20 ಪೆಟ್ರೋಲ್ ಬಗ್ಗೆ ಟೀಕಿಸಲಾಗುತ್ತಿದೆ. ಆ ಇಂಧನ ಸುರಕ್ಷಿತವಾಗಿದೆ, ನಿಯಂತ್ರಕರು ಮತ್ತು ವಾಹನ ತಯಾರಕರು ಇಬ್ಬರೂ ಅದನ್ನು ಬೆಂಬಲಿಸುತ್ತಾರೆ ಎಂದು ಗಡ್ಕರಿ ಪ್ರತಿಪಾದಿಸಿದ್ದರು. ಇದನ್ನೂ ಓದಿ: ಬೈಪಾಸ್ ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ – ಇಬ್ಬರು ಸಾವು
ಎಥನಾಲ್ ಮಿಶ್ರಣವು ತೈಲ ಆಮದುಗಳನ್ನು ಕಡಿಮೆ ಮಾಡುತ್ತದೆ. ನಾವು ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದರ ಪರಿಣಾಮವಾಗಿ, ಉತ್ತರ ಪ್ರದೇಶ, ಬಿಹಾರ ಮತ್ತು ದೇಶಾದ್ಯಂತ ಮೆಕ್ಕೆಜೋಳದ ಕೃಷಿ 3 ಪಟ್ಟು ಹೆಚ್ಚಾಗಿದೆ. ಭಾರತದ ಕೃಷಿ ಬೆಳವಣಿಗೆಯ ದರ ಸಾಂಪ್ರದಾಯಿಕವಾಗಿ ಕಡಿಮೆಯಾಗಿದೆ. ಇಂಧನ ಮತ್ತು ವಿದ್ಯುತ್ ವಲಯಕ್ಕೆ ಕೃಷಿಯ ಈ ವೈವಿಧ್ಯೀಕರಣವು ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ಆರ್ಥಿಕತೆಯನ್ನು ಬಲಪಡಿಸುತ್ತದೆ, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಎರಡು ದಿನಗಳ ವರ್ಣರಂಜಿತ ಗಗನಚುಕ್ಕಿ ಜಲಪಾತೋತ್ಸವಕ್ಕೆ ತೆರೆ