– ಮೆರವಣಿಗೆಯಲ್ಲಿ ಬಂದ ಜನರಿಗೆ ಮಜ್ಜಿಗೆ ವಿತರಣೆ
ಮೈಸೂರು: ಗಣೇಶ ಮೂರ್ತಿ ಮೆರವಣಿಗೆ ಮಸೀದಿ (Mosque) ಮುಂದೆ ಹೋದರೆ ಗ್ರಹಚಾರ ಬಿಡಿಸ್ತಿನಿ ಅಂತಾ ಟಿ. ನರಸೀಪುರ ಇನ್ಸೆಪೆಕ್ಟರ್ ಧನಂಜಯ ಧಮ್ಕಿ ಹಾಕಿದ್ರು. ಈಗ ಅದೇ ಮಸೀದಿಯ ಮುಂಭಾಗ ಸಾಗುತ್ತಿದ್ದ ಗಣೇಶ ಮೂರ್ತಿ ಮೆರವಣಿಗೆಯನ್ನ ಮುಸ್ಲಿಮರು ಸ್ವಾಗತಿಸಿದ್ದಾರೆ.
ಗಣೇಶ ಮೂರ್ತಿ ಮೆರವಣಿಗೆಯನ್ನ (Ganesha Procession) ಸ್ವಾಗತಿಸಿದ್ದಲ್ಲದೇ ಮಸೀದಿಯ ಮುಂದೆಯೆ ಮೆರವಣಿಗೆಯಲ್ಲಿ ಬಂದ ಜನರಿಗೆ ಮಜ್ಜಿಗೆ ವಿತರಿಸಿ ಭಾವೈಕ್ಯತೆ ಮೆರೆದಿದ್ದಾರೆ.

ಟಿ.ನರಸೀಪುರ ಪಟ್ಟಣದ ಲಿಂಕ್ ರಸ್ತೆಯಲ್ಲಿನ ಮಸೀದಿ ಮುಂಭಾಗ ಮಜ್ಜಿಗೆ ವಿತರಣೆ ಮಾಡಲಾಗಿದೆ. ಇದೇ ರಸ್ತೆಯಲ್ಲಿ ಮೆರವಣಿಗೆ ಸಾಗುವ ವಿಚಾರದಲ್ಲಿ ಇನ್ಸೆಪೆಕ್ಟರ್ ಧನಂಜಯ ದೊಡ್ಡ ವಿವಾದ ಮೈ ಮೇಲೆ ಎಳೆದು ಕೊಂಡಿದ್ದರು. ಇದನ್ನೂ ಓದಿ: ಪ್ರಚೋದನೆ ನೀಡಿದ ತರ್ಲೆ ಇನ್ಸ್‌ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳದೇ ನನ್ನ ಮೇಲೆ ಎಫ್‌ಐಆರ್: ಪ್ರತಾಪ್ ಸಿಂಹ

ಇದೀಗ ಮುಸ್ಲಿಮರು ತಮ್ಮ ಮಸೀದಿ ಮುಂಭಾಗ ಬರುವ ಗಣೇಶೋತ್ಸವವನ್ನು ಸ್ವಾಗತಿಸಿ ಇನ್ಸೆಪೆಕ್ಟರ್ ಧನಂಜಯಗೆ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಚೋದನಕಾರಿ ಭಾಷಣ ಆರೋಪ – ಪ್ರತಾಪ್ ಸಿಂಹ ವಿರುದ್ಧ FIR ದಾಖಲು

