ಚಂಡೀಗಢ: ಮುಸ್ಲಿಂ ಯುವಕೊಬ್ಬನನ್ನು ಗಡ್ಡ ತೆಗೆಸಬೇಕೆಂದು ಒತ್ತಾಯಿಸಿ ಕೆಲ ದುಷ್ಕರ್ಮಿಗಳು ಹಲ್ಲೆ ಮಾಡಿ, ಬಲವಂತವಾಗಿ ಕ್ಷೌರ ಮಾಡಿಸಿದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಮೇವಾಟ್ ಜಿಲ್ಲೆಯ ಬದ್ಲಿ ನಿವಾಸಿ ಜಾಫರ್ ಉದ್ದಿನ್ ಹಲ್ಲೆಗೆ ಒಳಗಾದ ಮುಸ್ಲಿಂ ಯುವಕ. ಜಾಫರ್ ಉದ್ದಿನ್‍ನನ್ನು ಕ್ಷೌರದ ಅಂಗಡಿಗೆ ಬಲವಂತವಾಗಿ ಎತ್ತಿಕೊಂಡು ಬಂದಿದ್ದಾರೆ. ಗಡ್ಡ ತೆಗೆಯಲು ನಿರಾಕರಿಸಿದ ಕ್ಷೌರಿಕನ ಮೇಲೂ ದುಷ್ಕಮಿಗಳು ಹಲ್ಲೆ ಮಾಡಿದ್ದಾರೆ.
Advertisement
ಧರ್ಮ ಸೂಚಕವಾಗಿ ಗಡ್ಡ ಬಿಟ್ಟಿರುವೆ ಎಂದು ಹೇಳಿ ಥಳಿಸಿದ ದುಷ್ಕರ್ಮಿಗಳು, ಕ್ಷೌರದ ಅಂಗಡಿಗೆ ಬಲವಂತವಾಗಿ ನನ್ನನ್ನು ಎಳೆದುಕೊಂಡು ಹೋಗಿದ್ದರು. ಕ್ಷೌರಿಕ ಗಡ್ಡ ತೆಗೆಯಲು ಹಿಂದೇಟು ಹಾಕಿದ್ದಕ್ಕೆ, ಆತನ ಮೇಲೂ ಹಲ್ಲೆ ಮಾಡಿದ್ದಾರೆ. ಅಷ್ಟೆ ಅಲ್ಲದೇ ನೀನು ಪಾಕಿಸ್ತಾನಿ ವ್ಯಕ್ತಿ, ಹೀಗಾಗಿ ಗಡ್ಡ ತೆಗೆಯಲು ಹಿಂದೇಟು ಹಾಕುತ್ತಿರುವೆ ಎಂದು ಥಳಿಸಿದ್ದರು. ಬಲವಂತವಾಗಿ ಕುರ್ಚಿಯ ಮೇಲೆ ಕೂರಿಸಿ, ಕ್ಷೌರಿಕನಿಗೆ ಗಡ್ಡ ಬೊಳಿಸುವಂತೆ ಒತ್ತಾಯಿಸಿದ್ದರು ಎಂದು ಜಾಫರ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
Advertisement
ಈ ಕುರಿತು ಜಾಫರ್ ಉದ್ದಿನ್ ಗುರುಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಈಗ ಬಲೆ ಬೀಸಿದ್ದಾರೆ.