ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪಾಲ್ಗೊಂಡಿದ್ದ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್ ನಂಟು ಹೊಂದಿದ್ದವರು ಯಾರೂ ಇರಲಿಲ್ಲ ಎಂದು ಹುಬ್ಬಳ್ಳಿಯ ಬಾಷಾ ಪೀರಾ ದರ್ಗಾದ ಧರ್ಮಗುರು (Muslim Religious Leader) ಸಯ್ಯದ್ ತಾಜುದ್ದೀನ್ ಖಾದ್ರಿ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ `ಪಬ್ಲಿಕ್ ಟಿವಿ’ಯೊಂದಿಗೆ (Public TV) ಮಾತನಾಡಿದ ಅವರು, ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಎಸ್ ಉಗ್ರರ ಜೊತೆಗೆ ನಂಟು ಇದ್ದವರು ಭಾಗವಹಿಸಿರಲಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ಸುಖಾಸುಮ್ಮನೆ ಮಾಡ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ಐಸಿಸ್ ಸಂಪರ್ಕಿತ ಮೌಲ್ವಿಗಳ ಸಭೆಗೆ ಹೋಗಿದ್ರೆ ಮಿಲಿಟರಿಗೆ ಮಾಹಿತಿ ಕೊಡಲಿ – ಪ್ರಿಯಾಂಕ್ ಖರ್ಗೆ
ಮುಸ್ಲಿಂ ಧರ್ಮಗುರುಗಳ ಸಮಾವೇಶಕ್ಕೆ 150ಕ್ಕೂ ಸೂಫಿಗಳಿಗೆ (Soofi) ಆಹ್ವಾನ ನೀಡಲಾಗಿತ್ತು. 100ಕ್ಕೂ ಹೆಚ್ಚು ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಯಾರೊಬ್ಬರೂ ಐಸಿಸ್ ಉಗ್ರರ ಜೊತೆಗೆ ನಂಟು ಹೊಂದಿದ್ದವರು ಇರಲಿಲ್ಲ. ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ ವೇದಿಕೆಯ ಮೇಲೆ 25 ಜನ ಧರ್ಮಗುರುಗಳಿಗೆ ಅವಕಾಶ ನೀಡಲಾಗಿತ್ತು. ವೇದಿಕೆಯ ಮೇಲೆ ಯಾರು ಭಾಗವಹಿಸಲಿದ್ದಾರೆಂಬ ಎಲ್ಲಾ ಮಾಹಿತಿಯನ್ನು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ನೀಡಲಾಗಿತ್ತು. ಒಂದು ವೇಳೆ ಐಸಿಎಸ್ ಉಗ್ರರ ಜೊತೆಗೆ ನಂಟು ಇದ್ದಿದ್ದಿದ್ದರೆ ಗುಪ್ತಚರ ಇಲಾಖೆಗೆ ಮಾಹಿತಿ ಇರಬೇಕಾಗಿತ್ತು. ಐಸಿಸ್ ಉಗ್ರರ ಜೊತೆಗೆ ಯಾರು ನಂಟು ಹೊಂದಿದ್ದರೆಂಬುದನ್ನು ಅವರೇ ಹೇಳಲಿ ಎಂದು ಸವಾಲ್ ಹಾಕಿದ್ದಾರೆ.
ಯತ್ನಾಳ್ ಅವರು ಉಗ್ರರ ಜೊತೆಗೆ ಸಂಪರ್ಕ ಇದ್ದವರು ಯಾರೆಂಬುದನ್ನು ಬಹಿರಂಗಪಡಿಸಲಿ, ನಾವು ಎಲ್ಲ ರೀತಿಯ ತನಿಖೆಗೆ ಸಿದ್ಧರಾಗಿದ್ದೇವೆ. ಸರಿಯಾದ ರೀತಿಯಲ್ಲಿ ತನಿಖೆ ಆಗಲಿ ಅಂತ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಾಜಿ ಸಚಿವ ಮತ್ತು ಮುಸ್ಲಿಂ ಧರ್ಮಗುರುಗಳ ಸಮಾವೇಶದ ಉಸ್ತುವಾರಿ ಎ.ಎಮ್ ಹಿಂಡಸಗೇರಿ ಮಾತನಾಡಿ, ಯತ್ನಾಳ್ ಹುಚ್ಚರಂತೆ ವರ್ತನೆ ಮಾತನಾಡುತ್ತಿದ್ದಾರೆ. ಈ ವಿಷಯ ಕೇಳಿ ನನಗೆ ಬಹಳ ಆಶ್ಚರ್ಯವಾಗಿದೆ. ಯತ್ನಾಳ್ ಅವರ ಹೇಳಿಕೆ ಸಣ್ಣ ವಿಷಯ ಅಲ್ಲ, ಸರ್ಕಾರದ ಎಲ್ಲಾ ಜನ ಪ್ರತಿನಿಧಿಗಳು ಬಂದಿದ್ರು. ಯತ್ನಾಳ ಅವರ ಮನಸ್ಸು ಸ್ಥಿರವಾಗಿಲ್ಲ. ಅವರ ಪಕ್ಷದ ವಿರುದ್ಧವೇ ಮನಸ್ಸಿಗೆ ಬಂದಂತೆ ಮಾತನಾಡ್ತಾರೆ. ಅವರಿಗೆ ಒಳ್ಳೆ ಬುದ್ಧಿ ಕೊಡಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿಮ್ಗೂ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು, ಅನ್ಯಾಯ ಆಗೋಕೆ ಬಿಡಲ್ಲ – ಮುಸ್ಲಿಂ ಸಮಾವೇಶದಲ್ಲಿ ಸಿಎಂ ಅಭಯ
ಮುಸ್ಲಿಂ ಸಮಾವೇಶದಲ್ಲಿ ಸಿಎಂ ಹೇಳಿದ್ದೇನು?
ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಸಿಗಬೇಕು. ನಿಮಗೂ ಈ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು. ಸಿಗುವಂತೆ ಮಾಡ್ತೀನಿ, ಈ ದೇಶದ ಸಂಪತ್ತನ್ನು ನಿಮಗೂ ಹಂಚುತ್ತೇನೆ. ನಿಮಗೆ ಅನ್ಯಾಯ ಮಾಡೋಕೆ ನಾನ ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡ್ತೀನಿ. ಕಾನೂನಿನ ಪ್ರಕಾರ ಎಲ್ಲಾ ಜಾತಿಯವರನ್ನೂ ರಕ್ಷಣೆ ಮಾಡ್ತೀವಿ, ಎಲ್ಲರಿಗೂ ಕಾನೂನು ಒಂದೆ. ಸೌಹಾರ್ದತೆ ತರಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತೆ. ಈ ದೇಶ ನನಗೆ ಮಾತ್ರ ಸೇರಿದ್ದಲ್ಲ, ನಿಮಗೂ ಸೇರಿದ್ದು. ನಾವೆಲ್ಲರೂ ಇಲ್ಲಿ ಒಂದೇ.
ಜಾತಿವಾದಿಗಳು, ಧರ್ಮ ಧರ್ಮಗಳ ನಡುವೆ ವೈರತ್ವ ಉಂಟು ಮಾಡೋರ ಬಗ್ಗೆ ಎಚ್ಚರ ಇರಲಿ. ಈ ವರ್ಷ 4 ಸಾವಿರ ಕೋಟಿ ಅನುದಾನ ಅಲ್ಪ ಸಂಖ್ಯಾತರ ಇಲಾಖೆಗೆ ಕೊಟ್ಟಿದ್ದೇವೆ. 10 ಸಾವಿರ ಕೋಟಿ ಹಣ ಅಲ್ಪಸಂಖ್ಯಾತ ಇಲಾಖೆಗೆ ಖರ್ಚು ಮಾಡಬೇಕು ಅನ್ನೋದು ನಮ್ಮ ಉದ್ದೇಶವಾಗಿದೆ. ನಾನು ಕೊಟ್ಟಿದ್ದ ಹಣ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ರಾಜಕೀಯ ಲಾಭಕ್ಕೆ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡ್ತಾರೆ. ಇದರಿಂದ ತಾತ್ಕಾಲಿಕ ಲಾಭ ಸಿಗಬಹುದು. ಪರಸ್ಪರ ಪ್ರೀತಿ ಇರಬೇಕಾದರೆ ನಾವು ಮನುಷ್ಯತ್ವದಿಂದ ಇರಬೇಕು ಎಂದು ಸಿಎಂ ಹೇಳಿದ್ದರು.
ಯತ್ನಾಳ್ ಆರೋಪ ಏನು?
ಕಾಂಗ್ರೆಸ್ (Congress) ಅವರು ಮುಸ್ಲಿಮರ ತುಷ್ಠೀಕರಣ ಮಾಡ್ತಿದ್ದಾರೆ. ಸಿಎಂ ಹಾಗೆ ಹೇಳಿರೋದು ದುರ್ವೈವ. ಸಾಬ್ರು ಮೀಟಿಂಗ್ ಹೋಗಿ ಹೀಗೆ ಮಾತಾಡೋದು ಸರಿಯಲ್ಲ. ಮೌಲ್ಯಿಗಳ ಸಮಾವೇಶದಲ್ಲಿ ಐಸಿಸ್ ಸಂಪರ್ಕ ಇದ್ದ ಮೌಲ್ವಿ ಒಬ್ಬ ಇದ್ದ. ಆ ಮೌಲ್ವಿಗೆ ಐಸಿಸ್ ನಿಂದ ಹಣ ಬರುತ್ತೆ. ಮೌಲ್ವಿ ಸಮಾವೇಶಕ್ಕೆ ಸಿಎಂ ಹೋಗೋದು ಸರಿಯಲ್ಲ. ಐಸಿಸ್ (ISIS) ಸಂಪರ್ಕ ಇರೋ ಮೌಲ್ವಿ ಇದ್ದಾನಾ ಇಲ್ಲವಾ ಅಂತ ಬೇಕಾದ್ರೆ ಇಂಟಲಿಜೆನ್ಸ್ ನಿಂದ ತನಿಖೆ ನಡೆಸಲಿ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: