ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ ಸಂಪರ್ಕಿತ ಮೌಲ್ವಿಗಳ (Muslims Maulvi) ಸಭೆಗೆ ಹೋಗಿದ್ರೆ ಅಮಿತ್ ಶಾಗೆ, ಮಿಲಿಟರಿಗೆ ಯತ್ನಾಳ್ ಅವರು ಮಾಹಿತಿ ಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಟಾಂಗ್ ಕೊಟ್ಟಿದ್ದಾರೆ.
ಐಸಿಸ್ ಸಂಪರ್ಕಿತ ಮೌಲ್ವಿ ಸಭೆಗೆ ಸಿಎಂ ಹೋಗಿದ್ರು ಅನ್ನೋ ಯತ್ನಾಳ್ (Basanagouda Patil Yatnal) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಹೇಳಿಕೆ ಅವರ ಪಾರ್ಟಿಯವರೇ ಸಿರಿಯಸ್ ಆಗಿ ತಗೋತೀಲ್ಲ. ಆವತ್ತು ಗಂಟೆ ಬಾರಿಸಿದ್ರು, ಇವತ್ತೂ ಗಂಟೆ ಬಾರಿಸ್ತಿದ್ದಾರೆ. ಯತ್ನಾಳ್ ಮಾತಿಗೆ ಅವರ ಪಕ್ಷದಲ್ಲೇ ಬೆಲೆಯಿಲ್ಲ. ಅಮಿತ್ ಶಾಗೆ, ಮಿಲಿಟರಿಗೆ ಮಾಹಿತಿ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿಮ್ಗೂ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು, ಅನ್ಯಾಯ ಆಗೋಕೆ ಬಿಡಲ್ಲ – ಮುಸ್ಲಿಂ ಸಮಾವೇಶದಲ್ಲಿ ಸಿಎಂ ಅಭಯ
ಸರ್ಕಾರಿ ಹುದ್ದೆ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಇಲಾಖೆ ಸೇರಿ ವಿವಿಧ ಇಲಾಖೆ ನೇಮಕಾತಿ ಕೆಪಿಎಸ್‌ಸಿ ಮೂಲಕ ಮಾಡ್ತಿದ್ದೇವೆ. ನನ್ನ ಇಲಾಖೆ ಮತ್ತು ಗೃಹ ಇಲಾಖೆ ಸೇರಿ ಅನೇಕ ಇಲಾಖೆಯ ಹುದ್ದೆಗಳು ಭರ್ತಿ ಆಗ್ತಿದೆ. ಒಂದು ವರ್ಷದಲ್ಲಿ ಹೆಚ್ಚು ಹುದ್ದೆ ಭರ್ತಿ ಮಾಡ್ತೀವಿ ಎಂದು ಭರವಸೆ ನೀದ್ದಾರೆ. ಇದನ್ನೂ ಓದಿ: ಇಬ್ಬರು ಸಿಂಗ್‍ಗಳಿಂದ ರಾಜ್ಯ ಹಾಳು, ದೆಹಲಿಗೆ ಹೋಗೋದು ನಿಶ್ಚಿತ: ಯತ್ನಾಳ್
ಸಚಿವರು ಸದನಕ್ಕೆ ಬರ್ತಿಲ್ಲ ಎಂಬ ಅಶೋಕ್ ಆರೋಪಕ್ಕೆ ತಿರುಗೇಟು ನೀಡ ಪ್ರಿಯಾಂಕ್ ಖರ್ಗೆ, ಅಶೋಕ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಶೋಕ್ ಅವರನ್ನ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿರೋದಕ್ಕೆ ಅವರ ಪಕ್ಷದಲ್ಲೇ ಸಮಾಧಾನವಿಲ್ಲ. ಕಾಂಗ್ರೆಸ್ ಬಗ್ಗೆ ಬಿಡಿ ನಿಮ್ಮದು ನೀವು ನೋಡಿಕೊಳ್ಳಿ, ಬಿಜೆಪಿ ಮನೆಗೆ ಬಿದ್ದಿರುವ ಬೆಂಕಿಯನ್ನು ಮೊದಲು ಹಾರಿಸಿ ಎಂದು ಕುಟುಕಿದ್ದಾರೆ.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರಿಗೆ ಆರ್‌ಎಸ್‌ಎಸ್ ಕಚೇರಿಗೆ ಅವಕಾಶ ಕೊಡದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಿ.ಎಲ್ ಸಂತೋಷ್‌ಗೆ ಗೂಳಿಹಟ್ಟಿ ನೇರವಾಗಿ ಕೇಳಿದ್ದಾರೆ. ನಾನು ಆರ್‌ಎಸ್‌ಎಸ್ ಕಚೇರಿಗೆ ಹೋದಾಗ ನಾನು ದಲಿತ ಅಂತ ಹೇಳಿ ಪ್ರವೇಶ ಕೊಟ್ಟಿಲ್ಲ. ಇದಕ್ಕೆ ಕ್ಲಾರಿಟಿ ಕೊಡಿ ಅಂತ ಹೇಳಿದ್ದಾರೆ. ನನಗೆ ಮಾತ್ರ ಹೀಗೆನಾ? ಸಚಿವರಿಗೂ ಹೀಗೆ ಮಾಡ್ತೀರಾ ಅಂತ ಕೇಳಿದ್ದಾರೆ. ಆರ್‌ಎಸ್‌ಎಸ್ ನೀತಿಯಲ್ಲಿ ಬಡವರಿಗೆ, ದಲಿತರಿಗೆ ಜಾಗವಿಲ್ಲ ಅಂತ ಗೊತ್ತಾಗುತ್ತಿದೆ. ಬಸವಣ್ಣ ತತ್ವ ಫಾಲೋ ಮಾಡ್ತೀನಿ ಅಂತ ಹೇಳೋ ಬಿಜೆಪಿ ನಾಯಕರು ಉತ್ತರ ಕೊಡಬೇಕು. ಬಿ.ಎಲ್ ಸಂತೋಷ್ ಅವರೇ ಕರ್ನಾಟಕ ಹಾಳು ಮಾಡೋಕೆ ಏನೇನು ಮಾಡಿದ್ರು? ಅದಕ್ಕೆಲ್ಲ ವಿಧಾನಸಭಾ ಚುನಾವಯಲ್ಲಿ ಜನರೇ ಉತ್ತರ ಕೊಟ್ಟಿದ್ದಾರೆ. ಸಂತೋಷ್ ಅವರು ಮೊದಲು ಗೂಳಿಹಟ್ಟಿ ಶೇಖರ್ ಪ್ರಶ್ನೆಗೆ ಉತ್ತರ ಕೊಡಲಿ ಎಂದಿದ್ದಾರೆ.
ಯತ್ನಾಳ್ ಹೇಳಿದ್ದೇನು?
ಕಾಂಗ್ರೆಸ್ (Congress) ಅವರು ಮುಸ್ಲಿಮರ ತುಷ್ಠೀಕರಣ ಮಾಡ್ತಿದ್ದಾರೆ. ಸಿಎಂ ಹಾಗೆ ಹೇಳಿರೋದು ದುರ್ವೈವ. ಸಾಬ್ರು ಮೀಟಿಂಗ್ ಹೋಗಿ ಹೀಗೆ ಮಾತಾಡೋದು ಸರಿಯಲ್ಲ. ಮೌಲ್ಯಿಗಳ ಸಮಾವೇಶದಲ್ಲಿ ಐಸಿಸ್ ಸಂಪರ್ಕ ಇದ್ದ ಮೌಲ್ವಿ ಒಬ್ಬ ಇದ್ದ. ಆ ಮೌಲ್ವಿಗೆ ಐಸಿಸ್ ನಿಂದ ಹಣ ಬರುತ್ತೆ. ಮೌಲ್ವಿ ಸಮಾವೇಶಕ್ಕೆ ಸಿಎಂ ಹೋಗೋದು ಸರಿಯಲ್ಲ. ಐಸಿಸ್ (ISIS) ಸಂಪರ್ಕ ಇರೋ ಮೌಲ್ವಿ ಇದ್ದಾನಾ ಇಲ್ಲವಾ ಅಂತ ಬೇಕಾದ್ರೆ ಇಂಟಲಿಜೆನ್ಸ್ ನಿಂದ ತನಿಖೆ ನಡೆಸಲಿ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: BSF ಯೋಧರನ್ನು ಬಲಿ ಪಡೆದಿದ್ದ ಉಗ್ರ ಪಾಕ್‌ನಲ್ಲಿ ಗುಂಡಿನ ದಾಳಿಗೆ ಬಲಿ- 2015ರಲ್ಲಿ ನಡೆದಿದ್ದೇನು?