ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ (G.v Prakash Kumar) ಅವರು ತಮ್ಮ 11 ವರ್ಷಗಳ ದಾಂಪತ್ಯ ಬದುಕಿಗೆ ಅಂತ್ಯ ಹಾಡಿದ್ದಾರೆ. ಡಿವೋರ್ಸ್ (Divorce) ಬಗ್ಗೆ ಮ್ಯೂಸಿಕ್ ಡೈರೆಕ್ಟರ್ ಜಿ.ವಿ ಪ್ರಕಾಶ್ ಅಧಿಕೃತ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ರಾಮ್ ಪೋತಿನೇನಿ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

View this post on Instagram
ಈ ವೈಯಕ್ತಿಕ ಪರಿವರ್ತನೆಯ ಸಮಯದಲ್ಲಿ ನಮ್ಮ ಖಾಸಗಿತನಕ್ಕೆ ಬೆಲೆ ನೀಡಬೇಕು ಎಂದು ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾವು ದಯೆಯಿಂದ ಕೇಳುತ್ತೇವೆ. ನಾವು ಬೇರೆ ಬೇರೆ ಆಗಿ ಬೆಳೆಯುತ್ತಿದ್ದೇವೆ. ಇದು ಅತ್ಯುತ್ತಮ ನಿರ್ಧಾರ ಎಂದು ನಾವು ಭಾವಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಬೆಂಬಲವು ಮುಖ್ಯ ಎಂದು ಪ್ರಕಾಶ್ ಬರೆದುಕೊಂಡಿದ್ದಾರೆ.
ಪ್ರಕಾಶ್ ಕುಮಾರ್ ಅವರು ಎ.ಆರ್ ರೆಹಮಾನ್ ಅವರ ಸೋದರಳಿಯ. ಪ್ರಕಾಶ್ ಅವರು ಬಾಲ್ಯದ ಗೆಳೆತಿ ಸೈಂಧವಿ ಅವರನ್ನು 2013ರಲ್ಲಿ ಮದುವೆ ಆದರು. 2020ರಲ್ಲಿ ಈ ದಂಪತಿ ಹೆಣ್ಣು ಮಗುವನ್ನು ಕುಟುಂಬಕ್ಕೆ ಸ್ವಾಗತಿಸಿದರು. ಈಗ ದಾಂಪತ್ಯ ಬದುಕಿಗೆ ಈ ಜೋಡಿ ಕೊನೆ ಹಾಡಿದ್ದಾರೆ.

