ಕರೆ ಬಂದ ಮೂರೇ ನಿಮಿಷಕ್ಕೆ ಹಣವಿದ್ದ ಬೆಂಜ್ ಕಾರು ಬಳಿಗೆ ಬಂದ್ವಿ: ಮುನೀಶ್ ಮೌದ್ಗಿಲ್

Public TV
1 Min Read
Munish Moudgil react on cash seiz from 3 vehicles in bengaluru

– 1.40 ಕೋಟಿ ರೂ. ಹಣ ಪತ್ತೆ

ಬೆಂಗಳೂರು: ನಮಗೆ ಬಂದ ಕರೆಯ ಆಧಾರದ ಮೇಲೆ ಜಯನಗರದಲ್ಲಿ ಕಾರಿನಲ್ಲಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ (Cash Seized) ಎಂದು ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ (Munish Moudgil) ಹೇಳಿದ್ದಾರೆ.

ನಮಗೆ ಬೆಳಗ್ಗೆ ವಾಹನದಲ್ಲಿ ಹಣ ಇರುವ ಬಗ್ಗೆ ಕರೆ ಬಂದಿತ್ತು. ಅದರ ಆಧಾರದ ಮೇಲೆ ನಮ್ಮ ಅಧಿಕಾರಿ ನಿಖಿತ ಅವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ತಕ್ಷಣ ಅಧಿಕಾರಿಗಳ ಜೊತೆ ನಾನು ಸಹ ಸ್ಥಳಕ್ಕೆ ಬಂದೆ. ಕರೆ ಬಂದ ಮೂರು ನಿಮಿಷಗಳಲ್ಲೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ಬೆಂಜ್ ಕಾರಿನ ಗ್ಲಾಸ್ ಒಡೆದು ಕಂತೆ ಕಂತೆ ಹಣ ಸೀಜ್ ಮಾಡಿದ ಮಹಿಳಾ ಅಧಿಕಾರಿ

ನಾವು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಸ್ಕೂಟರ್‌ನಿಂದ ಫಾರ್ಚೂನರ್ ಕಾರಿಗೆ ಹಣ ಶಿಫ್ಟ್ ಮಾಡುತ್ತಿದ್ದರು. ಕಾರಿನಲ್ಲಿ ಒಟ್ಟು ಐದು ಜನ ಇದ್ದರು. ಈ ವೇಳೆ ನಿಖಿತ ಅವರು ಒಬ್ಬರೇ ತೆರಳಿ, ಚೀಲದಲ್ಲಿರುವುದು ಏನು ಎಂದು ಪ್ರಶ್ನಿಸಿದ್ದಾರೆ. ಬಳಿಕ ದ್ವಿಚಕ್ರ ವಾಹನದಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಐವರು ನಾಪತ್ತೆಯಾಗಿದ್ದು, ಫಾರ್ಚೂನರ್ ನಂಬರ್‌ನ್ನು ದಾಖಲಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಸಿಕ್ಕ ಬೆಂಜ್ ಕಾರು ಗುರುವಾರ ಕೊಂಡುಕೊಳ್ಳಲಾಗಿದೆ. ಈಗ ಹಣದ ಲೆಕ್ಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪತ್ತೆಯಾದ ಬ್ಯಾಗ್‌ಗಳಲ್ಲಿ 1.40 ಕೋಟಿ ರೂ. ಹಣ ಇರುವ ಬಗ್ಗೆ ಪೊಲೀಸ್ ಮೂಲಗಳು `ಪಬ್ಲಿಕ್ ಟಿವಿ’ಗೆ ತಿಳಿಸಿವೆ. ಇದನ್ನೂ ಓದಿ: ಇಡಿ ಬಂಧನ ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಅರ್ಜಿ – ಸೋಮವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್

Share This Article