ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

Public TV
1 Min Read
DOG

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ (Stray Dog) ಕಾಟ ಮಿತಿಮೀರಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡವರು ಬರೋಬ್ಬರಿ 6,533 ಜನ. ಹೀಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತ ನಾಯಿಗಳ ಸಂತಾನ ಹರಣ (Treatment for infertility) ಚಿಕಿತ್ಸೆಗೆ ಮುಂದಾಗಿದೆ.

ಇದರ ಭಾಗವಾಗಿ ಖಾಸಗಿಯವರೊಂದಿಗೆ ಸ್ಥಳೀಯ ಆಡಳಿತದ ಸಿಬ್ಬಂದಿ ಸೇರಿ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ಪುರಸಭೆಯ ಸಿಬ್ಬಂದಿ ಮಾತ್ರ ಬೀದಿನಾಯಿಗಳನ್ನು ಹಿಡಿಯುವುದರಲ್ಲಿ ರಾಕ್ಷಸತನ ತೋರಿದ್ದಾರೆ. ಇದನ್ನೂ ಓದಿ: IMA ನಡೆಸುತ್ತಿದ್ದ ಸ್ಕೂಲ್ ಬಂದ್‍ಗೆ ಹೈಕೋರ್ಟ್ ಆದೇಶ- ಮಕ್ಕಳ ಭವಿಷ್ಯದ ಬಗ್ಗೆ ಕಂಗಾಲಾದ ಪೋಷಕರು

dog

ಹೌದು ಹಳಿಯಾಳ ನಗರದಲ್ಲಿ ಬೀದಿ ಬೀದಿಗಳನ್ನು ಜಾಲಾಡಿದ ಪುರಸಭೆ ಸಿಬ್ಬಂದಿ ಬೇಕಾ ಬಿಟ್ಟಿ ಬೀದಿನಾಯಿಗಳನ್ನು ನಿಯಮ ಮೀರಿ ಹಿಂಸಾತ್ಮಕ ರೀತಿಯಲ್ಲಿ ಹಿಡಿದಿದ್ದಾರೆ. ಇನ್ನೂರಕ್ಕೂ ಹೆಚ್ಚು ಬೀದಿನಾಯಿಗಳನ್ನು ಹಿಡಿದ ಪುರಸಭೆ (Municipality) ಸಿಬ್ಬಂದಿ ಮಾಡಿದ್ದ ಕೆಲಸ ಮಾತ್ರ ಎಡವಟ್ಟಿನದ್ದು. ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಹಳಿಯಾಳದಿಂದ ಯಲ್ಲಾಪುರ ಭಾಗದ ಕಾಡಿನಲ್ಲಿ 80ಕ್ಕೂ ಹೆಚ್ಚು ನಾಯಿಗಳನ್ನು ತಂದು ಬಿಟ್ಟಿದ್ದಾರೆ.

ಈ ಭಾಗದಲ್ಲಿ ಹೆಚ್ಚು ಕಾಡು (Wild) ಇದ್ದು, ಚಿರತೆ, ಹುಲಿಗಳಿವೆ. ಹೀಗೆ ಬೇಕಾಬಿಟ್ಟಿ ಕಾಡಿನಲ್ಲಿ ಬಿಟ್ಟಿದ್ದರಿಂದ ಇದೀಗ ಬೀದಿ ನಾಯಿಗಳಿಗೆ ಆಹಾರ ವಿಲ್ಲದೇ ಸಾಯುವ ಆತಂಕವಿದ್ದರೆ, ಕಾಡುಪ್ರಾಣಿಗಳಿಗೆ (Wild Animal) ಸುಲಭವಾಗಿ ಆಹಾರವಾಗುತ್ತಿವೆ. ಪುರಸಭೆ ಸಿಬ್ಬಂದಿಗಳು ಮಾಡಿದ ಅಚಾತುರ್ಯದ ಕೆಲಸಕ್ಕೆ ಪ್ರಾಣಿ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ಇದನ್ನೂ ಓದಿ: ಭಾರತ ಎಂದಿಗೂ ಹಿಂದೂರಾಷ್ಟ್ರ – ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ: ಸುನಿಲ್ ಕುಮಾರ್

ಹಳಿಯಾಳದ ಮಾತೃಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ಕೆ ಯೋಗರಾಜ್‍ರವರು ಪುರಸಭೆ ಸಿಬ್ಬಂದಿ ಅಮಾನುಷ ವರ್ತನೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದಲ್ಲದೇ ಪಶುಸಂಗೋಪನ ಇಲಾಖೆಯಿಂದಲೂ ಪುರಸಭೆ ಸಿಬ್ಬಂದಿ ಕೃತ್ಯಕ್ಕೆ ನೋಟಿಸ್ ಜಾರಿಮಾಡಿದ್ದು, ಇದೀಗ ಹಳಿಯಾಳ ತಾಲೂಕಿನಲ್ಲಿ ಪುರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *