ಮುಂಬೈ: ಕೋವಿಡ್-19 ಹೊಸ ರೂಪಾಂತರ ತಳಿ ಓಮಿಕ್ರಾನ್ ಭೀತಿಯಿಂದಾಗಿ ಮುಂಬೈನಲ್ಲಿ ಶಾಲೆಗಳ ಪುನರಾರಂಭವನ್ನು ಮುಂದೂಡಲಾಗಿದೆ.
ಮುಂಬೈನಲ್ಲಿ 1 ರಿಂದ 7ನೇ ತರಗತಿಯ ಶಾಲೆಗಳು ನಾಳೆ ಅಂದರೆ ಡಿಸೆಂಬರ್ 1 ಆರಂಭವಾಗಬೇಕಿದ್ದ ಶಾಲೆಗಳನ್ನು ಡಿಸೆಂಬರ್ 15 ರಿಂದ ತೆರೆಯುವುದಾಗಿ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮಂಗಳವಾರ ತಿಳಿಸಿದೆ. ಆದರೆ ಮಹಾರಾಷ್ಟ್ರದ ಕೆಲವು ಶಾಲೆಗಳನ್ನು ನಾಳೆಯಿಂದಲೇ ತೆರೆಯಲಾಗುತ್ತಿದೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿ ನಮ್ಮ ದೇಶದಲ್ಲೂ ಇರಬಹುದು: ಡಾ.ಸಿ.ಎಸ್ ಮಂಜುನಾಥ
Advertisement
Advertisement
ಕೋವಿಡ್-19 ಹೊಸ ರೂಪಾಂತರ ತಳಿ ಓಮಿಕ್ರಾನ್‍ನ ಆತಂಕದಿಂದ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಲಾಗಿದೆ. ಅಪಾಯದಲ್ಲಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಬಗ್ಗೆ ರಾಜ್ಯ ಸಚಿವ ಸಂಪುಟ ಕಳವಳ ವ್ಯಕ್ತಪಡಿಸಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಸೋಮವಾರ ಹೇಳಿದ್ದಾರೆ.
Advertisement
Advertisement
ವಿಶ್ವದಲ್ಲಿ ಹಬ್ಬುತ್ತಿರುವ ಕೋವಿಡ್-19ನ ತಳಿ ಓಮಿಕ್ರಾನ್ ಅನ್ನು ತಡೆಗಟ್ಟುವ ದೃಷ್ಟಿಯಿಂದ 1-7ನೇ ತರಗತಿಯವರೆಗೂ ಶಾಲೆಗಳನ್ನು ಡಿಸೆಂಬರ್ 1ರ ಬದಲಾಗಿ ಡಿಸೆಂಬರ್ 15 ರಿಂದ ಪುನಾರಂಭಿಸಲಾಗುತ್ತದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮಾಧ್ಯಮಕ್ಕೆ ತಿಳಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಯಾವಾಗ ಕುಡಿತಾರೋ, ಯಾವಾಗ ಕುಡಿಯಲ್ಲೊ ಗೊತ್ತಿಲ್ಲ: ಕೆ.ಎಸ್.ಈಶ್ವರಪ್ಪ
ಭಾರತದಲ್ಲಿ ಯಾವುದೇ ಓಮಿಕ್ರಾನ್ ಪ್ರಕರಣಗಳು ವರದಿಯಾಗಿಲ್ಲ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಇಂದು ಕೋವಿಡ್-19 ರೂಪಾಂತರ ತಳಿ ಓಮಿಕ್ರಾನ್ ಕುರಿತು ರಾಜ್ಯಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.