DistrictsKalaburagiKarnatakaLatestMain Post

ಸಿದ್ದರಾಮಯ್ಯ ಯಾವಾಗ ಕುಡಿತಾರೋ, ಯಾವಾಗ ಕುಡಿಯಲ್ಲೊ ಗೊತ್ತಿಲ್ಲ: ಕೆ.ಎಸ್.ಈಶ್ವರಪ್ಪ

ಕಲಬುರಗಿ: ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ಲೋ ಗೊತ್ತೆ ಆಗಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಭಯೋತ್ಪಾದಕ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ಲೊ ಗೊತ್ತಿಲ್ಲ. ಅವರು ಹೆಂಡಾ ಕುಡಿದಾಗ ಒಂದು ಮಾತನಾಡುತ್ತಾರೆ. ಹೆಂಡ ಕುಡಿಯದೇ ಇದ್ದಾಗ ಒಂದು ಮಾತನಾಡುತ್ತಾರೆ. ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ ಸಿದ್ದರಾಮಯ್ಯರ ರಕ್ತದ ಕಣಕಣದಲ್ಲಿ ಮೋಸ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ. ದನ್ನೂ ಓದಿ: ಸಿದ್ದರಾಮಯ್ಯ, ಜಿಟಿಡಿ ನಡುವಿನ ಹೊಸ ಲವ್ ಸಕ್ಸಸ್ ಆಗಲ್ಲ: ಎಸ್.ಟಿ. ಸೋಮಶೇಖರ್

ಸಿದ್ದರಾಮಯ್ಯ ಮೊದಲು ಜೆಡಿಎಸ್‍ಗೆ ಮೋಸ ಮಾಡಿದ್ರು. ಆ ನಂತರ ಶ್ರೀನಿವಾಸ್ ಪ್ರಸಾದ್‍ಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್‍ಗೂ ಮೋಸ ಮಾಡಲು ರೆಡಿ ಆಗಿದ್ದಾರೆ. ನಳಿನ್ ಕುಮಾರ ಕಟೀಲ್ ಒಬ್ಬ ದೇಶಭಕ್ತ ಅಂತವರ ಬಗ್ಗೆ ಮೋಸಗಾರ ಸಿದ್ದರಾಮಯ್ಯ ಏನು ಮಾತಾಡ್ತಾರೆ? ಜಮೀರ್ ಅಹ್ಮದ್ ಅಂತವರನ್ನು ಸಿದ್ದರಾಮಯ್ಯ ಹೊಗಳುತ್ತಾರೆ. ನಳಿನ್ ಕುಮಾರ್ ಕಟೀಲ್ ಅಂತಹ ದೇಶ ಭಕ್ತರನ್ನು ಭಯೋತ್ಪಾದಕ ಅಂತಾರೆ ಎಂದು ಏಕವಚನದಲ್ಲೇ ಎಂದು ಗುಡುಗಿದ್ದಾರೆ. ದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ : ಅಖಿಲೇಶ್ ಯಾದವ್

ಇದೆ ವೇಳೆ ಬಿಜೆಪಿ ಹೈ ಕಮಾಂಡ್ ಸಚಿವರ ರಹಸ್ಯ ವರದಿ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ರಹಸ್ಯ ವರದಿ ನನಗಂತೂ ಗೊತ್ತಿಲ್ಲ, ನೀವು ಸಿಐಡಿ ಡಿಪಾರ್ಟ್‍ಮೆಂಟ್‍ನಲ್ಲಿ ಇರಬಹುದೇನೋ, ಆರ್‍ಎಸ್‍ಎಸ್ ಮತ್ತು ಬಿಜೆಪಿಯಲ್ಲಿರುವ ಸಿಐಡಿ ಡಿಪಾರ್ಟ್‍ಮೆಂಟ್‍ನಲ್ಲಿ ನೀವು ಇರಬಹುದು. ನನಗಂತೂ ಗೊತ್ತಿಲ್ಲ. ಇದೆಲ್ಲ ಸುಳ್ಳು ಸುದ್ದಿ ಹೈಕಮಾಂಡ್ ಯಾವುದೇ ರಹಸ್ಯ ವರದಿ ತರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published.

Back to top button