ಚಹಾದ ಹೊತ್ತು ಅಥವಾ ಊಟದ ಸಮಯವಲ್ಲದ ವೇಳೆ ನಿಮ್ಮ ಹಸಿವನ್ನು ತಣಿಸಲು ಏನಾದರೂ ಆರೋಗ್ಯಕರ ಸ್ನ್ಯಾಕ್ಸ್ ರೆಸಿಪಿಯನ್ನು ನೀವು ಹುಡುಕುತ್ತಿದ್ದರೆ, ನಾವಿಂದು ಅದಕ್ಕೆ ಪರ್ಫೆಕ್ಟ್ ಎನಿಸುವ ಒಂದು ರೆಸಿಪಿ ಹೇಳಿಕೊಡುತ್ತೇವೆ. ಬಹು ಧಾನ್ಯಗಳ ರುಚಿಕರ ನಿಪ್ಪಟ್ಟು (Multigrain Nippattu) ಮಾಡುವ ವಿಧಾನವನ್ನು ನೀವು ಇಲ್ಲಿ ಕಲಿತುಕೊಳ್ಳಿ.
Advertisement
ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು – ಮುಕ್ಕಾಲು ಕಪ್
ಜೋಳದ ಹಿಟ್ಟು – ಅರ್ಧ ಕಪ್
ರಾಗಿ ಹಿಟ್ಟು – ಕಾಲು ಕಪ್
ಎಣ್ಣೆ – 5 ಟೀಸ್ಪೂನ್
ಬಿಳಿ ಎಳ್ಳು – 2 ಟೀಸ್ಪೂನ್
ಅಗಸೆ ಬೀಜ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 3
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ನೀರು – ಅರ್ಧ ಕಪ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ತುಂಬಾ ಸಿಂಪಲ್ ರೆಸಿಪಿ – ರುಚಿಯಾದ ರವಾ ಟೋಸ್ಟ್ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಿಳಿ ಎಳ್ಳನ್ನು ಪ್ಯಾನ್‌ಗೆ ಹಾಕಿ ಅದು ಸಿಡಿಯುವವರೆಗೆ ಹುರಿದುಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ ಬದಿಗಿಡಿ.
* ಬಳಿಕ ಅಗಸೆ ಬೀಜವನ್ನು ಹುರಿಯಿರಿ. ಅಗಸೆ ಬೀಜ ಸಿಡಿಯುವುದು ಕಡಿಮೆಯಾದ ಬಳಿಕ ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ಬದಿಗಿಡಿ.
* ಅಗಸೆ ಬೀಜ ತಣ್ಣಗಾದ ಬಳಿಕ ಅದನ್ನು ಮಿಕ್ಸರ್ ಜಾರ್‌ಗೆ ಹಾಕಿ ಪುಡಿ ಮಾಡಿ.
* ಈಗ ಒಂದು ಪಾತ್ರೆಗೆ ಅಗಸೆ ಬೀಜದ ಪುಡಿ, ಹುರಿದ ಎಳ್ಳು, ಗೋಧಿ ಹಿಟ್ಟು, ಜೋಳದ ಹಿಟ್ಟು ಹಾಗೂ ರಾಗಿ ಹಿಟ್ಟನ್ನು ಹಾಕಿ ಮಿಶ್ರಣ ಮಾಡಿ.
* ಅದಕ್ಕೆ ಉಪ್ಪು, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವಿನ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.
* ಈಗ 5 ಟೀಸ್ಪೂನ್ ಎಣ್ಣೆ ಸೇರಿಸಿ, ನಿಮ್ಮ ಕೈಗಳಿಂದ ಮಿಶ್ರಣ ಮಾಡಿ.
* ಬಳಿಕ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ ಹಿಟ್ಟಿನಂತೆ ಮಿಶ್ರಣ ಮಾಡಿ.
Advertisement
* ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಸ್ಥಿರತೆ ನೋಡಿಕೊಂಡು ಬೇಕೆಂದರೆ ಇನ್ನಷ್ಟು ನೀರು ಸೇರಿಸಿ ಮಿಶ್ರಣ ಮಾಡಿ.
* ಈಗ ಹಿಟ್ಟಿಗೆ ಅರ್ಧ ಗಂಟೆ ವಿಶ್ರಾಂತಿ ನೀಡಿ.
* ಒವನ್ ಅನ್ನು 8-10 ನಿಮಿಷ 180 ಡಿಗ್ರಿ ಉಷ್ಣತೆಯಲ್ಲಿ ಪೂರ್ವಭಾವಿಯಾಗಿ ಕಾಯಿಸಿಟ್ಟುಕೊಳ್ಳಿ.
* ಹಿಟ್ಟನ್ನು 2 ಭಾಗ ಮಾಡಿ, ಸುತ್ತಿಕೊಂಡು, ಲಟ್ಟಣಿಗೆ ಸಹಾಯದಿಂದ ರೋಟಿಗಿಂತಲೂ ಸ್ವಲ್ಪ ದಪ್ಪಗೆ ಲಟ್ಟಿಸಿಕೊಳ್ಳಿ.
* ಈಗ ಕುಕೀ ಕಟರ್ ಅಥವಾ ಯಾವುದಾದರೂ ಮುಚ್ಚಳದ ಸಹಾಯದಿಂದ ಹಿಟ್ಟನ್ನು ಒತ್ತಿ, ನಿಪ್ಪಟ್ಟು ಆಕಾರಕ್ಕೆ ಕತ್ತರಿಸಿಕೊಳ್ಳಿ. ಹೀಗೆ ಸಂಪೂರ್ಣ ಹಿಟ್ಟನ್ನು ನಿಪ್ಪಟ್ಟು ಆಕಾರಕ್ಕೆ ತರುವುದನ್ನು ಮುಂದುವರಿಸಿ.
* ಬಳಿಕ ನಿಧಾನವಾಗಿ ನಿಪ್ಪಟ್ಟುಗಳನ್ನು ತೆಗೆದು, ಬಟರ್ ಪೇಪರ್ ಹರಡಿರುವ ಟ್ರೇಯಲ್ಲಿ ಜೋಡಿಸಿ.
* ಈಗ ಟ್ರೇಯನ್ನು ಒವನ್‌ನಲ್ಲಿಟ್ಟು, 160 ಡಿಗ್ರಿ ಬಿಸಿಯಲ್ಲಿ 15 ನಿಮಿಷಗಳ ಕಾಲ ಬೇಯಿಸಿ.
* ನಿಪ್ಪಟ್ಟಿನ ಅಂಚು ಕೆಂಪಗಾಗುತ್ತಿದ್ದಂತೆ ಅವುಗಳನ್ನು ಒವನ್‌ನಿಂದ ತೆಗೆದು ಆರಲು ಬಿಡಿ.
* ಇದೀಗ ಗರಿಗರಿಯಾದ ಆರೋಗ್ಯಕರ ಮಲ್ಟಿಗ್ರೇನ್ ನಿಪ್ಪಟ್ಟು ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ನೀವಿದನ್ನು ಗಾಳಿಯಾಡದ ಡಬ್ಬಿಯಲ್ಲಿಟ್ಟರೆ 15-20 ದಿನಗಳ ವರೆಗೆ ಬೇಕೆಂದಾಗ ಸವಿಯಬಹುದು. ಇದನ್ನೂ ಓದಿ: ಸಿಹಿ, ಖಾರ ಮಿಶ್ರಿತ ಹನಿ ಚಿಲ್ಲಿ ಎಗ್ ಮಾಡಿ ಬಾಯಿ ಚಪ್ಪರಿಸಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k