ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಅವರು ದುಬೈನಲ್ಲಿ (Dubai) ಆಸ್ತಿಗಳನ್ನು ಖರೀದಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ತಮ್ಮ ಪುತ್ರನಿಗಾಗಿ ದುಬೈನಲ್ಲಿ ದುಬಾರಿ ವಿಲ್ಲಾ (Villa) ಒಂದನ್ನು ಖರೀದಿ ಮಾಡಿರುವುದಾಗಿ ಸುದ್ದಿಯಾಗಿದ್ದರು. ಇದೀಗ ಮತ್ತೊಂದು ಭಾರೀ ಬೆಲೆಯ ವಿಲ್ಲಾ ಖರೀದಿ ಮಾಡಿರುವುದಾಗಿ ವರದಿಯಾಗಿದೆ.
ಅಂಬಾನಿ ಅವರು ಕಳೆದ ವಾರ ಕುವೈತ್ನ ಉದ್ಯಮಿ ಮೊಹಮ್ಮದ್ ಅಲ್ಶಯಾ ಅವರ ಕುಟುಂಬದಿಂದ ವಿಲ್ಲಾವನ್ನು ಖರೀದಿ ಮಾಡಿದ್ದಾರೆ. ಸಮುದ್ರ ತೀರದಲ್ಲಿರುವ ದುಬಾರಿ ವಿಲ್ಲಾ ಸುಮಾರು 163 ಮಿಲಿಯನ್ ಡಾಲರ್ಗೆ (ಸುಮಾರು 1,439 ಕೋಟಿ ರೂ.) ಮಾರಾಟವಾಗಿದೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಕಾರಿನಿಂದ ಇಳಿದು ಟ್ರಾಫಿಕ್ ಕ್ಲಿಯರ್ ಮಾಡಿದ ಸುಪ್ರಿಯಾ ಸುಲೆ
Advertisement
Advertisement
Advertisement
ಇದೇ ವರ್ಷ ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ 80 ಮಿಲಿಯನ್ ಡಾಲರ್ (ಸುಮಾರು 661 ಕೋಟಿ ರೂ.) ಮೌಲ್ಯದ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದರು. ಆ ಬಂಗಲೆ ಇದೀಗ ಅಂಬಾನಿ ಖರೀದಿಸಿರುವ ವಿಲ್ಲಾದ ಸಮೀಪವೇ ಇದೆ ಎನ್ನಲಾಗಿದೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ
Advertisement
ಕಳೆದ ವರ್ಷ ರಿಲಯನ್ಸ್ ಸಂಸ್ಥೆ ದುಬೈನಲ್ಲಿ ಸ್ಟೋಕ್ ಪಾರ್ಕ್ ಎಂಬ ಕಂಟ್ರಿ ಕ್ಲಬ್ ಅನ್ನು 79 ಮಿಲಿಯನ್ ಡಾಲರ್ಗೆ (656 ಕೋಟಿ ರೂ.) ಖರೀದಿ ಮಾಡಿದ್ದರು. ಈ ಮೂಲಕ ಅಂಬಾನಿ ಅವರು ಇತ್ತೀಚೆಗೆ ದುಬೈನಲ್ಲಿ ಆಸ್ತಿ ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.