ಬೆಂಗಳೂರು: ಅಕ್ರಮವಾಗಿ ಸಿಕ್ಕಿದ ಮೈಸೂರು (Mysuru) ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಬೇಕು ಹಾಗೂ ಅಕ್ರಮದ ಆ ತಪ್ಪಿಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ (N Ravikumar) ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ಕಾನೂನು, ನಿಯಮ, ನಿರ್ದೇಶನಗಳಿಗೆ ಅವರು ವಿರುದ್ಧವಾಗಿ ವರ್ತಿಸಿದ್ದರು ಎಂಬ ಕಾರಣಕ್ಕೆ ಮುಡಾದ ಹಿಂದಿನ ಅಧಿಕಾರಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಿದ್ದಾರೆ. ಈ ಮೂಲಕ ಮುಡಾದ ನಿರ್ಣಯಗಳು, ನಿರ್ದೇಶನಗಳು, ನಿರ್ಧಾರಗಳು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದೀರಿ ಎಂದು ವಿಶ್ಲೇಷಿಸಿದರು. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಗ್ರೀನ್ ಸಿಗ್ನಲ್
Advertisement
ಮುಖ್ಯಮಂತ್ರಿಗಳಿಗೆ ಸಮಾನಾಂತರ ಬಡಾವಣೆಯಲ್ಲಿ ಸೈಟ್ ಸಿಕ್ಕಿದ್ದಲ್ಲ. ಬಹಳ ದೊಡ್ಡ ಮಟ್ಟದಲ್ಲಿ ಬೆಲೆಬಾಳುವ ನಿವೇಶನಗಳಿರುವ ಬಡಾವಣೆ ಅದಾಗಿದೆ. ಚದರಡಿಗೆ 1 ಸಾವಿರ ರೂ. ಸಿಗುವ ಜಾಗ ಬಿಟ್ಟು 10 ಸಾವಿರದಿಂದ 12 ಸಾವಿರ ರೂ.ಗೆ ಚದರಡಿ ಇರುವಂಥ ಪ್ರದೇಶದಲ್ಲಿ ಸೈಟ್ ಪಡೆದುದು ಅಕ್ರಮ ಎಂದು ತಿಳಿಸಿದರು. ದಿನೇಶ್ ಕುಮಾರ್ (GT Dinesh Kumar) ಅಮಾನತು ತಮಗೆ ಗೊತ್ತಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಮೈಸೂರು ಮುಡಾದ ಅಕ್ರಮ ಸಂಬಂಧದಲ್ಲೇ ಅಧಿಕಾರಿ ಅಮಾನತಾಗಿದ್ದಾರೆ. ನಿಮ್ಮ ಜಾಣ ಉತ್ತರವು ಕರ್ನಾಟಕದ (Karnataka) ಜನರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ ಎಂದು ಹೇಳಿದರು.
Advertisement
Advertisement
ದಿನೇಶ್ ಕುಮಾರ್ ಅಮಾನತು ತಮಗೆ ಗೊತ್ತಿಲ್ಲ ಎಂಬ ಉತ್ತರವು ಕರ್ನಾಟಕದ ಜನರನ್ನು ದಿಗ್ಭ್ರಾಂತರನ್ನಾಗಿ ಮತ್ತು ಮೂಢರನ್ನಾಗಿ ಮಾಡುವಂಥದ್ದು. ನಿವೇಶನ ಅಭಿವೃದ್ಧಿ ವೇಳೆ 15%ರಷ್ಟು ಉದ್ಯಾನ ಸಂಬಂಧಿಸಿದ ಜಮೀನು, 10%ರಷ್ಟು ನಾಗರಿಕ ಸೌಲಭ್ಯಕ್ಕೆ ಜಾಗ ಕೊಟ್ಟಿಲ್ಲ ಎಂಬುದು ಅಮಾನತಿಗೆ ಒಂದು ಕಾರಣ. 2009ರಿಂದ ಜಾರಿಗೊಂಡ 50-50 ಅನುಪಾತದ ನಿಯಮಗಳು ಅನ್ವಯವಾಗುವುದಿಲ್ಲವಾದ್ದರಿಂದ ಪ್ರಾಧಿಕಾರದಿಂದ ಬದಲಿ ನಿವೇಶನ ಮಂಜೂರಾತಿಗೆ ಶೇ. 50-50 ಅನುಪಾತದಂತೆ ಕೈಗೊಂಡಿರುವ ಯಾವುದೇ ಕ್ರಮವೂ ಕಾನೂನು ಬಾಹಿರವಾಗಿರುತ್ತದೆ ಎಂದು ಇನ್ನೊಂದು ಪ್ರಮುಖ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನಾವೂ ಇದೇ ಪ್ರಶ್ನೆಯನ್ನು ಎತ್ತಿದ್ದೆವು ಎಂದು ವಿವರಿಸಿದರು. ಇದನ್ನೂ ಓದಿ: ಚೆನ್ನೈ ಕಾರ್ಪೊರೇಷನ್ ಸಭೆಯಲ್ಲಿ ಡಿಕೆ ಶಿವಕುಮಾರ್ ಭಾಗಿ
Advertisement
2009ರ ಮೇಲ್ಪಟ್ಟು ಇದು ಜಾರಿಯಾಗುತ್ತದೆ. 2015ಕ್ಕೆ ಇದನ್ನು ಜಾರಿ ಮಾಡಿದ್ದರು. ಮುಡಾದಲ್ಲಿ ಈ ಸಂಬಂಧ ಸಭೆ ನಡೆದಿತ್ತು. ಆ ಜನರಲ್ ಬಾಡಿ ಮೀಟಿಂಗ್‌ನಲ್ಲಿ ರಾಮದಾಸ್, ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ ಮೊದಲಾದವರು ಭಾಗವಹಿಸಿದ್ದರು. ಅದರೊಳಗೆ ಇಬ್ಬರನ್ನು ಬಿಟ್ಟು ಎಲ್ಲರೂ ಅದನ್ನು (ಶೇ.50-50 ಅನುಪಾತ) ವಿರೋಧಿಸಿದ್ದರು. ಆದರೆ, ಅಲ್ಲಿನ ಚರ‍್ಮನ್ ರಾಜೀವ್, ಕಮಿಷನರ್ ನಟೇಶ್ ಹೊರತುಪಡಿಸಿ ಎಲ್ಲರೂ ವಿರೋಧಿಸಿದ್ದು, ಕಾನೂನೇ ಆಗಿರಲಿಲ್ಲ. ಆದರೆ, ನಿಯಮ ಆಗಿದೆ ಎಂದು ನಕಲಿ ನಿರ್ಣಯ ಮಾಡಿ ಅದರ ಪ್ರಕಾರ 14 ಸೈಟ್‌ಗಳನ್ನು ಇವರಿಗೆ ಕೊಟ್ಟಿದ್ದರು ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಇಂದು ಬ್ರುನೈಗೆ ಪ್ರಧಾನಿ ಮೋದಿ ಭೇಟಿ – 7 ಸಾವಿರ ಕಾರುಗಳ ಒಡೆಯ ಬ್ರುನೈ ಸುಲ್ತಾನನಿಂದ ಸ್ವಾಗತ
ಶೇ.50-50 ಅನುಪಾತವೇ ಅನುಷ್ಠಾನಕ್ಕೆ ಬಂದಿರಲಿಲ್ಲ. ಆಗಿದೆ ಎಂದು ಸಿದ್ದರಾಮಯ್ಯನವರು (CM Siddaramaiah) ಹೇಳುತ್ತಿದ್ದರು. ಶೇ.50-50 ಅನುಪಾತವೇ ಜಾರಿಯಲ್ಲಿಲ್ಲ ಎಂದ ಮೇಲೆ ಸಿದ್ದರಾಮಯ್ಯನವರು 14 ಸೈಟ್‌ಗಳನ್ನು ಏನು ಮಾಡುತ್ತಾರೆ? ಅನಧಿಕೃತವಾಗಿ, ಕಾನೂನುಬಾಹಿರವಾಗಿ ಪಡೆದ 14 ಸೈಟ್‌ಗಳನ್ನು ವಾಪಸ್ ಕೊಡುತ್ತಾರಾ ಎಂದು ಕೇಳಿದರು. ಇದನ್ನೂ ಓದಿ: ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ: ಜಮೀರ್
ಇದೊಂದು ಬಹುದೊಡ್ಡ ಹಗರಣ. ರಾಜ್ಯ ಸರ್ಕಾರದ ಕೈಕೆಳಗೆ ಇರುವ ಸಂಸ್ಥೆ ಬಿಟ್ಟು ಬೇರೆ ಸಂಸ್ಥೆಗೆ ತನಿಖೆಗೆ ಕೊಡಬೇಕೆಂಬ ಆಗ್ರಹ ತಮ್ಮದು ಎಂದು ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಟಿವಿಗಾಗಿ ದರ್ಶನ್ ಮೊರೆ
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಅವರು ಮಾತನಾಡಿ, ಅಕ್ರಮದ ವಿರುದ್ಧ ಬಿಜೆಪಿ ಸತತ ಹೋರಾಟ ಮಾಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕ ಮಾಡಿದ ತಾಂತ್ರಿಕ ಪರಿಣಿತರ ಸಮಿತಿ ವರದಿಯನ್ನು 2003ರಲ್ಲೇ ಕೊಡಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಅದನ್ನು ಧೂಳು ಹಿಡಿಸಿ ಇಟ್ಟುಕೊಂಡು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ರೀತಿಯಲ್ಲಿ ಈಗ ಒಬ್ಬ ಆಯುಕ್ತರನ್ನು ಅಮಾನತು ಮಾಡಿದ್ದಾರೆ. ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ | ಸೊಳ್ಳೆ ಉತ್ಪತ್ತಿಯಾದ್ರೆ ಬೀಳುತ್ತೆ ದಂಡ – ಮನೆ, ಹೋಟೆಲ್ ಮಾಲೀಕರಿಗೆ ಎಷ್ಟು?
ಸಿದ್ದರಾಮಯ್ಯನವರ 14 ನಿವೇಶನಗಳೂ ಶೇ. 50-50 ಅನುಪಾತದಡಿ ಸಿಕ್ಕಿದ್ದು ತಾನೇ? ಆ ಆಯುಕ್ತರನ್ನು ಯಾಕೆ ಅಮಾನತು ಮಾಡಿಲ್ಲ? ಸಿದ್ದರಾಮಯ್ಯನವರ ಕುಟುಂಬಕ್ಕೆ ನಿವೇಶನ ಕೊಟ್ಟಿದ್ದಕ್ಕೆ ಇದು ಬಳುವಳಿ ಎಂದು ಆಕ್ಷೇಪಿಸಿದರು. ಅದಕ್ಕಾಗಿಯೇ ಅವರನ್ನು ಶಿಕ್ಷೆಯಿಂದ ಹೊರಗೆ ಇಟ್ಟಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿಗಳು ಇನ್ನೂ ಯಾಕೆ ನ್ಯಾಯಾಲಯದ ತೀರ್ಪನ್ನು ಕಾಯುತ್ತಿದ್ದಾರೆ? ನಿಮಗೇನಾದರೂ ಆತ್ಮಗೌರವ ಇದ್ದರೆ, ಕಾನೂನು, ನಿಯಮದ ಕುರಿತು ಗೌರವ ಇದ್ದಲ್ಲಿ, ಸಂವಿಧಾನದ ಕುರಿತು ಗೌರವ ಇರುವುದಾದರೆ, ಮುಖ್ಯಮಂತ್ರಿಗಳ ಸ್ಥಾನದ ಘನತೆ ಕಾಪಾಡುವುದಾದರೆ ಈ ಕೂಡಲೇ ರಾಜೀನಾಮೆ ಕೊಡಬೇಕು. ಅದಕ್ಕಿಂತ ಮೊದಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ವಜಾ ಮಾಡಿ ಎಂದು ರವಿಕುಮಾರ್ ಒತ್ತಾಯಿಸಿದರು. ಇದನ್ನೂ ಓದಿ: ಧನ್ನೆಗಾಂವ್ ಜಲಾಶಯದಿಂದ 1,300 ಕ್ಯುಸೆಕ್ ನೀರು ಬಿಡುಗಡೆ – ಮಾಂಜ್ರಾ ನದಿಪಾತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ