ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ (Dengue Cases) ಹಿನ್ನೆಲೆ ಡೆಂಗ್ಯೂ ಆರ್ಭಟವನ್ನು ನಿಯಂತ್ರಿಸಲು ದಂಡಾಸ್ತ್ರಕ್ಕೆ ಸರ್ಕಾರ ಮುಂದಾಗಿದೆ. ಸೊಳ್ಳೆಯನ್ನು ನಿಯಂತ್ರಿಸದಿದ್ದರೆ ದಂಡ ಹಾಕಿ ಎಂದು ಜಿಲ್ಲಾಧಿಕಾರಿಗಳಿಗೆ ಅಧಿಕಾರಿ ನೀಡಿ ಗೆಜೆಟ್ ನೋಟಿಫಿಕೇಷನ್ (Gazette Notification) ಹೊರಡಿಸಿದೆ.ಇದನ್ನೂ ಓದಿ: ಧನ್ನೆಗಾಂವ್ ಜಲಾಶಯದಿಂದ 1,300 ಕ್ಯುಸೆಕ್ ನೀರು ಬಿಡುಗಡೆ – ಮಾಂಜ್ರಾ ನದಿಪಾತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ
ಆರೋಗ್ಯ ಇಲಾಖೆ (Health Deaprtment) ಡೆಂಗ್ಯೂ ಕಾಯಿಲೆಯನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ನಿಯಂತ್ರಣಕ್ಕಾಗಿ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಮಾರ್ಗಸೂಚಿ (Guidelines)ಉಲ್ಲಂಘಿಸಿದವರ ಮೇಲೆ ದಂಡ ಪ್ರಯೋಗ ನಡೆಸಲಾಗುವುದು ಸರ್ಕಾರ ತಿಳಿಸಿದೆ. ಜೊತೆಗೆ ದಂಡದ ಮೊತ್ತವನ್ನು ನಿಗದಿ ಮಾಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಒಮ್ಮೆ ದಂಡ ಹಾಕಿ ಮತ್ತೆ ನಿಯಮ ಉಲ್ಲಂಘನೆ ಮಾಡಿದರೆ, ಪ್ರತಿ ವಾರ ದಂಡದ 50% ರಷ್ಟನ್ನು ದಂಡ ಹಾಕುವುದಾಗಿ ಆದೇಶ ಹೊರಡಿಸಿದೆ.
Advertisement
Advertisement
ಮಾರ್ಗಸೂಚಿ:
1. ಮನೆ ಮಾಲೀಕರು ಕಟ್ಟಡ ನಿರ್ಮಾಣ ಸ್ಥಳದಲ್ಲಿ ನೀರನ್ನು ಶೇಖರಿಸಿ ಇಡುವ ಸೊಂಪು ಮತ್ತು ಟ್ಯಾಂಕ್‌ಗಳನ್ನು ಸ್ವಚ್ಛವಾಗಿ ಇಡಬೇಕು ಮತ್ತು ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು.
2. ಮನೆ ಮಾಲೀಕರು, ಸಾರ್ವಜನಿಕರು ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ, ಟೈರ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು.
3. ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳು, ಕಟ್ಟಡ ಮಾಲೀಕರು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಿಸಬೇಕು.ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಎನ್‍ಕೌಂಟರ್ – 9 ನಕ್ಸಲರನ್ನು ಬೇಟೆಯಾಡಿದ ಭದ್ರತಾ ಪಡೆ
Advertisement
ಯಾರ್ಯಾರಿಗೆ ಎಷ್ಟೆಷ್ಟು ದಂಡ?
1. ಮನೆ ಮಾಲೀಕರಿಗೆ
ನಗರ ಪ್ರದೇಶದಲ್ಲಿ 400 ರೂ.
ಗ್ರಾಮಾಂತರ ಪ್ರದೇಶಗಳಲ್ಲಿ – 200 ರೂ.
Advertisement
2.ವಾಣಿಜ್ಯ ಮಳಿಗೆಗಳು, ಸ್ಕೂಲ್, ಕಾಲೇಜು, ರೆಸ್ಟೊರೆಂಟ್, ಹೋಟೆಲ್, ಮಾಲ್, ಸೂಪರ್ ಮಾರ್ಕೆಟ್, ಹೋಂ ಸ್ಟೇ
ನಗರದ ಪ್ರದೇಶದಲ್ಲಿ – 1000 ರೂ.
ಗ್ರಾಮಾಂತರ ಪ್ರದೇಶದಲ್ಲಿ – 500 ರೂ.
3.ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ
ನಗರ ಪ್ರದೇಶದಲ್ಲಿ – 2000 ರೂ.
ಗ್ರಾಮಾಂತರ ಪ್ರದೇಶಗಳಲ್ಲಿ – 1000 ರೂ.