ದುಬೈ: ಐಪಿಎಲ್‍ಗಾಗಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿದಿರುವ ಧೋನಿ ದುಬೈ ಕ್ರೀಡಾಂಗಣದಲ್ಲಿ ಸಿಕ್ಸ್ ಗಳ ಮಳೆ ಸುರಿಸಿದ್ದಾರೆ. ಬಳಿಕ ಸಿಕ್ಸ್ ಹೊಡೆದ ಬಾಲ್‍ಗಳು ಕಾಣೆಯಾದಾಗ ತಾವೇ ಹುಡುಕಿ ತಂದು ಗಲ್ಲಿ ಕ್ರಿಕೆಟ್ ನೆನಪಿಸಿದ್ದಾರೆ.
ಐಪಿಎಲ್ ಆರಂಭಕ್ಕೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಈ ನಡುವೆ ಎಲ್ಲ ತಂಡಗಳು ಕೂಡ ದುಬೈನತ್ತ ಪ್ರಯಾಣ ಬೆಳೆಸಿವೆ. ಅದರಂತೆ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ದುಬೈನಲ್ಲಿ ಬೀಡುಬಿಟ್ಟಿದ್ದು, ಭರ್ಜರಿ ಅಭ್ಯಾಸ ಆರಂಭಿಸಿದೆ. ಅಭ್ಯಾಸದ ವೇಳೆ ಧೋನಿ ಸಿಕ್ಸ್ ಮೇಲೆ ಸಿಕ್ಸ್ ಹೊಡೆದು ಮೈದಾನದಿಂದ ಹೊರ ಹೋದ ಬಾಲ್‍ಗಳು ಕಾಣೆಯಾಗುವಂತೆ ಮಾಡಿದ್ದಾರೆ. ಬಳಿಕ ಸ್ವತಃ ತಾವೇ ಪೊದೆಗಳಲ್ಲಿ ಸಿಲುಕೊಂಡಿದ್ದ ಬಾಲ್‍ಗಳನ್ನು ಹೆಕ್ಕಿತಂದಿದ್ದಾರೆ. ಇದನ್ನು ನೋಡಿದ ಪ್ರತಿಯೊಬ್ಬರು ಕೂಡ ತಮ್ಮ ಗಲ್ಲಿಕ್ರಿಕೆಟ್ ದಿನಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಇದನ್ನೂ ಓದಿ: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಸೆಣಸಾಟ
ಧೋನಿ ಸಿಕ್ಸ್ ಸಿಡಿಸಿ ಬಾಲ್‍ಗಳನ್ನು ಪೊದೆಗಳಲ್ಲಿ ಬ್ಯಾಟ್‍ನಿಂದ ಹುಡುಕುತ್ತಿರುವ ವೀಡಿಯೋವನ್ನು ಸಿಎಸ್‍ಕೆ ಫ್ರಾಂಚೈಸ್ ಪೋಸ್ಟ್ ಮಾಡಿ ಧೋನಿಯ ಸಿಕ್ಸರ್‍ಗಳಿಗೆ ಮತ್ತು ಧೋನಿಯ ಪ್ರೀತಿಗೆ ಗಡಿರೇಖೆಗಳಿಲ್ಲ ಎಂದು ಅಡಿಬರಹ ನೀಡಿದ್ದಾರೆ. ಇದನ್ನು ನೋಡಿದ ಮಾಹಿ ಅಭಿಮಾನಿಗಳು ಖುಷಿಯಾಗಿದ್ದಾರೆ.
Dhoni's Sixes ???????? Our love for Thala
Out of bounds#WhistlePodu #Yellove ???????? @msdhoni pic.twitter.com/PA8smfxuw5
— Chennai Super Kings (@ChennaiIPL) August 24, 2021
ದುಬೈನಲ್ಲಿ ನಡೆಯುವ ಐಪಿಎಲ್‍ನ ಸೆಕೆಂಡ್ ಇನ್ನಿಂಗ್ಸ್ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಮತ್ತು ಮುಂಬೈ ತಂಡಗಳು ಸೆಣಸಾಡಲಿದೆ. ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು