ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಿರುಸಿನ ಬ್ಯಾಟಿಂಗ್ಗೆ ಹೆಸರುವಾಸಿ. ಇದೀಗ ಧೋನಿ ಬ್ಯಾಟಿಂಗ್ ಬಿಟ್ಟು ನೆಟ್ಸ್ನಲ್ಲಿ ಬೌಲಿಂಗ್ ಮಾಡಿ ಸಹ ಆಟಗಾರ ಜಡೇಜಾರನ್ನು ಕ್ಲೀನ್ ಬೌಡ್ಡ್ ಮಾಡಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್ನಲ್ಲಿ ಚೆನ್ನೈ ತಂಡ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ನತ್ತ ಕಣ್ಣಿಟ್ಟಿದೆ. ಈ ನಡುವೆ ತಂಡದ ಆಟಗಾರರು ಕೂಡ ದುಬೈನ ಆನ್ ದಿ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಚೆನ್ನೈ ತಂಡ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಧೋನಿ, ಜಡೇಜಾಗೆ ಬೌಲಿಂಗ್ ಮಾಡಲು ಮುಂದಾಗಿದ್ದಾರೆ. ಜಡೇಜಾ ಉತ್ತಮ ಬ್ಯಾಟಿಂಗ್ ಪರಾಕ್ರಮ ಮೆರೆದು ಬೌಂಡರಿ, ಸಿಕ್ಸ್ ಸಿಡಿಸಿ ಧೋನಿಗೆ ಸವಾಲೆಸೆದರೆ, ಕಡೆಯಲ್ಲಿ ಧೋನಿ ಗೂಗ್ಲಿಗೆ, ಜಡ್ಡು ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದನ್ನೂ ಓದಿ: ಇಂದು ಆರ್ಸಿಬಿ, ಮುಂಬೈ ಕದನ – ಗೆಲುವಿಗಾಗಿ ವಿರಾಟ್, ರೋಹಿತ್ ಬಿಗ್ ಫೈಟ್
ಧೋನಿ ಹಾಗೂ ಜಡೇಜಾ ನಡುವಿನ ಕಾದಾಟದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಾಕಿಕೊಂಡಿದೆ. ವೀಡಿಯೋದಲ್ಲಿ ಮೊದಲು ಜಡೇಜಾ, ಧೋನಿಯ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ, ಸಿಕ್ಸ್ ಸಿಡಿಸಿದರು. ಆದರೂ ಕೂಡ ಧೋನಿ ಬೌಲಿಂಗ್ ಮುಂದುವರೆಸಿ ಜಡೇಜಾರನ್ನು ಬೌಲ್ಡ್ ಮಾಡುವ ಮೂಲಕ ವಿಕೆಟ್ ಕಿತ್ತು ಸಂಭ್ರಮ ಪಟ್ಟರು. ಇದನ್ನೂ ಓದಿ: ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ: ಪಂಜಾಬ್ಗೆ ರೋಚಕ ಗೆಲುವು
7 vs 8 ???? Dhoni vs Jadeja – Special face off from the Training!#WhistlePodu #Yellove ???????? @snj_group https://t.co/KExpEVkLkp
— Chennai Super Kings (@ChennaiIPL) September 24, 2021