Cricket

ಇಂದು ಆರ್​ಸಿಬಿ, ಮುಂಬೈ ಕದನ – ಗೆಲುವಿಗಾಗಿ ವಿರಾಟ್, ರೋಹಿತ್ ಬಿಗ್ ಫೈಟ್

Published

on

Share this

ದುಬೈ: ಐಪಿಎಲ್ 14ನೇ ಅವೃತ್ತಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಸೆಣಸಾಡಲಿವೆ. ಉಭಯ ತಂಡಗಳು ಕಳೆದ ಎರಡು ಪಂದ್ಯಗಳನ್ನು ಸೋತಿದ್ದು, ಗೆಲುವಿನ ಲಯಕ್ಕೆ ಮರಳುವ ತವಕದಲ್ಲಿವೆ.

ಐಪಿಎಲ್ ಇತಿಹಾಸದಲ್ಲಿ ಒಟ್ಟು 28 ಬಾರಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದು, 17 ಪಂದ್ಯಗಳನ್ನು ಮುಂಬೈ ಹಾಗೂ 11 ಪಂದ್ಯಗಳನ್ನು ಬೆಂಗಳೂರು ತಂಡ ಗೆದ್ದಿದೆ. ಪ್ರತಿಬಾರಿಯೂ ಈ ಕಪ್ ಗೆಲ್ಲುವ ಆಸೆಯೊಂದಿಗೆ ಕಣಕ್ಕಳಿಯುವ ಆರ್​ಸಿಬಿ ತಂಡಕ್ಕೆ ಲಕ್ ಕೈಹಿಡಿಯುತ್ತಿಲ್ಲ. ಹಾಲಿ ಚಾಂಪಿಯನ್ ಮುಂಬೈ ತಂಡ ಕೂಡ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಇಂದು ಉಭಯ ತಂಡಗಳ ನಡುವೆ ಹೈ ವೋಲ್ಟೆಜ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಸಿಎಸ್‍ಕೆ vs ಆರ್​ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ

ಒಟ್ಟು 9 ಪಂದ್ಯವಾಡಿರುವ ಆರ್​ಸಿಬಿ 5 ಜಯ ಹಾಗೂ 4 ಪಂದ್ಯಗಳನ್ನು ಸೋತಿದೆ. 9 ಪಂದ್ಯವಾಡಿರುವ ಮುಂಬೈ 4 ಗೆಲುವು ಹಾಗೂ 5 ಪಂದ್ಯಗಳನ್ನು ಸೋತಿದೆ. ಅಂಕಪಟ್ಟಿಯಲ್ಲಿ ಆರ್​ಸಿಬಿ  3ನೇ ಸ್ಥಾನದಲ್ಲಿದ್ದು, ಮುಂಬೈ 6ನೇ ಸ್ಥಾನದಲ್ಲಿದೆ. ತಂಡಗಳ ಬಲಾಬಲವನ್ನು ನೋಡುವುದಾದರೆ ಮುಂಬೈ ಬಲಿಷ್ಟ ತಂಡವಾಗಿದೆ. ಮುಂಬೈ ಪರ ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಡಿ ಕಾಕ್, ಹಾಗೂ ಪೊರ್ಲಾಡ್ ಬ್ಯಾಟಿಂಗ್‍ನಲ್ಲಿ ಮಿಂಚಬಲ್ಲರು. ಇದನ್ನೂ ಓದಿ: ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ: ಪಂಜಾಬ್‍ಗೆ ರೋಚಕ ಗೆಲುವು

ಬೌಲಿಂಗ್‍ನಲ್ಲಿ ವಿಶ್ವದ ಅಗ್ರಗಣ್ಯ ಬೌಲರ್‍ಗಳಾದ ಬುಮ್ರಾ, ಅಡಮ್ ಮಿಲ್ನೆ, ಬೋಲ್ಟ್, ರಾಹುಲ್ ಚಾಹರ್‍ರಂತ ಚಾಂಪಿಯನ್ ಬೌಲರ್‌ ಗಳು ಮುಂಬೈ ತಂಡದಲ್ಲಿದ್ದಾರೆ. ಆರ್​ಸಿಬಿ  ತಂಡ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಮ್ಯಾಕ್ಸ್‌ವೆಲ್ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಈ ಮೂವರು ಆಟಗಾರರು ಆರ್​ಸಿಬಿ  ತಂಡದ ಬ್ಯಾಟಿಂಗ್ ಬೆನ್ನೆಲುಬು ಎನ್ನಬಹುದು. ಬೌಲಿಂಗ್‍ನಲ್ಲಿ ಜೇಮಿಸನ್, ಚಹಾಲ್, ಹರ್ಷಲ್ ಪಟೇಲ್, ಸಿರಾಜ್ ಆರ್​ಸಿಬಿ  ತಂಡದ ಪ್ರಮುಖ ಆಸ್ತ್ರಗಳು.

ಭಾರತದಲ್ಲಿ ನಡೆದ ಮೊದಲಾರ್ಧದ ಟೂರ್ನಿಯಲ್ಲಿ ಮಿಂಚಿದ್ದ ಆರ್​ಸಿಬಿ  ತಂಡ, ಯುಎಇಯಲ್ಲಿ ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಡೆತ್ ಓವರ್‌ನಲ್ಲಿ 249.40 ಸ್ಟ್ರೈಕ್ ರೇಟ್ ಹೊಂದಿರುವ ಎಬಿ ಡಿವಿಲಿಯರ್ಸ್ ಈ ಪಂದ್ಯದಲ್ಲಿ ಮೊದಲಿನಂತೆ ಅಬ್ಬರಿಸಿದರೆ ಆರ್​ಸಿಬಿ ಗೆ ಗೆಲುವು ಸುಲಭವಾಗಲಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications