ನವದೆಹಲಿ: ಆನ್‍ಲೈನ್ ಶಾಪಿಂಗ್ ತಾಣಗಳು ಇನ್ನು ಮುಂದೆ ಉತ್ಪನ್ನಗಳ ಎಂಆರ್‍ಪಿ ಮಾತ್ರ ಅಲ್ಲ ಅವುಗಳ ಎಕ್ಸ್ಪೈರಿ ದಿನಾಂಕ ಮತ್ತು ಗ್ರಾಹಕ ಸೇವೆಗಳ ಮಾಹಿತಿಯನ್ನು ನೀಡಬೇಕು.
ಹೌದು. ಆನ್‍ಲೈನ್ ತಾಣಗಳಲ್ಲಿ ಇಲ್ಲಿಯವರೆಗೆ ಉತ್ಪನ್ನಗಳ ಎಂಆರ್‍ಪಿ ಮಾತ್ರ ಹಾಕಲಾಗುತಿತ್ತು. ಗ್ರಾಹಕರಿಗೆ ವಂಚನೆ ಆಗುತ್ತಿದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜನವರಿ 2018ರ ನಂತರ ಕಡ್ಡಾಯವಾಗಿ ಎಂಆರ್‍ಪಿ ಜೊತೆ ಎಕ್ಸ್ಪೈರಿ ದಿನಾಂಕವನ್ನು ಪ್ರಕಟಿಸಬೇಕೆಂದು ಆನ್‍ಲೈನ್ ಶಾಪಿಂಗ್ ಕಂಪೆನಿಗಳಿಗೆ ಸೂಚಿಸಿದೆ.
Advertisement
ಆನ್‍ಲೈನ್ ತಾಣಗಳು ಎಂಆರ್‍ಪಿ ಜೊತೆಗೆ, ಉತ್ಪಾದನಾ ದಿನಾಂಕ, ಎಕ್ಸ್ಪೈರಿ ದಿನಾಂಕ, ಪ್ರಮಾಣದ ಮಾಹಿತಿ, ಯಾವ ದೇಶದಲ್ಲಿ ತಯಾರಾಗಿದೆ, ಗ್ರಾಹಕ ಸೇವೆಯ ಮಾಹಿತಿಯನ್ನು ತೋರಿಸಬೇಕಾಗುತ್ತದೆ.
Advertisement
ಲೀಗಲ್ ಮೆಟ್ರೊಲಜಿ ಕಾಯ್ದೆ(ಪ್ಯಾಕ್ ಮಾಡಿದ ಸರಕು) ಪ್ರಕಾರ ಈ ಎಲ್ಲ ಮಾಹಿತಿಗಳನ್ನು ತೋರಿಸುವಂತೆ ಕೇಂದ್ರ ಸರ್ಕಾರ ಕಂಪೆನಿಗಳಿಗೆ 6 ತಿಂಗಳ ಡೆಡ್‍ಲೈನ್ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಜನವರಿ 1ರಿಂದ ಆನ್‍ಲೈನ್ ತಾಣಗಳು ಸರ್ಕಾರ ಕೇಳಿರುವ ಮಾಹಿತಿಗಳನ್ನು ದಪ್ಪ ಅಕ್ಷರದಲ್ಲಿ ನಲ್ಲಿ ತೋರಿಸಬೇಕು. ಒಂದು ವೇಳೆ ಉಲ್ಲಂಘನೆ ಎಸಗಿದ್ದು ಕಂಡು ಬಂದಲ್ಲಿ ಆ ಕಂಪೆನಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.
Advertisement
ಆನ್‍ಲೈನ್ ಶಾಪಿಂಗ್ ತಾಣಗಳಿಂದ ಆಗುತ್ತಿರುವ ವಂಚನೆಯ ಬಗ್ಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾಯ್ದೆ ತಿದ್ದುಪಡಿ ಮಾಡಿ ಈ ಕಾನೂನು ತಂದಿದೆ.
ಇದನ್ನೂ ಓದಿ: ಉತ್ಪನ್ನಗಳ ಮೇಲೆ ಎಂಆರ್‍ಪಿ ಇಲ್ದೇ ಇದ್ರೆ ಜೈಲು: ತಯಾರಕರಿಗೆ ಕೇಂದ್ರದಿಂದ ವಾರ್ನಿಂಗ್