ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ ನಂತರ ಉತ್ಪನ್ನಗಳ ಮೇಲೆ ಪರಿಷ್ಕೃತ ಎಂಆರ್ಪಿ ಮುದ್ರಿಸದೇ ಇದ್ದರೆ ತಯಾರಕರಿಗೆ ಜೈಲು ಶಿಕ್ಷೆ ವಿಧಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಮೊದಲ ತಪ್ಪಿಗೆ 25 ಸಾವಿರ ರೂ., ಎರಡನೇ ಬಾರಿ ಸಿಕ್ಕಿಬಿದ್ದರೆ 50 ಸಾವಿರ ರೂ., ಮೂರನೇ ಬಾರಿ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಮೂರು ಬಾರಿ ದಂಡ ಕಟ್ಟಿದ ಬಳಿಕವೂ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸರ್ಕಾರ ತಯಾರಕರಿಗೆ ವಾರ್ನಿಂಗ್ ನೀಡಿದೆ.
Advertisement
ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್, ಜಿಎಸ್ಟಿ ಬಂದ ಮೇಲೆ ಕೆಲ ಉತ್ಪನ್ನಗಳ ಬೆಲೆ ಕಡಿಮೆಯಾಗಿದ್ದರೆ, ಕೆಲ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಈಗಾಗಲೇ ನಾವು ತಯಾರಕರಿಗೆ ಹೊಸ ಎಂಆರ್ಪಿ ಹಾಕುವಂತೆ ಸೂಚಿಸಿದ್ದೇವೆ. ಒಂದು ವೇಳೆ ಹೊಸ ಎಂಆರ್ಪಿ ಹಾಕದೇ ಹಳೇ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
Advertisement
ತಯಾರಕರು ಎಂಆರ್ಪಿ ಹಾಕದೇ ವಂಚಿಸಿದ್ದು ಕಂಡು ಬಂದಲ್ಲಿ ಮೊದಲ ತಪ್ಪಿಗೆ 25 ಸಾವಿರ ರೂ. ಎರಡನೇ ಬಾರಿ ಸಿಕ್ಕಿಬಿದ್ದರೆ 25 ಸಾವಿರ ರೂ., ಎರಡನೇ ಬಾರಿ 50 ಸಾವಿರ ಮೂರನೇ ಬಾರಿ 1 ಲಕ್ಷ ರೂ. ದಂಡ ವಿಧಿಸಲಾಗುವುದು. ಮೂರು ಬಾರಿ ದಂಡ ಕಟ್ಟಿದ ಬಳಿಕವೂ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಈ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆ ಇಲ್ಲ ಎಂದು ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದರು.
Advertisement
ಜಿಎಸ್ಟಿ ಬಂದ ನಂತರ ಆರಂಭದಲ್ಲಿ ಕೆಲ ಸಮಸ್ಯೆಗಳು ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಇವುಗಳು ನಿವಾರಣೆಯಾಗಲಿದೆ. ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗದೇ ಇರಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
Advertisement
ಈಗಾಗಲೇ ಸ್ಟಾಕ್ ಇರುವ ಉತ್ಪನ್ನಗಳಿಗೆ ಹೊಸ ಎಂಆರ್ಪಿ ಹಾಕಿ ಸೆಪ್ಟೆಂಬರ್ ವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ಜುಲೈ 1ರ ಬಳಿಕ ತಯಾರಕರು ಉತ್ಪನ್ನಗಳ ಮೇಲೆ ಮೂಲ ಎಂಆರ್ಪಿ ಮುಂದುವರೆಸಬೇಕು. ಜತೆಗೆ, ಪರಿಷ್ಕೃತ ದರವನ್ನೂ ಮುದ್ರಿಸಬೇಕು. ಮೂಲ ಎಂಆರ್ಪಿ ಮೇಲೆ ಹೊಸ ದರ ಮುದ್ರಿಸಬಾರದು. ಎರಡನ್ನೂ ಪ್ರತ್ಯೇಕವಾಗಿ ಗುರುತಿಸುವಂತಿರಬೇಕು ಎಂದು ಪಾಸ್ವಾನ್ ತಿಳಿಸಿದರು.
ಇದನ್ನೂ ಓದಿ: ಇನ್ಮುಂದೆ ಹೋಟೆಲ್, ಏರ್ಪೋರ್ಟ್, ಮಾಲ್ಗಳಲ್ಲಿ ನೀರಿನ ಬಾಟಲಿಗಳಿಗೆ ಎಂಆರ್ಪಿ ಹಣವನ್ನು ಮಾತ್ರ ಕೊಡಿ
Union Minister for Consumer Affairs, Food and Public Distribution, Shri @irvpaswan addressing a press conference, in New Delhi pic.twitter.com/6yxmKAb8In
— Ministry of Information and Broadcasting (@MIB_India) July 7, 2017
Consumer and Food Minister @irvpaswan urges state governments to give reservation in allotment of licenses for fair price shops. pic.twitter.com/FmE9vGiq5M
— All India Radio News (@airnewsalerts) July 7, 2017