ಬೆಂಗಳೂರು: ಡಿ.ಕೆ ಶಿವಕುಮಾರ್ (DK Shivakumar) ಅವರೇ ನೀವು ಸಿಎಂ (Chief Minister) ಆಗೋದು ಡೌಟ್ ಇದೆ, ಹಾಗಾಗಿ ನೀವೇ ಬಿಜೆಪಿಗೆ (BJP) ಬಂದುಬಿಡಿ ಎಂದು ಸಚಿವ ಮುನಿರತ್ನ (Munirathna) ಆಹ್ವಾನ ಕೊಟ್ಟಿದ್ದಾರೆ.
ಕಾಂಗ್ರೆಸ್‌ನಿಂದ ವಲಸೆ ಹೋಗಿರುವ ಶಾಸಕರಿಗೂ (MLA’s) ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೆ ಆಹ್ವಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಡಿಕೆಶಿ ಬಿಜೆಪಿ ಸೇರುವಂತೆ ಮರು ಆಹ್ವಾನ ಕೊಟ್ಟಿದ್ದಾರೆ. ಇದನ್ನೂ ಓದಿ: ಶಾಸಕರ ಖರೀದಿಗೆ BJPಯಿಂದ ಸಾವಿರಾರು ಕೋಟಿ ಆಮಿಷ- ಕಾಂಗ್ರೆಸ್
Advertisement
Advertisement
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ನಮ್ಮ ಪಕ್ಷಕ್ಕೆ ಬಂದಿರೋ 17 ಜನರ ಮೇಲೆ ಡಿಕೆ ಶಿವಕುಮಾರ್ ಅವ್ರಿಗೆ ಪ್ರೀತಿಯಿದೆ. ಹಾಗಾಗಿ ಆಹ್ವಾನ ನೀಡ್ತಿದ್ದಾರೆ. ನಮಗೂ ಡಿ.ಕೆ ಶಿವಕುಮಾರ್ ಮೇಲೆ ಪ್ರೀತಿಯಿದೆ. ಅವರೇ ಬೇಕಿದ್ದರೆ ಬಿಜೆಪಿಗೆ ಬರಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ್ ಇಲ್ಲ ಅನ್ನೋದು ನೋವಿದೆ, ರಾಜ್ ಕುಟುಂಬಕ್ಕೆ 2 ಕರ್ನಾಟಕ ರತ್ನ ಸಿಗ್ತಿರೋದು ಖುಷಿ ತಂದಿದೆ: ಮುನಿರತ್ನ
Advertisement
Advertisement
ಡಿ.ಕೆ ಶಿವಕುಮಾರ್‌ಗೆ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಜಿ.ಪರಮೇಶ್ವರ್ (G Parameshwara) ಮುಂದಿನ ದಲಿತ ಮುಖ್ಯಮಂತ್ರಿ ನಾನೇ ಅಂತಾರೆ. ಇನ್ನೊಂದೆಡೆ ಸಿದ್ದರಾಮಯ್ಯ (Siddaramaiah) ಮುಂದಿನ ಮುಖ್ಯಮಂತ್ರಿ ಅಂತಾರೆ. ಈ ಬಡಿದಾಟದಲ್ಲಿ ನೀವು ಮುಖ್ಯಮಂತ್ರಿ ಆಗೋದು ಡೌಟ್ ಇದೆ. ಹಾಗಾಗಿ ನೀವೆ ಬಿಜೆಪಿಗೆ ಬನ್ನಿ. ನಾವೇ ನಮ್ಮ ನಾಯಕರು, ಪ್ರಧಾನಿಗೆ ಹೇಳ್ತಿವಿ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ತಿವಿ ಅಂತ. ಡಿಕೆಶಿಗೆ ನಮ್ಮ ಪಕ್ಷಕ್ಕೆ ಬಂದ್ರೆ ಒಳ್ಳೆದಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.
ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಸ್ಪೀಕರ್ ರಮೇಶ್ ಕುಮಾರ್ (Ramesh Kumar) ನಮ್ಮ ಪಕ್ಷಕ್ಕೆ ಬಿಟ್ಟು ಹೋದವರ ಅವಶ್ಯಕತೆಯಿಲ್ಲ ಅಂದಿದ್ರು. ಈಗ ಏಕೆ ಕರೆಯುತ್ತಿದ್ದಾರೆ. ನಮ್ಮ ಅವಶ್ಯಕತೆ ಬಿದಿದ್ದು ಹೇಗೆ? ಬಿಜೆಪಿಯಲ್ಲಿ ನಮ್ಮನ್ನ ಗೌರವದಿಂದ ನೋಡಿಕೊಳ್ತಿದ್ದಾರೆ ಅಂತಾ ಈಗ ವಾಪಸ್ ಆಹ್ವಾನ ನೀಡುತ್ತಿದ್ದಾರೆ ಎಂದು ಕುಟುಕಿದ್ದಾರೆ.