DistrictsKarnatakaKolarLatestMain Post

ಪುನೀತ್ ಇಲ್ಲ ಅನ್ನೋದು ನೋವಿದೆ, ರಾಜ್ ಕುಟುಂಬಕ್ಕೆ 2 ಕರ್ನಾಟಕ ರತ್ನ ಸಿಗ್ತಿರೋದು ಖುಷಿ ತಂದಿದೆ: ಮುನಿರತ್ನ

ಕೋಲಾರ: ಪುನೀತ್ ರಾಜ್ ಕುಮಾರ್ (Puneeth Raj Kumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವ ಕಾರ್ಯಕ್ರಮಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಹಾಗೂ ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್.ಟಿ.ಆರ್ (Junior NTR) ಭಾಗಿಯಾಗುವುದಾಗಿ ಸಚಿವ ಮುನಿರತ್ನ (Muniratna) ಅವರು ತಿಳಿಸಿದರು.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಪರ್ ಸ್ಟಾರ್ಸ್ ಗಳನ್ನ ಸ್ವಾಗತ ಮಾಡುವ ಜವಾಬ್ದಾರಿ ನನ್ನದಾಗಿದೆ. ಎಚ್.ಎ.ಎಲ್. ಏರ್ ಪೋರ್ಟ್ ಅಲ್ಲಿ 2 ಗಂಟೆಗೆ ಅವರನ್ನ ಸ್ವಾಗತ ಮಾಡಿಕೊಂಡು, ನಂತರ 4 ಗಂಟೆಗೆ ವಿಧಾನ ಸೌಧಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದರು. ಇದನ್ನೂ ಓದಿ: ಡಾ.ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಕೊಟ್ಟಾಗ ಸಂಭ್ರಮ ಹೇಗಿತ್ತು? : ಫೋಟೋ ಇವೆ

ಅಲ್ಲದೆ ಸೂಪರ್ ಸ್ಟಾರ್ ಗಳು ಕಾರ್ಯಕ್ರಮ ಮುಗಿಯುವವರೆಗೂ ಜೊತೆಯಲ್ಲಿಯೇ ಇರಲಿದ್ದಾರೆ. ಕನ್ನಡದಲ್ಲಿಯೇ ಮಾತನಾಡಲಿದ್ದು, ಇಬ್ಬರೂ ನಟರು ಕನ್ನಡದಲ್ಲಿಯೇ ಮಾತನಾಡುವ ಕಾರ್ಯಕ್ರಮ ಇಂದು ಆಗುತ್ತದೆ. ಅಲ್ಲದೆ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಕ್ಕಿಂದ, ಪುನೀತ್ ನಮ್ಮನ್ನ ಅಗಲಿರುವುದು ತುಂಬಾ ನೋವಿನ ವಿಚಾರ ಎಂದರು. ಇದನ್ನೂ ಓದಿ: ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ಸರಕಾರ ತಿದ್ದುಪಡಿ ಮಾಡಿದ ನಿಯಮವೇನು?

ರಾಜಕುಮಾರ್ ಅವರಿಗೂ ಸಹ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದೇವೆ. ಮತ್ತೆ ಅದೇ ಕುಟುಂಬದಲ್ಲಿ ಪುನೀತ್ ಕುಮಾರ್ ಅವರಿಗೆ ಪ್ರಶಸ್ತಿ ನೀಡುತ್ತಿದ್ದು, ಸರ್ಕಾರದ ವತಿಯಿಂದ ಒಂದೇ ಕುಟುಂದಲ್ಲಿ ಇಬ್ಬರು ಪ್ರಶಸ್ತಿ ಪಡೆದಿರುವ ನಟರ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

Live Tv

Leave a Reply

Your email address will not be published. Required fields are marked *

Back to top button