ಸಿನಿಮಾಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಕುಟುಂಬಕ್ಕೂ ಕ್ವಾಲಿಟಿ ಸಮಯ ಕೊಡುತ್ತಾರೆ ನಟ ಯಶ್. ಕೆಜಿಎಫ್ 2 ಸಿನಿಮಾ ರಿಲೀಸ್ ನಂತರ ಅವರು ಹೆಚ್ಚೆಚ್ಚು ಕುಟುಂಬದೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಗೋವಾದಲ್ಲಿ ರಜಾ ದಿನಗಳನ್ನು ಕಳೆದಿದ್ದ ಯಶ್ ಮತ್ತು ರಾಧಿಕಾ ಪಂಡಿತ್, ಇದೀಗ ಮಕ್ಕಳೊಂದಿಗೆ ಪಕ್ಷಿಧಾಮಕ್ಕೆ ವಿಸಿಟ್ ನೀಡಿದ್ದಾರೆ.
ಮಂಗಳವಾರ ಇಡೀ ದಿನ ಕನಕಪುರ ಸಮೀಪದ ಪಕ್ಷಿಧಾಮವೊಂದರಲ್ಲಿ ತಮ್ಮ ಮಕ್ಕಳು ಮತ್ತು ಪತ್ನಿಯೊಂದಿಗೆ ಸಮಯ ಕಳೆದಿರುವ ಯಶ್, ಅಲ್ಲಿನ ಪಕ್ಷಿಗಳೊಂದಿಗೆ ಆಟವಾಡಿದ್ದಾರೆ. ಅದರಲ್ಲೂ ಗಿಣಿಗಳ ಜೊತೆ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಆಟವಾಡಿದ್ದಾರೆ. ಗಿಣಿಗಳನ್ನು ಮೈಮೇಲೆ ಬಿಟ್ಟುಕೊಂಡು ನಲಿದಿದ್ದಾರೆ. ಇದನ್ನೂ ಓದಿ: ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್
ಒಂದು ಕಡೆ ಕುಟುಂಬಕ್ಕೆ ತಮ್ಮ ಸಮಯವನ್ನು ಯಶ್ ನೀಡುತ್ತಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾಗಾಗಿಯೂ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕೆಜಿಎಫ್ 2 ನಂತರ ಯಶ್ ಅವರಿಗೆ ಮಾರುಕಟ್ಟೆ ವಿಸ್ತಾರವಾಗಿರುವುದರಿಂದ ಅದೇ ಮಾದರಿಯ ಚಿತ್ರ ಮಾಡುವ ಜವಾಬ್ದಾರಿ ಕೂಡ ಅವರ ಹೆಗಲ ಮೇಲಿದೆ. ಹಾಗಾಗಿ ತುಂಬಾ ತಲೆಕೆಡಿಸಿಕೊಂಡು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ.
ಯಶ್ ಅವರ ಮುಂದಿನ ಸಿನಿಮಾವನ್ನು ನರ್ತನ್ ಅವರು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಕಥೆಯನ್ನು ಫೈನಲ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಮೂರು ನಿರ್ಮಾಣ ಸಂಸ್ಥೆಗಳು ಯಶ್ ಸಿನಿಮಾವನ್ನು ತಯಾರಿಸಲು ಮುಂದೆ ಬಂದಿದ್ದು, ಯಾವ ನಿರ್ಮಾಣ ಸಂಸ್ಥೆಯು ಇವರ ಚಿತ್ರಕ್ಕೆ ಬಂಡವಾಳ ಹಾಕಲಿದೆ ಎನ್ನುವುದು ಸದ್ಯಕ್ಕೆ ಸಸ್ಪೆನ್ಸ್.