ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್‍ನ್ನು ಕರ್ನಾಟಕದ ಜನರ ಪರವಾಗಿ ನಾನು ಕೇಂದ್ರದ ಬಜೆಟ್‍ನ್ನು ಸ್ವಾಗತ ಮಾಡುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಜನರ ಪರವಾಗಿ ನಾನು ಕೇಂದ್ರದ ಬಜೆಟ್‍ನ್ನು ಸ್ವಾಗತ ಮಾಡುತ್ತೇನೆ. ಈ ಬಜೆಟ್‍ನಲ್ಲಿ ಸರಿಸುಮಾರು 10 ಲಕ್ಷ ಕೋಟಿ ಹಣವನ್ನು ಬರುವಂತಹ ವರ್ಷದಲ್ಲಿ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ದಿಗೆ ತೊಡಗಿಸಿಕೊಳ್ಳಬೇಕು ಎಂದು ನಿಶ್ಚಯವಾಗಿದೆ ಎಂದು ಹೇಳಿದ್ದಾರೆ.
ಹೈವೆ, ಡ್ಯಾಮ್, ರೈಲ್ವೆ ಮಾರ್ಗಗಳನ್ನು ಮಾಡುವಲ್ಲಿ ಹಣವನ್ನು ವ್ಯಯ ಮಾಡಲಾಗುತ್ತದೆ. ಈ ಇಷ್ಟು ದೊಡ್ಡ ಮೊತ್ತದ ಹಣವನ್ನು ಈ ಅಭಿವೃದ್ಧಿ ವಿನಿಯೋಗ ಮಾಡುವುದರಿಂದ ಬರುವ ದಿನಗಳಲ್ಲಿ ಕೋಟಿ,ಕೋಟಿಗಟ್ಟಲೆ ಯುವಕರಿಗೆ ಹೊಸ ಉದ್ಯೋಗ ಅವಕಾಶ ದೇಶದಲ್ಲಿ ನಿರ್ಮಾಣವಾಗುತ್ತದೆ. ರೈಲ್ವೆ ಹಳಿ, ರಸ್ತೆಗಳ ನಿರ್ಮಾಣವನ್ನು ಭಾರತದ ಆರ್ಥಿಕತೆಯನ್ನು ಗಟ್ಟಿ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಯಾವುದೇ ದೊಡ್ಡ ಯೋಜನೆಗಳು ಇದ್ದಾಗ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಒಟ್ಟಿಗೆ ಕುಳಿತು ಅಭಿವೃದ್ಧಿ ಮಾಡಬೇಕಾಗುತ್ತದೆ. ಜಿಎಸ್‍ಟಿ ಅಂತಹ ಯೋಜನೆಯನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಿದೆ. ಹಾಗೆ ಮುಂದೆಯು ಸಮನ್ವತೆಯಿಂದ ಸರ್ಕಾರ ಕೆಲಸ ಮಾಡಲಿದೆ. ಯಾವುದು ಅಸಾಧ್ಯವೋ ಅದನ್ನು ಸಾಧ್ಯ ಮಾಡುವುದು ನರೇಂದ್ರ ಮೋದಿ ಸರ್ಕಾರದ ಶಕ್ತಿಯಾಗಿದೆ ಎಂದು ಹೇಳಿದ್ದಾರೆ.