-ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲರ ಶಿಷ್ಯ
ವಿಜಯಪುರ: ನನ್ನ ಕನಸು ನನಸಾದ್ರೆ ರಾಜಕೀಯ ನಿವೃತ್ತಿ ಪಕ್ಕಾ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, ವಿಜಯಪುರದಲ್ಲಿ ವಿಮಾನ ನಿಲ್ದಾಣ ಆಗಬೇಕು ಎಂಬುವುದು ಆಸೆ ಮತ್ತು ಕನಸು. ಈ ಕನಸು ನನಸಾದ್ರೆ ಖುಷಿಯಾಗಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ನಾನು ರಾಮಕೃಷ್ಣ ಹೆಗಡೆ ಮತ್ತು ಜೆ.ಹೆಚ್.ಪಟೇಲರ ಶಿಷ್ಯ. ಅವರಂತೆಯೇ ಗೌರವಯುತವಾಗಿ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಇಷ್ಟು ದಿನ ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ಕೆಲಸ ಮಾಡಿಕೊಂಡು ಬಂದಿದ್ದು, ಯಾರಿಗೂ ಹೆದರಿ ರಾಜಕೀಯ ಬಿಡುತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದರು.
Advertisement
ಕೇವಲ ನಮ್ಮ ರಾಜ್ಯದಲ್ಲಿ ಮಾತ್ರ ಪ್ರವಾಹ ಉಂಟಾಗಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿಯೂ ಪ್ರವಾಹ ಉಂಟಾಗಿದ್ದು, ಅಲ್ಲೇನಾದ್ರೂ ಪರಿಹಾರ ಕೊಟ್ಟಿದ್ದಾರಾ? ಪರಿಹಾರ ಕೊಡಬಾರದು ಎಂಬ ಉದ್ದೇಶ ಏನಿಲ್ಲ. ಹಣಕಾಸಿನ ಸಮಸ್ಯೆ ಇತ್ತು, ಹಾಗಾಗಿ ನೆರೆ ಪರಿಹಾರ ನೀಡುವುದರಲ್ಲಿ ವಿಳಂಬವಾಗಿದೆ ಎಂದು ಹೇಳಿದರು.