– ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿದ್ದೇವೆ
ವಿಜಯಪುರ: ಬಿಜೆಪಿಯವರ ಬ್ರಹ್ಮಾಂಡಗಲನ್ನು ಹೇಳಲು ಹೊರಟರೆ ತುಂಬಾ ಸಮಯ ಹಿಡಿಯುತ್ತೆ ಎಂದು ಹೇಳುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಅವರು ಕಮಲ ಪಕ್ಷ ವಿರುದ್ಧ ಸಿಡಿದೆದ್ದಿದ್ದಾರೆ.
ಸಿಂದಗಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಾ ಹೆಚ್.ಡಿ ಕುಮಾರಸ್ವಾಮಿ ದ್ಚಿಪತ್ನಿತ್ವದ ಬಗ್ಗೆ ಬಿಜೆಪಿ ಟ್ವೀಟ್ ಗೆ ಪ್ರತಿಕ್ರಿಯಿಸಿ ಎಚ್ಚರಿಕೆ ನೀಡಿದರು. ಭಾರತೀಯ ಜನತಾ ಪಕ್ಷದವರು ಯಾರು ಯಾರ ಜೊತೆಗಿದ್ದರು. ಯಾರ ಜೊತೆಯಿದ್ದು ಎದ್ದು ಬಂದ್ರು ಅನ್ನೋದನ್ನು ಹೇಳ ಹೊರಟರೇ ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ ವಯಕ್ತಿಕ ಟೀಕೆ ಬಿಟ್ಟು ಅಭಿವೃದ್ಧಿ ಕೆಲಸದ ಮೇಲೆ ಬಿಜೆಪಿ ಮತ ಕೇಳಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾನು ಅಧಿಕಾರದ ಮದದಿಂದ ಮಾತನಾಡಿಲ್ಲ: ಕೆ. ಸುಧಾಕರ್
ಎರಡು ಪಕ್ಷದವರು ಯಾವುದೇ ಯೋಜನೆ ಇಲ್ಲದೆ ಹಣ ಮತ್ತು ಜಾತಿ ಬಲದ ಮೇಲೆ ಗೆಲ್ಲಲು ಮುಂದಾಗಿದ್ದಾರೆ. ನಾವು ಅಭಿವೃದ್ಧಿ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ಬಿಜೆಪಿಗೆ ಬೈದ್ರೆ ನಾವು ದೇಶ ವಿರೋಧಿಗಳು, ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ರೆ ನಾವು ಕೋಮುವಾದಿಗಳು. ಸಿಂದಗಿಯಲ್ಲಿ ಮಸೀದಿ ಕೆಡವಿಸಿದ್ದೇ ಇದೇ ಅಶೋಕ್ ಮನಗೂಳಿ. ಅವರ ವರ್ಚಸ್ಸೇ ಮುಂದೆ ಅವರ ಸೋಲಿಗೆ ಕಾರಣವಾಗಲಿದೆ ಎಂದರು ಕಿಡಿಕಾರಿದರು.
ಅಶೋಕ ಮನಗೂಳಿ ಆರ್‍ಎಸ್‍ಎಸ್ ಮನಸ್ಥಿತಿಯುಳ್ಳವರು. ಹೀಗಾಗಿ ಬಿಜೆಪಿಯವರಿಗೆ ಬಿಜೆಪಿಗೆ ವೋಟು ಹಾಕಬೇಕಾ..? ಅಶೋಕ್ ಮನಗೂಳಿಗೆ ವೋಟು ಹಾಕಬೇಕಾ ಅನ್ನೋ ಗೊಂದಲದಲ್ಲಿದ್ದಾರೆ ಎಂದರು. ಹೇಳಿದರು. ಜೈಲಿಗೆ ಹೋಗೋ ಸ್ಥಿತಿ ಬಂದರೆ ಹೋಗೋಕೆ ಸಿದ್ಧವಾಗಿದ್ದೇನೆ: ರಮೇಶ್ ಕುಮಾರ್