ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೋರ್ಟ್ ಆದೇಶಿಸಿದೆ.
ಆದಿಲಾ ಜೈಲಿನ ಇತ್ತೀಚಿನ ವೈದ್ಯಕೀಯ ವರದಿಗಳನ್ನು ಉಲ್ಲೇಖಿಸಿ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಮತ್ತು ಕುಟುಂಬದ ದೀರ್ಘಕಾಲದ ಬೇಡಿಕೆ ನಂತರ ಈ ಆದೇಶ ಬಂದಿದೆ. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿ ಭಿಕ್ಷೆ ಬೇಡಬೇಡಿ: ತನ್ನ ನಾಗರಿಕರಿಗೆ ಪಾಕ್ ಖಡಕ್ ಎಚ್ಚರಿಕೆ
ಪಿಟಿಐ ವಕ್ತಾರ ನಯೀಮ್ ಹೈದರ್ ಪಂಜುತಾ ಮಾತನಾಡಿ, ಖಾನ್ ಅವರನ್ನು 48 ಗಂಟೆಗಳ ಒಳಗೆ ಶಿಫಾ ಅಂತರರಾಷ್ಟ್ರೀಯ ಆಸ್ಪತ್ರೆಗೆ ಸ್ಥಳಾಂತರಿಸಲು ಮತ್ತು ಸೆಪ್ಟೆಂಬರ್ 16 ರವರೆಗೆ ಅಲ್ಲಿಯೇ ಇರಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ ಎಂದು ತಿಳಿಸಿದ್ದಾರೆ.
ಖಾನ್ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ವೈದ್ಯಕೀಯ ಮಂಡಳಿಯನ್ನು ರಚಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಪಿಟಿಐ ನಾಯಕನ ವೈಯಕ್ತಿಕ ವೈದ್ಯೆ ಮತ್ತು ಅವರ ಸಹೋದರಿಯಾದ ಡಾ. ಉಜ್ಮಾ ಖಾನ್ ಇದರಲ್ಲಿ ಭಾಗಿಯಾಗಲಿದ್ದಾರೆ.
ಖಾನ್ ಅವರ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಬೇಡಿ. ಈ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಖಾನ್ ಅವರ ವಕೀಲರು ಮತ್ತು ಅವರ ಕುಟುಂಬಕ್ಕೆ ಕೋರ್ಟ್ ನಿರ್ದೇಶಿಸಿದೆ. ಇದನ್ನೂ ಓದಿ: ಏನಿದು ಮುಸ್ಲಿಂ ನ್ಯಾಟೋ? ಈಗ ಸಹಿ ಹಾಕಿದ್ದು ಯಾಕೆ? ಭಾರತಕ್ಕೆ ಆತಂಕ ಏನು?
73 ವರ್ಷದ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿಯಾಗಿರುವ ಇಮ್ರಾನ್ ಕಾನ್ 2022 ರಲ್ಲಿ ಪದಚ್ಯುತಗೊಂಡಿದ್ದರು. ನಂತರ ರಾಜಕೀಯ ಪ್ರೇರಿತವಾದ ಹಲವಾರು ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರು. 2023ರ ಆಗಸ್ಟ್‌ನಿಂದಲೂ ಜೈಲಿನಲ್ಲಿದ್ದಾರೆ.

