ಬಟರ್ ಗಾರ್ಲಿಕ್ ಸ್ಕ್ವಿಡ್ ರುಚಿಕರವಾದ ಸೀಫುಡ್. ಘಮಘನಿಸುವ ಈ ಅಡುಗೆ ಸ್ಕ್ವಿಡ್ ಅನ್ನು ಬೆಣ್ಣೆ ಮತ್ತು ಬೆಳ್ಳುಳ್ಳಿಯಲ್ಲಿ ಬೇಯಿಸಿ ಮಾಡಲಾಗುತ್ತದೆ. ಬಾಯಲ್ಲಿ ನೀರೂರಿಸೋ ಈ ಸಿಂಪಲ್ ಅಡುಗೆ ಅನ್ನ ಅಥವಾ ಪಾಸ್ತಾದೊಂದಿಗೆ ಬಡಿಸಬಹುದು. ನೀವು ಕೂಡಾ ಮನೆಯಲ್ಲಿ ಬಟರ್ ಗಾರ್ಲಿಕ್ ಸ್ಕ್ವಿಡ್ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಸ್ಕ್ವಿಡ್ – ಅರ್ಧ ಕೆಜಿ
ಬೆಣ್ಣೆ – 4 ಟೀಸ್ಪೂನ್
ಕೊಚ್ಚಿದ ಬೆಳ್ಳುಳ್ಳಿ – 4
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಾದಕ್ಕನುಸಾರ
ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮಟನ್ ರೆಜಾಲಾ – ಕೋಲ್ಕತ್ತಾದ ಐಕಾನಿಕ್ ಫುಡ್ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸ್ಕ್ವಿಡ್ ಮೀನುಗಳನ್ನು ಸ್ವಚ್ಛಗೊಳಿಸಿ, ಉಂಗುರಾಕಾರದಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
* ಒಂದು ದೊಡ್ಡ ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ತುಪ್ಪ ಬಿಸಿ ಮಾಡಿ.
* ಅದಕ್ಕೆ ಕೊಚ್ಚಿದ ಬೆಳ್ಳುಳ್ಳಿ ಸೇರಿಸಿ, ಪರಿಮಳ ಬರುವವರೆಗೆ ಹುರಿದುಕೊಳ್ಳಿ.
* ಬಳಿಕ ಸ್ಕ್ವಿಡ್ ತುಂಡುಗಳನ್ನು ಅದಕ್ಕೆ ಸೇರಿಸಿ, ಅದು ಅರೆಪಾರದರ್ಶಕವಾಗುವವರೆಗೆ ಹಾಗೂ ಮೃದುವಾಗುವವರೆಗೆ ಸುಮಾರು 2-3 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
* ನಂತರ ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸಿನ ಪುಡಿ ಸೇರಿಸಿ.
* ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
* ಇದೀಗ ಸಿಂಪಲ್ ಬಟರ್ ಗಾರ್ಲಿಕ್ ಸ್ಕ್ವಿಡ್ ತಯಾರಾಗಿದ್ದು, ಅನ್ನ ಅಥವಾ ಪಾಸ್ತಾದೊಂದಿಗೆ ಬಡಿಸಿ. ಇದನ್ನೂ ಓದಿ: ಬೆಂಗಾಲಿ ಮಟನ್ ಕರಿ ‘ಕೋಶಾ ಮಾಂಗ್ಶೋ’ ಟ್ರೈ ಮಾಡಿ
Advertisement
Web Stories