ಮೊಘಲರಿಂದ ಸ್ಫೂರ್ತಿ ಪಡೆದ ಮತ್ತು ಕೋಲ್ಕತ್ತಾದಾದ್ಯಂತ ಹಳೆಯ ಹೋಟೆಲುಗಳಲ್ಲಿ ಅತ್ಯಂತ ಫೇಮಸ್ ಆಗಿರುವ ಅದ್ಭುತ ನಾನ್‌ವೆಜ್ ಖಾದ್ಯ ಮಟನ್ ರೆಜಾಲಾ ಎಲ್ಲಾ ಸಂದರ್ಭಗಳಲ್ಲಿಯೂ ಸವಿಯುವ ಭಕ್ಷ್ಯವಾಗಿದೆ. ಬಂಗಾಳದ ಐಕಾನಿಕ್ ಆಹಾರವಾದ ಇದನ್ನು ಮೊಸರು, ಈರುಳ್ಳಿಯ ಗ್ರೇವಿಯೊಂದಿಗೆ ಮಟನ್ ಅನ್ನು ಬೇಯಿಸಿ ತಯಾರಿಸಲಾಗುತ್ತದೆ. ಅರಿಶಿನ ಸೇರಿಸದೇ ತಯಾರಿಸಲಾಗುವ ಈ ರೆಸಿಪಿ ವಿಭಿನ್ನ ರುಚಿಯನ್ನು ನೀಡುತ್ತದೆ. ಮನೆಯಲ್ಲಿ ಯಾವಾಗಲೂ ಭಿನ್ನ ವಿಭಿನ್ನ ನಾನ್‌ವೆಜ್ ರೆಸಿಪಿಗಳನ್ನು ಮಾಡಲಿಚ್ಛಿಸುವವರು ಮಟನ್ ರೆಜಾಲಾ ಒಂದು ಬಾರಿ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮಟನ್ – 1 ಕೆಜಿ
ಸಣ್ಣಗೆ ಹೆಚ್ಚಿದ ಈರುಳ್ಳಿ – 2
ಕರಗಿಸಿದ ಬೆಣ್ಣೆ – 100 ಗ್ರಾಂ
ಲವಂಗ – 2
ಏಲಕ್ಕಿ – 3
ದಾಲ್ಚಿನ್ನಿ ಚಕ್ಕೆ – 1 ಇಂಚು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಮೊಸರು – 250 ಗ್ರಾಂ
ತೆಂಗಿನಕಾಯಿ ಪೇಸ್ಟ್ – 2 ಟೀಸ್ಪೂನ್
ಗೋಡಂಬಿ ಪೇಸ್ಟ್ – 2 ಟೀಸ್ಪೂನ್
ಗಸಗಸೆ – 1 ಟೀಸ್ಪೂನ್
ಹಾಲು – 3 ಕಪ್
ಕಮಲದ ಬೀಜಗಳು – ಕೆಲವು
ಕೆಂಪು ಮೆಣಸಿನಕಾಯಿ – 2
ಬಿರಿಯಾನಿ ಮಸಾಲಾ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಬೆಂಗಾಲಿ ಮಟನ್ ಕರಿ ‘ಕೋಶಾ ಮಾಂಗ್ಶೋ’ ಟ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕುಕ್ಕರ್‌ನಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಸೇರಿಸಿ 30 ಸೆಕೆಂಡುಗಳ ಕಾಲ ಹುರಿಯಿರಿ.
* ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಮೃದುವಾಗುವವರೆಗೆ ಹುರಿಯಿರಿ.
* ಈಗ ಮಟನ್ ಅನ್ನು ಸೇರಿಸಿ, ಸ್ವಲ್ಪ ಸಮಯ ಫ್ರೈ ಮಾಡಿ. ಸ್ವಲ್ಪ ನೀರು ಸೇರಿಸಿ, ಹಾಗೂ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ.
* ಒಂದು ಬಟ್ಟಲಿನಲ್ಲಿ ಮೊಸರು ಹಾಕಿ, ಅದು ನಯವಾಗುವತನಕ ಬೀಟ್ ಮಾಡಿ.
* ಬಳಿಕ ತೆಂಗಿನಕಾಯಿ ಪೇಸ್ಟ್, ಗೋಡಂಬಿ ಪೇಸ್ಟ್, ಗಸಗಸೆ ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಅದನ್ನು ಪಕ್ಕಕ್ಕೆ ಇರಿಸಿ.
* ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ 2 ಟೀಸ್ಪೂನ್ ಬೆಣ್ಣೆಯನ್ನು ಬಿಸಿ ಮಾಡಿ, 2 ಕಪ್ ಹಾಲು ಸುರಿಯಿರಿ. ತಕ್ಷಣ ವಿಸ್ಕರ್ ಬಳಸಿ ಬೆರೆಸಿ. ಯಾವುದೇ ಉಂಡೆಗಳಾಗದಂತೆ ಮಿಶ್ರಣ ಮಾಡಿ.
* ಅದಕ್ಕೆ ಮೊಸರಿನ ಮಿಶ್ರಣವನ್ನು ಸೇರಿಸಿ ಬೆರೆಸಿಕೊಳ್ಳಿ.
* ಈ ಮಿಶ್ರಣಕ್ಕೆ ಬೇಯಿಸಿದ ಮಾಂಸವನ್ನು ಸೇರಿಸಿ, ಮಸಾಲೆ ಮಾಂಸಕ್ಕೆ ಚೆನ್ನಾಗಿ ಹೀರಿಕೊಳ್ಳಲು ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.
* ಗ್ರೇವಿಯ ಆದ್ಯತೆಗೆ ಅನುಗುಣವಾಗಿ ಸ್ಥಿರತೆಯನ್ನು ಸರಿಹೊಂದಿಸಲು ಹೆಚ್ಚು ಹಾಲು ಸೇರಿಸಿ.
* ಈಗ ಅದಕ್ಕೆ ಬಿರಿಯಾನಿ ಮಸಾಲಾ ಸೇರಿಸಿ.
* ಗ್ರೇವಿಯಿಂದ ಬೆಣ್ಣೆ ಬೇರ್ಪಡುವವರೆಗೆ ಕುದಿಸಿ.
* ಇದೀಗ ರುಚಿಕರವಾದ ಕೋಲ್ಕತ್ತಾ ಶೈಲಿಯ ಬೆಂಗಾಲಿ ಮಟನ್ ರೆಜಾಲಾ ತಯಾರಾಗಿದ್ದು, ಅನ್ನ, ಚಪಾತಿ ಅಥವಾ ಯಾವುದೇ ಭಾರತೀಯ ಫ್ಲಾಟ್‌ಬ್ರೆಡ್‌ನೊಂದಿಗೆ ಆನಂದಿಸಿ. ಇದನ್ನೂ ಓದಿ: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಚೀಸೀ ಬ್ರೊಕಲಿ ಪಕೋಡಾ
Advertisement
Web Stories