ಮಟನ್ ಕೋಫ್ತಾ ಕರಿ ಇಂದು ಭಾರತೀಯ ನಾನ್‌ವೆಜ್ ರೆಸಿಪಿ. ಮಟನ್ ಖೀಮಾದ ಚೆಂಡುಗಳನ್ನು ಗರಿಗರಿಯಾಗಿ ಹುರಿದು ಬಳಿಕ ಮಸಾಲೆಯುಕ್ತ ಗ್ರೇವಿಯಲ್ಲಿ ಬೇಯಿಸೋ ಈ ಕೋಫ್ತಾ ಕರಿ ರೆಸಿಪಿ ಅನ್ನ ಅಥವಾ ರೋಟಿಯೊಂದಿಗೆ ಸವಿಯಲು ಪರ್ಫೆಕ್ಟ್ ಆಗಿದೆ. ಮಾಂಸದ ಚೆಂಡಿನ ಗರಿಗರಿಯಾದ ಹೊರ ಪದರ ಹಾಗೂ ಮೃದುವಾದ ಒಳ ಪದರದ ಸವಿ ನಾಲಿಗೆಗೆ ಮಜ ನೀಡುತ್ತದೆ. ಬಾಯಲ್ಲಿ ನೀರೂರಿಸೋ ಮಟನ್ ಕೋಫ್ತಾ ಕರಿ ರೆಸಿಪಿ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಮಟನ್ ಖೀಮಾ – ಅರ್ಧ ಕೆಜಿ
ಈರುಳ್ಳಿ – 1
ಕೊತ್ತಂಬರಿ ಸೊಪ್ಪು – 1 ಕಟ್ಟು
ಬೆಳ್ಳುಳ್ಳಿ – 3
ಹಸಿರು ಮೆಣಸಿನಕಾಯಿ – 4
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 2 ಟೀಸ್ಪೂನ್
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ಒಂದೂವರೆ ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಉಪ್ಪು – 3 ಟೀಸ್ಪೂನ್
ಚಾಟ್ ಮಸಾಲಾ ಪುಡಿ – 1 ಟೀಸ್ಪೂನ್
ಗರಂ ಮಸಾಲಾ ಪುಡಿ – 1 ಟೀಸ್ಪೂನ್
ಸಕ್ಕರೆ – 3 ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 1 ಟೀಸ್ಪೂನ್
ಎಣ್ಣೆ – ಅರ್ಧ ಕಪ್
ಗೋಡಂಬಿ – ಅರ್ಧ ಕಪ್ (30 ನಿಮಿಷ ನೀರಿನಲ್ಲಿ ನೆನೆಸಿಡಿ)
ಟೊಮೆಟೊ – 2
ಕಸೂರಿ ಮೇಥಿ – 2 ಟೀಸ್ಪೂನ್ ಇದನ್ನೂ ಓದಿ: ಸುಲಭದ ಎಗ್ ಕೀಮಾ ರೆಸಿಪಿ – ಫಟಾಫಟ್ ಅಂತ ಮಾಡ್ಬೋದು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಂಡು ಅದಕ್ಕೆ ಮಟನ್ ಕೀಮಾ ಬೆರೆಸಿ.
* ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ, ಗರಂ ಮಸಾಲಾ, 1 ಟೀಸ್ಪೂನ್ ಜೀರಿಗೆ ಪುಡಿ ಮತ್ತು 1 ಟೀಸ್ಪೂನ್ ಅರಿಶಿನ ಮತ್ತು ಕೊತ್ತಂಬರಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.
* ಇದೀಗ ಮಿಶ್ರಣವನ್ನು ಸುಮಾರು 30 ಸಣ್ಣ ಸಣ್ಣ ಉಂಡೆಗಳಾಗುವಂತೆ ಕಟ್ಟಿಕೊಳ್ಳಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮಧ್ಯಮ ಉರಿಯಲ್ಲಿ ಉಂಡೆಗಳನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಬಳಿಕ ಅದನ್ನು ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
* ಈಗ ಮಿಕ್ಸರ್ ಜಾರ್‌ನಲ್ಲಿ ನೆನೆಸಿಟ್ಟ ಗೋಡಂಬಿ, ಟೊಮೆಟೊ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ.
* ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಹೆಚ್ಚಿದ ಬೆಳ್ಳುಳ್ಳಿ ಫ್ರೈ ಮಾಡಿ.
* ಬಳಿಕ ಉಳಿದ 1 ಟೀಸ್ಪೂನ್ ಜೀರಿಗೆ ಪುಡಿ ಗೋಡಂಬಿ ಟೊಮೆಟೊ ಪೇಸ್ಟ್ ಹಾಗೂ 1 ಕಪ್ ನೀರು ಸೇರಿಸಿ ಮಿಶ್ರಣ ಮಾಡಿ.
* ನಂತರ ಉಳಿದ ಅರ್ಧ ಟೀಸ್ಪೂನ್ ಅರಿಶಿನ, ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಸಕ್ಕರೆಯನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಯಲು ಬಿಡಿ. ತಳ ಅಂಟಿಕೊಳ್ಳದಂತೆ ಆಗಾಗ ಕೈಯಾಡಿಸುತ್ತಿರಿ.
* ಮಿಶ್ರಣಕ್ಕೆ ಕಸೂರಿ ಮೇಥಿ ಸೇರಿಸಿ, ಕುದಿಯಲು ಪ್ರಾರಂಭವಾದಾಗ ಮಟನ್ ಉಂಡೆಗಳನ್ನು ಅದರಲ್ಲಿ ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
* ಇದೀಗ ರುಚಿಕರ ಮಟನ್ ಕೋಫ್ತಾ ಕರಿ ತಯಾರಾಗಿದ್ದು, ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ. ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ಆರ್ಡರ್ ಮಾಡೋ ಬದ್ಲು ಮನೆಯಲ್ಲೇ ಟ್ರೈ ಮಾಡಿ ಚಿಕನ್ ಷವರ್ಮಾ ಸಲಾಡ್
Advertisement