ಮುಂಬೈ: ಕಳೆದ ರಾತ್ರಿ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಮೌನಿ ರಾಯ್ ಪತಿ ಸೂರಜ್ ನಂಬಿಯಾರ್ಗೆ ಲಿಪ್ಲಾಕ್ ಮಾಡಿದ್ದಾರೆ.
View this post on Instagram
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ದಕ್ಷಿಣ ಭಾರತ ಮತ್ತು ಬಂಗಾಳಿ ಸಂಪ್ರದಾಯದಂತೆ ಗುರುವಾರ ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಳೆದ ರಾತ್ರಿ ಆಯೋಜಿಸಿದ ಸಂಗೀತ್ ಕಾರ್ಯಕ್ರಮದಲ್ಲಿ ನವ ಜೋಡಿ ಕುಣಿದು ಕುಪ್ಪಳಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ
View this post on Instagram
ಸದ್ಯ ಸಂಗೀತ್ ಕಾರ್ಯಕ್ರಮದ ಕೆಲವು ವೀಡಿಯೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವೀಡಿಯೋ ಒಂದರಲ್ಲಿ ಮೌನಿರಾಯ್ ಹಾಗೂ ಸೂರಜ್ ನಂಬಿಯಾರ್ ಕೇಕ್ ಕತ್ತರಿಸುವ ಮುನ್ನ ಲಿಪ್ಲಾಕ್ ಮಾಡಿದ್ದಾರೆ. ಇನ್ನೂ ಈ ವೇಳೆ ಮೌನಿ ರಾಯ್ ಅವರು ಪಚ್ಚೆ ಆಭರಣ ಹಾಗೂ ಗೋಲ್ಡನ್ ಕಲರ್ ಲೆಹೆಂಗಾ ತೊಟ್ಟಿದ್ದರೆ, ಸೂರಜ್ ನಂಬಿಯಾರ್ ರಾಯಲ್ ನೀಲಿ ಶೆರ್ವಾನಿಯಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್
View this post on Instagram
ಮತ್ತೊಂದು ವೀಡಿಯೋದಲ್ಲಿ ಮೌನಿ ರಾಯ್ ಅರ್ಜುನ್ ಬಿಜ್ಲಾನಿ, ರಾಹುಲ್, ಮನ್ಮೀತ್ ಸಿಂಗ್, ಪ್ರತೀಕ್ ಉಟೇಕರ್ ಮತ್ತು ಅಮಿತ್ ಕಪೂರ್ ಅವರೊಂದಿಗೆ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದ ದೋಸ್ತಾನಾ ಸಿನಿಮಾದ ಫೇಮಸ್ ಸಾಂಗ್ ದೇಸಿ ಗರ್ಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್
View this post on Instagram
ಇನ್ನೊಂದರಲ್ಲಿ ಮೌನಿ ರಾಯ್ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಮಾರಿ-2 ಸಿನಿಮಾದ ರೌಡಿ ಬೇಬಿ ಹಾಡಿಗೆ ಟಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ. ಹೀಗೆ ಇನ್ನೂ ಹಲವಾರು ವೀಡಿಯೋಗಳು ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೆಂಗಾಲಿ ಸಂಪ್ರದಾಯ ಮದುವೆಯ ಫೋಟೋ ಶೇರ್ ಮಾಡಿದ ಮೌನಿ ರಾಯ್