BollywoodCinemaLatestMain Post

ಬೆಂಗಾಲಿ ಸಂಪ್ರದಾಯ ಮದುವೆಯ ಫೋಟೋ ಶೇರ್ ಮಾಡಿದ ಮೌನಿ ರಾಯ್

ಮುಂಬೈ: ಬಾಲಿವುಡ್ ನಟಿ ಮೌನಿರಾಯ್ ತಮ್ಮ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಅವರೊಂದಿಗೆ ಗುರುವಾರ ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಬೆಂಗಾಲಿ ಸಂಪ್ರದಾಯದ ಮದುವೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

Mouni Roy

ಮೌನಿರಾಯ್ ಅವರು ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಸೂರಜ್ ಅವರು ಬೆಂಗಳೂರಿನ ಮೂಲದವರಾಗಿದ್ದಾರೆ. ಅಲ್ಲದೇ ದುಬೈನಲ್ಲಿ ಬ್ಯಾಂಕರ್ ಹಾಗೂ ಉದ್ಯಮಿಯಾಗಿದ್ದಾರೆ. ಜನವರಿ 27ರಂದು ಮೌನಿರಾಯ್ ಅವರು ಬೆಳಗ್ಗೆ ಮಲಯಾಳಿ ಸಂಪ್ರದಾಯದಂತೆ ವಿವಾಹವಾಗಿದ್ದರು. ನಂತರ ಸಂಜೆ ಬಂಗಾಳಿ ಸಂಪ್ರದಾಯದ ಪ್ರಕಾರ ಮದುವೆಯಾದರು. ಇದೀಗ ಮೌನಿರಾಯ್ ಬಂಗಾಳಿ ಸಂಪ್ರದಾಯದ ವಿವಾಹದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಇಬ್ಬರೂ ಸಂಪ್ರದಾಯಿಕ ಉಡುಗೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋದಲ್ಲಿ ಸೂರಜ್ ಮೌನಿರಾಯ್ ಜೊತೆಗೆ ಕುಳಿತುಕೊಂಡಿರು, ಸಿಂಧೂರ ಇಡುತ್ತಿರುವ, ಚುಂಬಿಸುತ್ತಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೌನಿರಾಯ್

Mouni Roy

ಗೋವಾದ ಕ್ಯಾಂಡೋಲಿಮ್‍ನಲ್ಲಿರುವ ಹಿಲ್ಟನ್ ಗೋವಾ ರೆಸಾರ್ಟ್‍ನಲ್ಲಿ ಗುರುವಾರ ಬೆಳಗ್ಗೆ ಮಾಲಯಳಂ ಸಂಪ್ರದಾಯದಂತೆ ಸೂರಜ್ ನಂಬಿಯಾರ್ ಅವರೊಂದಿಗೆ ಮದುವೆಯಾಗಿದ್ದ ಮೌನಿ ರಾಯ್ ಅವರು ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಫೋಟೋದಲ್ಲಿ ಮೌನಿರಾಯ್ ಅವರು ಕೆಂಪು ಮತ್ತು ಚಿನ್ನದ ಕಸೂತಿ ಹೊಂದಿರುವ ಬಿಳಿ ಸೀರೆ ಮತ್ತು ಕಾಂಟ್ರಾಸ್ಟ್ ಕೆಂಪು ಕುಪ್ಪಸವನ್ನು ಧರಿಸಿದ್ದು, ದಕ್ಷಿಣ ಭಾರತದ ಸಂಪ್ರದಾಯಿಕ ಆಭರಣಗಳಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್

 

View this post on Instagram

 

A post shared by mon (@imouniroy)

ಮೌನಿ ರಾಯ್ ಅವರು ಮೊದಲ ಬಾರಿಗೆ ಸೂರಜ್ ನಂಬಿಯಾರ್ ಅವರನ್ನು ದುಬೈನಲ್ಲಿ ಭೇಟಿಯಾದರು. ನಂತರ ಇಬ್ಬರು ಡೇಟಿಂಗ್ ಪ್ರಾರಂಭಿಸಿದರು. ಇಬ್ಬರು ಇಷ್ಟಪಡಲು ಆರಂಭಿಸಿದರು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

Leave a Reply

Your email address will not be published.

Back to top button