ಮುಂಬೈ: ಬಾಲಿವುಡ್ ಕಿರುತೆರೆಯಲ್ಲಿ ನಾಗಿಣಿ ಎಂದೇ ಖ್ಯಾತಿವೊಂದಿರುವ ಮೌನಿ ರಾಯ್ ಅರಿಶಿನ ಶಾಸ್ತ್ರ ಅದ್ದೂರಿಯಾಗಿ ನಡೆಯುತ್ತಿದೆ.
ಮೌನಿ, ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗಿನ ಸಪ್ತಪದಿ ತುಳಿಯಲು ರೆಡಿಯಾಗಿದ್ದು, ಇಂದು ಮೌನಿ ಅದ್ದೂರಿಯಾಗಿ ಹಲ್ದಿ ಮತ್ತು ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಈ ಸಮಾರಂಭದ ಅಮೂಲ್ಯ ಕ್ಷಣಗಳನ್ನು ನಾಗಿಣಿ ಧಾರವಾಹಿಯ ಸಹನಟ ಅರ್ಜುನ್ ಬಿಜ್ಲಾನಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಮೌನಿರಾಯ್ ಬ್ಯಾಚುಲರ್ ಪಾರ್ಟಿ
Advertisement
Advertisement
ಹಲ್ದಿ ಮತ್ತು ಮೆಹಂದಿ ಶಾಸ್ತ್ರದ ಫೋಟೋಗಳನ್ನು ಜಿಯಾ ಮುಸ್ತಫಾ ಮತ್ತು ಓಂಕಾರ್ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೇ ಜನವರಿ 27 ರಂದು ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಗೋವಾದಲ್ಲಿ ವಿವಾಹವಾಗಲಿದ್ದಾರೆ.
Advertisement
Advertisement
ಇತ್ತೀಚೆಗೆ ಮೌನಿ ಗೋವಾದಲ್ಲಿ ಬ್ಯಾಚುಲರ್ ಪಾರ್ಟಿ ಮಾಡಿದ್ದು, ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಮೌನಿ ತನ್ನ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದಾರೆ. ಅದ್ಭುತವಾದ ಡ್ಯಾನ್ಸರ್ ಆಗಿರುವ ಮೌನಿ ಹಿಂದಿ ಕಿರುತೆರೆಯಲ್ಲಿ ಫುಲ್ ಫೇಮಸ್ ಆಗಿದ್ದು, ದೇವೊನ್ ಕೆ ದೇವ್ ಮಹಾದೇವ್, ಕಸ್ತೂರಿ, ಮತ್ತು ನಾಗಿನ್ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದರು. ಅದು ಅಲ್ಲದೇ ಅವರು ರಿಯಾಲಿಟಿ ಶೋ ಗಳಲ್ಲಿಯೂ ಭಾಗವಹಿಸಿದ್ದರು. ಇದನ್ನೂ ಓದಿ: ದೈಹಿಕ ಅನ್ಯೋನ್ಯತೆ ಸಂಬಂಧದ ಪ್ರಮುಖ ಭಾಗವಲ್ಲ: ದೀಪಿಕಾ ಪಡುಕೋಣೆ
ಸಿನಿಮಾದಲ್ಲಿಯೂ ನಟಿಸಿರುವ ಇವರು, 2018ರ ಕ್ರೀಡೆಗೆ ಸಂಬಂಧಿಸಿದ ಸಿನಿಮಾ ‘ಗೋಲ್ಡ್’ ನಲ್ಲಿ ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ನಟಿಸಿದ್ದಾರೆ. ‘ಮೇಡ್ ಇನ್ ಚೈನಾ’ ಸಿನಿಮಾದಲ್ಲಿ ರಾಜಕುಮಾರ್ ರಾವ್ ಜೊತೆ ನಟಿಸಿದ್ದಾರೆ. ಪ್ರಸ್ತುತ ಮೌನಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದು, ಅದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.